ಹಾಟ್ ಡ್ರೆಸ್ ಮೂಲಕವೇ ಸಂಚಲನ ಸೃಷ್ಟಿಸಿದ್ದ ಉರ್ಫಿ ಜಾವೇದ್ ಆಸ್ಪತ್ರೆ ದಾಖಲು! ಪ್ರತಿ ದಿನ ಹಾಟ್ ಅಂಡ್ ಬೋಲ್ಡ್ ಡ್ರೆಸ್ ಮೂಲಕವೇ ವೈರಲ್ ಆಗುತ್ತಿದ್ದ ಮಾಡೆಲ್ ಉರ್ಫಿ ಜಾವೇದ್ ಹೊಸ ವರ್ಷದ ಆರಂಭದಲ್ಲೇ ಆಸ್ಪತ್ರೆ ದಾಖಲಾಗಿದ್ದಾರೆ. ಉರ್ಫಿ ಫೋಟೋ ವೈರಲ್ ಆಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ. ಪ್ರತಿ ದಿನ ಹಾಟ್ ಅಂಡ್ ಬೋಲ್ಡ್ ಡ್ರೆಸ್ ಮೂಲಕವೇ ವೈರಲ್ ಆಗುತ್ತಿದ್ದ ಮಾಡೆಲ್ ಉರ್ಫಿ ಜಾವೇದ್ ಹೊಸ ವರ್ಷದ ಆರಂಭದಲ್ಲೇ ಆಸ್ಪತ್ರೆ ದಾಖಲಾಗಿದ್ದಾರೆ. ಉರ್ಫಿ ಫೋಟೋ ವೈರಲ್ ಆಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ. ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ಪ್ರತಿ ದಿನ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳವ ಮೂಲಕ ಮೈಬಿಸಿ ಏರಿಸುತ್ತಿರುವುದು ಹೊಸದೇನಲ್ಲ. ಹಾಟ್ ಹಾಗೂ ಬೋಲ್ಡ್ ಡ್ರೆಸ್ ಮೂಲಕ ಹೊಸ ಲೋಕ ಸೃಷ್ಟಿಸಿದ್ದಾರೆ. ಕಳೆದ ವರ್ಷ ಉರ್ಫಿ ಜಾವೇಜ್ ಸಾಮಾಜಿಕ ಜಾಲತಾಣ ಖಾತೆ ಅಮಾನತಾಗುವ ಆಗುವ ಮೂಲಕ ಸಂಕಷ್ಟ ಎದುರಿಸಿದ್ದರು. ಇದೀಗ ಹೊಸ ವರ್ಷದ ಆರಂಭದಲ್ಲೇ ಉರ್ಫಿ ಆರೋಗ್ಯದಲ್ಲಿ ಏರುಪೇರಾಗಿದೆ. ಉರ್ಫಿ ಜಾವೇದ್ ಆಸ್ಪತ್ರೆ ದಾಖಲಾಗಿರವು ಕಾರಣ ಬಹಿರಂಗವಾಗಿಲ್ಲ. ಈ ಕುರಿತು ಫೋಟೋವವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಉರ್ಫಿ ಆಸ್ಪತ್ರೆಯಲ್ಲಿ ಮಲಗಿರುವ ಫೋಟೋ ಇದಾಗಿದೆ.ಆದರೆ ನಗುಮುಖದ ಮೂಲಕ ವಿಕ್ಟರಿ ಸಿಂಬಲ್ ತೋರಿಸಿರುವ ಉರ್ಫಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಅನ್ನೋ ಸೂಚನೆ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಉರ್ಫಿ ಜಾವೇದ್ ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಉರ್ಫಿಗೆ ಏನಾಗಿದೆ ಅನ್ನೋ ಆತಂಕ ಕೆಲ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಹಿಂದೆ ಉರ್ಫಿಗೆ ಗಂಟಲು ಹಾಗೂ ಗಂಟಲು ನಾಳದ ಸಮಸ್ಯೆ ಕುರಿತು ವರದಿಯಾಗಿತ್ತು. 2023ರಲ್ಲಿ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮ ಖಾತೆ ಅಮಾನತುಗೊಂಡಿತ್ತು. ಮಾರ್ಗಸೂಚಿ ಅನುಸರಿಸದ ಕಾರಣ ಖಾತೆಯನ್ನ ಅಮಾನತು ಮಾಡಲಾಗಿತ್ತು.