ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕಾವ್ಯಾ ಗೌಡ! ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡು ಕಾವ್ಯಾ ಗೌಡ. ಡಬಲ್ ಸಂಭ್ರಮವೋ ಸಂಭ್ರಮ.... ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡು ಕಾವ್ಯಾ ಗೌಡ. ಡಬಲ್ ಸಂಭ್ರಮವೋ ಸಂಭ್ರಮ.... 'ಪ್ಯಾಟೆ ಮಂದು ಕಾಡಿಗೆ ಬಂದ್ರು' ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ಕಾವ್ಯಾ ಗೌಡ ರಾಧಾ ಮಿಸ್‌ ಎಂದೇ ಖ್ಯಾತಿ ಪಡೆದರು. ಗಾಂಧಾರಿ, ಶುಭ ವಿವಾಹ ಮತ್ತು ರಾಧಾ ರಮಣ ಸೀರಿಯಲ್‌ನಲ್ಲಿ ಮಿಂಚಿದರು. ಅಲ್ಲದೆ ಸಾಕಷ್ಟು ಖಾಸಗಿ ಬ್ರ್ಯಾಂಡ್‌ಗಳ ಖಾಹೀರಾತುಗಳಲ್ಲಿ ಮಿಂಚಿದ್ದರು. 2021ರಲ್ಲಿ ಉದ್ಯಮಿ ಸೋಮಶೇಖರ್‌ಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಕಾವ್ಯಾ ಗೌಡ ಬಣ್ಣದ ಪ್ರಪಂಚಕ್ಕೆ ಗುಡ್‌ ಬೈ ಹೇಳಿಬಿಟ್ಟರು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ದಿನವೇ ಮುದ್ದಾಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 22.01.2024 ರಾತ್ರಿ ಪೋಸ್ಟ್‌ ಹಾಕಿದ್ದರು. ನಮ್ಮ ಜೀವನದ ಅತಿ ಖುಷಿಯಾದ ಕ್ಷಣವನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೀವಿ. ನಮ್ಮ ಹೆಣ್ಣು ಮಗುವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ' 'ಈ ಜರ್ನಿಯಲ್ಲಿ ನೀವೆಲ್ಲರೂ ತೋರಿಸಿದ ಪ್ರೀತಿ ಮತ್ತು ಸಪೋರ್ಟ್‌ಗೆ ವಂದನೆಗಳು. ನಿಮ್ಮ ಚಿಂತನೆಗಳು ಮತ್ತು ಪ್ರಾರ್ಥನೆಗಳು ನಮಗೆ ಮುಖ್ಯವಾಗಿತ್ತು' ಎಂದು ಕಾವ್ಯಾ ಖಾತೆಯಲ್ಲಿ ಪತಿ ಪೋಸ್ಟ್‌ ಮಾಡಿದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾವ್ಯಾ ಗೌಡ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಸಿನಿಮಾ ತಾರೆಯರು ಭಾಗಿಯಾಗಿದ್ದರು. ಕಾವ್ಯಾ ಗೌಡ ಸಹೋದರಿ ಭವ್ಯಾ ಗೌಡ ಕೂಡ ಪ್ರೆಗ್ನೆಂಟ್ ಆಗಿದ್ದು. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಾವ್ಯಾ ಗೌಡ ಸೀಮಂತದ ದಿನವೇ ಅವರು ಕೂಡ ಸಿಹಿ ಸುದ್ದಿ ರಿವೀಲ್ ಮಾಡಿದ್ದರು.