ಟೈಟ್​​ ಫಿಟ್​ ಕೆಂಪು ಡ್ರೆಸ್‌ನಲ್ಲಿ ಪಡ್ಡೆಹೈಕ್ಳ ನಿದ್ದೆಗೆಡಿಸಿದ ಜಾನ್ವಿ ಕಪೂರ್: ರೆಡ್ ಮಿರ್ಚಿಯಷ್ಟೇ ಸಖತ್ ಹಾಟ್ ಅನ್ನೋದಾ! ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ರೆಡ್ ಡ್ರೆಸ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಜಾನ್ವಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ರೆಡ್ ಡ್ರೆಸ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಜಾನ್ವಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ಸಿನಿಮಾಗಳ ಜೊತೆಗೆ ಸೋಷಿಯಲ್​ ಮೀಡಿಯಾದಲ್ಲೂ ಬಹಳ ಸಕ್ರಿಯರು. ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕಣ್ಮನ ಆವರಿಸುತ್ತಾರೆ. ಎಂದಿನಂತೆ ಜಾನ್ವಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸರಣಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಟೈಟ್​​ ಫಿಟ್​ ರೆಡ್​ ಬಾಡಿಕಾನ್​​ ಡ್ರೆಸ್​ ತೊಟ್ಟು ಕ್ಯಾಮರಾದೆದುರು ತಮ್ಮ ಬೆಡಗು ಪ್ರದರ್ಶಿಸಿದ್ದಾರೆ. ಕೆಂಪು ಡ್ರೆಸ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಜಾನ್ವಿ ಕಪೂರ್ ಹಾಟ್ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಮೈ ಮೇಲೆ ನೀರೆರಚಿದಂತೆ ವಿಭಿನ್ನ ಫೋಟೋಶೂಟ್​ ಮಾಡಿಸಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀದೇವಿ ಕಪೂರ್ ಪುತ್ರಿ ಜಾನ್ವಿ ತೆಲುಗಿಗೆ ಕಾಲಿಟ್ಟಿರೋದು ಗೊತ್ತೇ ಇದೆ. ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಬಣ್ಣ ಹಚ್ತಿದ್ದಾರೆ. ‘ದೇವರ’ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ ಜೋಡಿಯಾಗುವ ಮೂಲಕ ತೆಲುಗಿಗೆ ಜಾನ್ವಿ ಡೆಬ್ಯೂ ಮಾಡ್ತಿದ್ದಾರೆ. ಸೌತ್ ಸಿನಿ ಪ್ರಿಯರ ಮನಗೆಲ್ಲುತ್ತಾರಾ ಕಪೂರ್ ಕುಟುಂಬದ ಕುಡಿ? ಬಾಲಿವುಡ್ ಚಿತ್ರರಂಗ ಅಂತೂ ಕೈಹಿಡಿಯಲಿಲ್ಲ. ಟಾಲಿವುಡ್‌ನಲ್ಲಿಯಾದ್ರೂ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ. ನಟಿ ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆ ಇನ್​ಸ್ಟಾಗ್ರಾಮ್​​ ಒಂದರಲ್ಲೇ 23.2 ಮಿಲಿಯನ್​ ಫಾಲೋವರ್ಸ್ ಇದ್ದಾರೆ. ಈವರೆಗೆ ಶೇರ್ ಮಾಡಲಾಗಿರುವ ಪೋಸ್ಟ್​ಗಳ ಸಂಖ್ಯೆ 959. ಪ್ರತೀ ಪೋಸ್ಟ್​ಗಳೂ ಕೂಡ ಸಖತ್​ ಸದ್ದು ಮಾಡುತ್ತವೆ. ಅಭಿಮಾನಿಗಳ ಪ್ರೀತಿಗೆ ಪಾತ್ರವಾಗುತ್ತವೆ. ಇತ್ತೀಚೆಗಷ್ಟೇ ಸೀರೆಯುಟ್ಟು ಆಕರ್ಷಕ ನೋಟದಲ್ಲಿ ಕಾಣಿಸಿಕೊಂಡಿದ್ದರು. ಕ್ರಿಸ್ಮಸ್​ ಪೋಸ್ಟ್ ಸಹ ಶೇರ್ ಮಾಡಿದ್ದರು. ಇದೀಗ ಮನ ಸೆಳೆಯುವ ಚಿತ್ರಗಳನ್ನು ಹಂಚಿಕೊಂಡು ಸದ್ದು ಮಾಡಿದ್ದಾರೆ. ಹೊಸ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಮುಂದಿನ ಸಿನಿಮಾಗಳ ಅಪ್ಡೆಟ್​ ನೀಡುವಂತೆ ಫ್ಯಾನ್ಸ್ ಬೇಡಿಕೆ ಇಡುತ್ತಿದ್ದಾರೆ.