ಸೈಫ್‌ ಆಲಿ ಖಾನ್‌ ಹರೆಯದ ರಹಸ್ಯ, ಪ್ರೇಮ ಪುರಾಣ ಬಹಿರಂಗಪಡಿಸಿದ ತಾಯಿ ಶರ್ಮಿಳಾ ಟ್ಯಾಗೋರ್‌ ಫೇಮಸ್‌ ಸೆಲಬ್ರೆಟಿ ಟಾಕ್‌ ಶೋ ಕಾಫಿ ವಿತ್ ಕರಣ್ 8 ( 8) ನ ಮುಂಬರುವ ಸಂಚಿಕೆಯಲ್ಲಿ, ಸೈಫ್ ಅಲಿ ಖಾನ್ ( ) ಮತ್ತು ಅವರ ತಾಯಿ ಶರ್ಮಿಳಾ ಟ್ಯಾಗೋರ್ ( ) ಅವರು ಕಾಣಿಸಿಕೊಳ್ಳಲಿದ್ದಾರೆ. ಇದರ ಪ್ರೋಮೋ ಬಿಡುಗಡೆಯಾಗಿದ್ದು ಶರ್ಮಿಳಾ ಅವರು ತಮ್ಮ ಮಗ ಸೈಫ್‌ ಅವರ ಹರೆಯದ ರಹಸ್ಯಗಳು ಮತ್ತು ಪ್ರೇಮ ವ್ಯವಹಾರಗಳ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಫೇಮಸ್‌ ಸೆಲಬ್ರೆಟಿ ಟಾಕ್‌ ಶೋ ಕಾಫಿ ವಿತ್ ಕರಣ್ 8 ( 8) ನ ಮುಂಬರುವ ಸಂಚಿಕೆಯಲ್ಲಿ, ಸೈಫ್ ಅಲಿ ಖಾನ್ ( ) ಮತ್ತು ಅವರ ತಾಯಿ ಶರ್ಮಿಳಾ ಟ್ಯಾಗೋರ್ ( ) ಅವರು ಕಾಣಿಸಿಕೊಳ್ಳಲಿದ್ದಾರೆ. ಇದರ ಪ್ರೋಮೋ ಬಿಡುಗಡೆಯಾಗಿದ್ದು ಶರ್ಮಿಳಾ ಅವರು ತಮ್ಮ ಮಗ ಸೈಫ್‌ ಅವರ ಹರೆಯದ ರಹಸ್ಯಗಳು ಮತ್ತು ಪ್ರೇಮ ವ್ಯವಹಾರಗಳ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಕರಣ್ ಜೋಹರ್ ಆಯೋಜಿಸುವ ಜನಪ್ರಿಯ ಟಾಕ್ ಶೋ ಕಾಪೀ ವಿಥ್‌ ಕರಣ್‌ನಲ್ಲಿ ಸೈಫ್ ಅಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೋರ್ ಅವರು ಕಾಣಿಸಿಕೊಳ್ಳಲಿದ್ದಾರೆ. ತಾಯಿ-ಮಗ ಜೋಡಿಯು ತಮ್ಮ ಜೀವನದ ವಿವಿಧ ಅಂಶಗಳ ಮೇಲೆ ಬೆಳಕು ಚೆಲ್ಲುವ ಜೊತೆಗೆ ತಮಾಷೆ ಮತ್ತು ಪ್ರಾಮಾಣಿಕತೆಯ ಮಿಶ್ರಣಗಳ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ತಯಾರಕರು ಬಿಡುಗಡೆ ಮಾಡಿರುವ ಪ್ರೋಮೋ ತಾಯಿ ಮಗನ ಮುಂದಿನ ಸಂಚಿಕೆ ಸಖತ್‌ ಮನೋರಂಜನೆ ನೀಡುವ ಭರವಸೆಯನ್ನು ನೀಡುತ್ತದೆ. ಹೆಚ್ಚಿನ ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯವನ್ನು ತ್ಯಜಿಸುವ ಸೈಫ್‌ನ ನಿರ್ಧಾರದಿಂದ ಹಿಡಿದು ಶರ್ಮಿಳಾ ಅವರು ಆಗಾಗ್ಗೆ ತನ್ನ ಮಗನನ್ನು ಗದರುವವರೆಗೆ ಹಲವು ವಿಷಯಗಳ ಬಹಿರಂಗಪಡಿಸುವಿಕೆಗಳು ಹಗುರವಾದ ಹಾಸ್ಯದಿಂದ ಕೂಡಿವೆ ಶರ್ಮಿಳಾ ಮಗನ ಹದಿಹರೆಯದ ದಿನಗಳ ಬಗ್ಗೆ ಅನಾವರಣಗೊಳಿಸುವಾಗ ಸೈಫ್‌ ಅವರಲ್ಲಿ ಅಸಮಾಧಾನ ಸ್ಪಷ್ಟವಾಗಿ ಗೋಚರವಾಗುವುದು ಪ್ರೋಮೋದ ಒಂದು ಮುಖ್ಯ ಅಂಶವಾಗಿದೆ. ಕಾಫಿ ವಿತ್ ಕರಣ್ 8 ಮುಂದಿನ ಸಂಚಿಕೆಯಲ್ಲಿ ಸೈಫ್ ಅಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೋರ್ ಅವರ ಪ್ರಾಮಾಣಿಕ ಭಾಗವನ್ನು ವೀಕ್ಷಿಸಲು ಉತ್ಸುಕರಾಗಿರುವ ಅಭಿಮಾನಿಗಳ ನಿರೀಕ್ಷೆಯು ಹೆಚ್ಚಾಗುತ್ತಿದೆ.