ಕಣ್ಣೋಟದಲ್ಲೇ ಪಡ್ಡೆಹೈಕ್ಳ ಹೃದಯ ಕದ್ದ ಸನ್ನಿ ಲಿಯೋನ್: ಬ್ಯಾಕ್​ಲೆಸ್ ಬ್ಲ್ಯಾಕ್ ಡ್ರೆಸ್​​ನಲ್ಲಿ ಬೇಬಿ ಡಾಲ್! ಬಾಲಿವುಡ್‌ ನಟಿ ಸನ್ನಿ ಲಿಯೋನ್ ಆಕರ್ಷಕವಾದ ಫೊಟೋಶೂಟ್ ಮಾಡಿಸಿಕೊಂಡಿದ್ದು ತುಂಬಾ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಅವರ ಲುಕ್ ಹೇಗಿದೆ ನೋಡಿ. ಬಾಲಿವುಡ್‌ ನಟಿ ಸನ್ನಿ ಲಿಯೋನ್ ಆಕರ್ಷಕವಾದ ಫೊಟೋಶೂಟ್ ಮಾಡಿಸಿಕೊಂಡಿದ್ದು ತುಂಬಾ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಅವರ ಲುಕ್ ಹೇಗಿದೆ ನೋಡಿ. ನಟಿ ಸನ್ನಿ ಲಿಯೋನ್ ಯುವಕರ ಫೇವರಿಟ್ ನಟಿ. ಈಗಲ್ಲ, ಹಿಂದಿನಿಂದಲೂ ಅವರು ಯೂತ್​ಗೆ ಹೆಚ್ಚು ಫೇವರಿಟ್. ಅವರು ವಿದೇಶದಿಂದ ಬಿಗ್​​ಬಾಸ್​ಗಾಗಿ ಭಾರತಕ್ಕೆ ಬಂದಾಗಲಂತೂ ಅವರ ಫೇಮ್ ಸಿಕ್ಕಾಪಟ್ಟೆ ಜಾಸ್ತಿಯಾಗಿತ್ತು. ಸದ್ಯ ಸನ್ನಿ ಲಿಯೋನ್ ರೀಸೆಂಟ್ ಆಗಿ ಫೋಟೋಶೂಟ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್ ಧರಿಸಿ ಅವರು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸನ್ನಿ ಲಿಯೋನ್ ಅವರು ಬ್ಲ್ಯಾಕ್ ಕಲರ್ ಬಾಡಿಕಾನ್ ಡ್ರೆಸ್​ನಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅವರ ಫಿಟ್ನೆಸ್ ಕೂಡಾ ಇಲ್ಲಿ ರಿವೀಲ್ ಆಗಿದೆ. ಕೈಯಲ್ಲಿ ಗೋಲ್ಡ್ ಶೇಡ್ ಬಳೆಗಳನ್ನು ಧರಿಸಿಕೊಂಡು ಕೂದಲನ್ನು ಮೇಲೆ ಎತ್ತಿ ಕಟ್ಟಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಬ್ಲ್ಯಾಕ್ ಬ್ಯಾಕ್‌ಲೆಸ್ ಡ್ರೆಸ್ ಸನ್ನಿ ಲಿಯೋನ್​ಗೆ ತುಂಬಾ ಚೆನ್ನಾಗಿ ಕಾಣಿಸಿದ್ದು, ಕ್ಯಾಮೆರಾಗೆ ಅವರು ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಸನ್ನಿ ಲಿಯೋನ್ ಅವರ ಫೋಟೋಗೆ ನೆಟ್ಟಿಗರು ಸೂಪರ್, ಹಾಟ್ ಬ್ಯೂಟಿ ಎಂದು ಕಮೆಂಟ್ ಮಾಡಿ ಹೊಗಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಕಾಲಿಡುವ ತಯಾರಿಯಲ್ಲಿರುವ ಸನ್ನಿ ಲಿಯೋನ್‌, ಈ ವರ್ಷ ರಂಗೀಲಾ ಎನ್ನುವ ಸಿನಿಮಾದೊಂದಿಗೆ ಕೇರಳ ಸಿನಿ ಇಂಡಸ್ಟ್ರಿಗೆ ಕಾಲಿಡಲಿದ್ದಾರೆ. ಸನ್ನಿ ಲಿಯೋನ್ ಈಗಾಗಲೇ ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆಯೇ 'ಲವ್‌ ಯು ಆಲಿಯಾ' ಹಾಗೂ ಡಿಕೆ ಸಿನಿಮಾದಲ್ಲಿ ಸ್ಪೆಷಲ್‌ ಹಾಡಿಗೆ ನೃತ್ಯ ಮಾಡುವ ಮೂಲಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ಸನ್ನಿ ಲಿಯೋನ್ ಅವರು ಕೊನೆಯ ಬಾರಿಗೆ ಅನುರಾಗ್ ಕಷ್ಯಪ್ ಅವರ ಕೆನಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಐಐಎಫ್​ಎನಲ್ಲಿ ಪ್ರೀಮಿಯರ್ ಶೋ ಆಗಿತ್ತು. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.