ಗುಡ್ ನ್ಯೂಸ್ ಕೊಟ್ಟ ಅಮಲಾ ಪೌಲ್; ಇದ್ಹೇಗಾಯ್ತು, ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ರಲ್ಲ ಎಂದ ಫ್ಯಾನ್ಸ್‌! ನಟಿ ಅಮಲಾ ಪೌಲ್‌, ಗರ್ಭಿಣಿಯಾಗಿದ್ದಾರೆ. ಈ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 'ನಾವೀಗ 1+1=3' ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಫ್ಯಾನ್ಸ್‌ ಮಾತ್ರ ನಿನ್ನೆ ಮೊನ್ನೆಯಷ್ಟೇ ಮದ್ವೆಯಾಗಿತ್ತಲ್ಲ ಅಂತ ಕಾಲೆಳೆದಿದ್ದಾರೆ. ನಟಿ ಅಮಲಾ ಪೌಲ್‌, ಗರ್ಭಿಣಿಯಾಗಿದ್ದಾರೆ. ಈ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 'ನಾವೀಗ 1+1=3' ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಫ್ಯಾನ್ಸ್‌ ಮಾತ್ರ ನಿನ್ನೆ ಮೊನ್ನೆಯಷ್ಟೇ ಮದ್ವೆಯಾಗಿತ್ತಲ್ಲ ಅಂತ ಕಾಲೆಳೆದಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಉದ್ಯಮಿ ಜಗತ್‌ ದೇಸಾಯಿ ಅವರನ್ನು ಮದುವೆಯಾಗಿರುವ ನಟಿ ಅಮಲಾ ಪೌಲ್‌, ಗರ್ಭಿಣಿಯಾಗಿದ್ದಾರೆ. ಈ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 'ನಾವೀಗ 1+1=3' ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡು ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಶುಭಾಶಯ ತಿಳಿಸಿದರೆ, ಇನ್ನು ಕೆಲವರು ನಿನ್ನೆ ಮೊನ್ನೆಯ ನವೆಂಬರ್‌ನಲ್ಲಿ ಅಮಲಾ ಪೌಲ್‌ ಜಗತ್ ದೇಸಾಯಿ ಜೊತೆ ಎರಡನೇ ವಿವಾಹವಾಗಿದ್ದರು. ಪಾರ್ಟಿಯೊಂದರಲ್ಲಿ ಜಗತ್‌ ಪ್ರಪೋಸ್ ಮಾಡುವ ವೀಡಿಯೋವನ್ನು ಅಮಲಾ ಹಂಚಿಕೊಂಡಿದ್ದರು. ಇದಾಗಿ ನವೆಂಬರ್‌ 5ರಂದು ದಿಢೀರ್‌ ಆಗಿ ಈ ಜೋಡಿಯ ಮದುವೆಯೂ ನಡೆದಿತ್ತು. ಕಳೆದ ವರ್ಷದ ಅಕ್ಟೋಬರ್ 26ರಂದು ಪಬ್‌ನಲ್ಲಿ ಜಗತ್ ದೇಸಾಯಿ ಅಮಲಾಗೆ ಪ್ರಪೋಸ್ ಮಾಡಿದ್ದರು. ಇದಾಗಿ ಒಂದೇ ವಾರದಲ್ಲಿ ಸರಳವಾಗಿ ಸುಂದರವಾಗಿ ಈ ಜೋಡಿಯ ಮದುವೆ ನೆರವೇರಿತ್ತು. ಕೇವಲ ಕುಟುಂಬ ಸದಸ್ಯರು, ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಚಿತ್ರರಂಗದವರು, ಫ್ಯಾನ್ಸ್ ಈ ಜೋಡಿಗೆ ಶುಭಾಶಯ ಕೋರಿದ್ರು. ಇದೀಗ ಮದುವೆಯಾಗಿ ಎರಡೇ ತಿಂಗಳಿಗೆ ಈ ಜೋಡಿ ಶುಭ ಸುದ್ದಿಯೊಂದನ್ನು ನೀಡಿದೆ. ಅಮಲಾ ತಾವು ಗರ್ಭಿಣಿ ಎಂಬುದನ್ನು ಹೇಳಿಕೊಂಡು ಸಂಭ್ರಮಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ 1+1=3 ಎಂಬ ಕ್ಯಾಪ್ಷನ್‌ ಬರೆದು, ಪತಿ ಜಗತ್‌ ದೇಸಾಯಿ ಜತೆಗಿನ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಇದೀಗ ಈ ಜೋಡಿಯ ಬಾಳಲ್ಲಿ ಮೂರನೇ ಅತಿಥಿಯ ಆಗಮನವಾಗುತ್ತಿದ್ದು, ಹೊಸ ವರ್ಷದ ಆರಂಭದಲ್ಲೇ ಕೆಲ ಫೋಟೋಶೂಟ್‌ ಮೂಲಕ ಈ ವಿಚಾರವನ್ನು ಅಮಲಾ ಪೌಲ್ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ, ಅಮಲಾ ಪೌಲ್‌ಗಿದು ಎರಡನೇ ಮದುವೆ. 2014ರಲ್ಲಿ ನಿರ್ದೇಶಕ ವಿಜಯ್‌ ಜತೆಗೆ ಅಮಲಾ ಮದುವೆಯಾಗಿತ್ತು. ಅದಾಗಿ ಮೂರು ವರ್ಷ ಈ ಜೋಡಿ ಜತೆಗಿತ್ತು. ನಂತರ ಕಾರಣಾಂತರಗಳಿಂದ 2017ರಲ್ಲಿ ಇಬ್ಬರೂ ದೂರವಾಗಿದ್ದರು. ಸಿನಿಮಾಗಳಲ್ಲಿ ಬಿಝಿಯಾಗಿದ್ದರು. ಕೇರಳ ಮೂಲದ ಅಮಲಾ, ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಕಾಲಿವುಡ್‌ನ ಮೈನಾ ಚಿತ್ರದ ನಂತರ ಅಮಲಾ ಹೆಚ್ಚು ಫೇಮಸ್ ಅದರು. ಆ ಬಳಿಕ ವಿಜಯ್‌, ಧನುಷ್‌, ವಿಕ್ರಮ್, ಸೂರ್ಯ ಹೀಗೆ ಹಲವು ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್‌ ನಟನೆಯ ಹೆಬ್ಬುಲಿ ಚಿತ್ರದಲ್ಲಿ ಅಮಲಾ ಪೌಲ್‌ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಟನೆ ಆರಂಭಿಸಿದರು.ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಮಲಾ, ಪ್ರತಿಯೊಂದು ವಿಚಾರವನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿರುತ್ತಾರೆ.