ಕಿರುತೆರೆ ನಟಿ ಶಮಾ ಸಿಕಂದರ್ ಬೋಲ್ಡ್‌ ಲುಕ್‌ಗೆ ಫ್ಯಾನ್‌ ಫಿದಾ ಟಿವಿಯ ಪರಿಚಿತ ಮುಖಗಳಲ್ಲಿ ನಟಿ ಶಮಾ ಸಿಕಂದರ್ ಒಬ್ಬರು ಅವರು ಸೋನಿ ಟಿವಿ ಶೋ "ಯೇ ಮೇರಿ ಲೈಫ್ ಹೈ ಮೂಲಕ ಎಲ್ಲರ ಮನೆಮಾತಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುವ ಶಮಾ ಸಿಕಂದರ್‌ ಅವರ ಕೆಲವು ಬೋಲ್ಡ್‌ ಲುಕ್‌ ಇಲ್ಲಿದೆ ಟಿವಿಯ ಪರಿಚಿತ ಮುಖಗಳಲ್ಲಿ ನಟಿ ಶಮಾ ಸಿಕಂದರ್ ಒಬ್ಬರು ಅವರು ಸೋನಿ ಟಿವಿ ಶೋ "ಯೇ ಮೇರಿ ಲೈಫ್ ಹೈ ಮೂಲಕ ಎಲ್ಲರ ಮನೆಮಾತಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುವ ಶಮಾ ಸಿಕಂದರ್‌ ಅವರ ಕೆಲವು ಬೋಲ್ಡ್‌ ಲುಕ್‌ ಇಲ್ಲಿದೆ ಶಮಾ ಅವರ ಪೂರ್ಣ ಹೆಸರು ಶಮಾ ಸಿಕಂದರ್ ಅಲಿ ಗೆಸಾವತ್. ಮೂಲತಃ ರಾಜಸ್ಥಾನದವರು. ಶಮಾ ತಮ್ಮ 9 ನೇ ವಯಸ್ಸಿನಲ್ಲಿ, ಅವರ ಕುಟುಂಬ ಜೊತೆ ಮುಂಬೈಗೆ ಸ್ಥಳಾಂತರಗೊಂಡರು. ಮುಂಬೈನಲ್ಲಿ ತನ್ನ ಆರಂಭಿಕ ವರ್ಷಗಳು ಅತ್ಯಂತ ಕಷ್ಟಕರವಾಗಿತ್ತು.ಕೆಲವೊಮ್ಮೆ ಕುಟುಂಬವನ್ನು ಪೋಷಿಸಲು ಮನೆಯಲ್ಲಿ ಯಾವುದೇ ಆಹಾರ ಇರಲಿಲ್ಲ ಎಂದು ಶಮಾ ಸಂದರ್ಶನಗಳಲ್ಲಿ ಉಲ್ಲೇಖಿಸಿದ್ದಾರೆ. ಮುಂಬೈನ ವಿವಿಧ ಭಾಗಗಳಲ್ಲಿ ಆರಂಭಿಕ ವ್ಯಾಸಂಗ ಮಾಡಿದ ಶಮಾ ಮಾಧ್ಯಮಿಕ ಶಿಕ್ಷಣದ ನಂತರ 1995ರಲ್ಲಿ ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್‌ ಪದವಿ ಪಡೆದರು. ಇವರು ತಮ್ಮ ಹದಿನಾರನೇ ವಯಸ್ಸಿನಲ್ಲೇ ಹಿಂದಿ ಸಿನಿಮಾ ಪ್ರೇಮ್‌ ಅಗ್ಗನ್‌ ಮೂಲಕ ಕೆರಿಯರ್‌ ಶುರು ಮಾಡಿದರು.1999 ರ ಆಮೀರ್ ಖಾನ್ ಚಿತ್ರ ಮನ್‌ನಲ್ಲಿ ನಟಿಸಿರುವ ಶಮಾ ಸಿಕಂದರ್‌ ಅವರು ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಸೋನಿ ಟಿವಿ ಶೋ "ಯೇ ಮೇರಿ ಲೈಫ್ ಹೈ ನಲ್ಲಿನ ಪೂಜಾ ಪಾತ್ರದಲ್ಲಿ ಹೆಸರುವಾಸಿಯಾದ ಶಮಾ ಕಿರುಚಿತ್ರ ಸೆಕ್ಸಾಹೋಲಿಕ್ ಮತ್ತು ಕಿರು-ಸರಣಿ ಮಾಯಾ: ಸ್ಲೇವ್‌ ಅಫ್‌ ಹರ್‌ ಡಿಸೈರ್‌ಗಳಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಆಕೆಯ ಕೊನೆಯ ಥಿಯೇಟ್ರಿಕಲ್ ಬಿಡುಗಡೆ, ಬಾಲಿವುಡ್ ಥ್ರಿಲ್ಲರ್ ಬೈಪಾಸ್ ರೋಡ್. ಶಮಾ ಕೊನೆಯ ಬಾರಿಗೆ ಸಂಗೀತ ವೀಡಿಯೊ ಹವಾ ಕರ್ದಾದಲ್ಲಿ ಕಾಣಿಸಿಕೊಂಡರು. ನಟನೆಯ ಜೊತೆ ನಿರ್ಮಾಣದ ಕಡೆಯೂ ತಮ್ಮ ಗಮನ ಹರಿಸಿದ ಶಮಾ ಅವರು 2017 ರಲ್ಲಿ ಸಿಕಂದರ್ ಫಿಲ್ಮ್ ಮತ್ತು ಟಿವಿ ನಿರ್ಮಾಣ ಕಂಪನಿ ಶಾಮಾ ಸಿಕಂದರ್ ಫಿಲ್ಮ್ಸ್ ಪ್ರೈ.ಲಿ. ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದಾರೆ. ಇದರ ಜೊತೆ ಶಮಾ ಅವರು ಉದ್ಯಮಿ ಕೂಡ ಹೌದು 2010ರಲ್ಲಿ ಶಮಾ ತನ್ನ ಮಹಿಳಾ ಉಡುಪುಗಳ ಫ್ಯಾಶನ್ ಲೇಬಲ್ ಸೈಶಾವನ್ನು ಮುಂಬೈ ಉಪನಗರ ಬಾಂದ್ರಾ ವೆಸ್ಟ್‌ನಲ್ಲಿ ಬಿಡುಗಡೆ ಮಾಡಿದರು, ದಿನದಿಂದ ದಿನಕ್ಕೆ ಫೋಟೋಗಳನ್ನು ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಶಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಫ್ಯಾನ್‌ ಅಭಿಮಾನಿಗಳ ಫಾಲೋಯಿಂಗ್ ಗಳಿಸಿದ್ದಾರೆ.