ಬೇರೊಬ್ಬಳು ಬಾಲಿವುಡ್ ನಾಯಕಿಗೆ ಕೊಕ್ ಕೊಡಿಸಿ ಅನಿಮಲ್ 'ಗೀತಾಂಜಲಿ'ಯಾದ್ರಾ ರಶ್ಮಿಕಾ ಮಂದಣ್ಣ! ಅನಿಮಲ್ ಚಿತ್ರವು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್​' ಸಿನಿಮಾವನ್ನು ಕೆಲವರು ಕಟುವಾಗಿ ಟೀಕಿಸಿದ್ದಾರೆ. ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಜೋಡಿಯ 'ಅನಿಮಲ್' ಚಿತ್ರವು ಬಿಡುಗಡೆಯಾಗಿ ರೂ. 500 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಗೆಲುವು ದಾಖಲಿಸಿದೆ. ಈ ಚಿತ್ರದಲ್ಲಿ ನಟಿ ಅವರ 'ಗೀತಾಂಜಲಿ' ಪಾತ್ರವು ಬಹಳಷ್ಟು ಮೆಚ್ಚುಗೆ ಗಳಿಸಿದೆ. ಗೀತಾಂಜಲಿ ಪಾತ್ರಕ್ಕೆ ನಟಿ ರಶ್ಮಿಕಾ ಹೇಳಿ ಮಾಡಿಸಿದಷ್ಟು ಹೊಂದಾಣಿಕೆ ಆಗಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಸ್ವತಃ ರಶ್ಮಿಕಾಗೆ ಕೂಡ ಗೀತಾಂಜಲಿ ಪಾತ್ರ ಮಾಡಿರುವ ಬಗ್ಗೆ ಹೆಮ್ಮೆಯಿದೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಇದೀಗ, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿತ್ರದ ನಿರ್ದೇಶಕರಾದ ಸಂದೀಪ್​ ರೆಡ್ಡಿ ವಂಗಾ ( ) ಅವರು ಪಾತ್ರವರ್ಗದ ಆಯ್ಕೆ ಬಗ್ಗೆ ಮಾತನಾಡಿದ್ದಾರೆ. 'ಅನಿಮಲ್' ಸಿನಿಮಾ ಶೂಟಿಂಗ್​ ಶುರು ಆಗುವುದಕ್ಕಿಂತ ಒಂದೂವರೆ ವರ್ಷ ಮೊದಲೇ ರಶ್ಮಿಕಾ ಅಲ್ಲ, ಬೇರೊಬ್ಬ ನಟಿ ನಮ್ಮ ಚಿತ್ರಕ್ಕೆ ಸಹಿ ಮಾಡಿದ್ದರು. ಆದರೆ ಅವರಲ್ಲಿ ನನಗೆ ಗೀತಾಂಜಲಿ () ಪಾತ್ರ ಕಾಣಿಸಲಿಲ್ಲ' ಎಂದಿದ್ದಾರೆ. ಈ ಕಾರಣಕ್ಕೆ ನಾನು ತುಂಬಾ ಯೋಚಿಸಿ ನಟಿಯನ್ನು ಬದಲಾಯಿಸುವ ನಿರ್ಧಾರ ಮಾಡಿದೆ. ಆಗ ಸಿಕ್ಕಿದ್ದು ನಟಿ ರಶ್ಮಿಕಾ ಮಂದಣ್ಣ' ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಕೊನೆಗೂ ಮೌನ ಮುರಿದ ಶಾರುಖ್ ಖಾನ್; 4 ವರ್ಷದಿಂದ ಬಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಆಯ್ತು! ಮೂಲ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ ಎನಿಸಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಬೇಡಿಕೆಯ ಕಲಾವಿದೆಯಾಗಿ ಬೆಳೆದಿದ್ದಾರೆ. ರಶ್ಮಿಕಾ ಮಂದಣ್ಣಗೆ ( ) ಒಂದಕ್ಕಿಂತ ಮತ್ತೊಂದು ಉತ್ತಮವಾದ ಅವಕಾಶಗಳು ಸಿಗುತ್ತಿವೆ. ಅವರು ನಟಿಸಿದ ಎಲ್ಲ ಸಿನಿಮಾಗಳು ಗೆಲ್ಲುತ್ತಿವೆ. ಇದರಿಂದ ಅವರ ಖ್ಯಾತಿ ದಿನದಿನಕ್ಕೂ ಹೆಚ್ಚಾಗಿದೆ. ಇತ್ತೀಚೆಗೆ ತೆರೆಕಂಡ 'ಅನಿಮಲ್​' () ಸಿನಿಮಾದಲ್ಲಿ ರಣಬೀರ್​ ಕಪೂರ್​ ( ) ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಲೂನಾದಲ್ಲಿ ಓಡಾಡ್ತಾ ಇದ್ದವ್ನ ಲ್ಯಾಂಬೋರ್ಗಿನಿ ಹತ್ತಿಸಿದ್ರಿ; ಮಂಡ್ಯ ಫ್ಯಾನ್ಸ್‌ ರಿಯಾಕ್ಷನ್ ನೋಡಿ! ಅನಿಮಲ್ ಚಿತ್ರವು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್​' ಸಿನಿಮಾವನ್ನು ಕೆಲವರು ಕಟುವಾಗಿ ಟೀಕಿಸಿದ್ದಾರೆ. 'ಮಹಿಳೆಯರನ್ನು ಅವಹೇಳನ ಮಾಡುವಂತಹ ದೃಶ್ಯಗಳು ಮತ್ತು ಸಂಭಾಷಣೆಗಳು ಈ ಚಿತ್ರದಲ್ಲಿ ಇವೆ' ಎಂಬುದು ಹಲವರ ವಾದ. ವಾದವಿವಾದಗಳು ಏನೇ ಇದ್ದರೂ, ಸಿನಿಮಾದ ಗಳಿಕೆಗೆ ತೊಂದರೆ ಆಗಿಲ್ಲ. ಈ ಸಿನಿಮಾದ ಪಾತ್ರವರ್ಗದ ಆಯ್ಕೆ ಬಗ್ಗೆ ಸಂದೀಪ್​ ರೆಡ್ಡಿ ವಂಗಾ ಅವರು ಈಗ ಮಾಹಿತಿ ಹಂಚಿಕೊಂಡಿದ್ದಾರೆ. ಕೈ ಖಾಲಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ; ದಿ ಕಾಶ್ಮೀರ್ ಫೈಲ್ಸ್‌ ವಿವಾದಕ್ಕೆ ಸಿಕ್ಕ ಬಹುಮಾನವೇ? ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂದೀಪ್​ ರೆಡ್ಡಿ ವಂಗಾ ಅವರು ನಟಿ ಪರಿಣೀತಿ ಚೋಪ್ರಾ ( ) ಬಗ್ಗೆ ಮಾತನಾಡಿದ್ದಾರೆ. 'ಅನಿಮಲ್​ ಸಿನಿಮಾದ ಶೂಟಿಂಗ್​ ಶುರು ಆಗುವುದಕ್ಕಿಂತ ಒಂದೂವರೆ ವರ್ಷ ಮೊದಲೇ ಪರಿಣೀತಿ ಚೋಪ್ರಾ ಈ ಚಿತ್ರಕ್ಕೆ ಸಹಿ ಮಾಡಿದ್ದರು. ಆದರೆ ತಪ್ಪು ನನ್ನದೇ. ಅದಕ್ಕಾಗಿ ಅವರಿಗೆ ನಾನು ಕ್ಷಮೆ ಕೇಳಿದ್ದೇನೆ. ಅವರಲ್ಲಿ ನನಗೆ ಗೀತಾಂಜಲಿ ಪಾತ್ರ ಕಾಣಿಸಲಿಲ್ಲ. ಕೆಲವರಿಗೆ ಕೆಲವು ಪಾತ್ರಗಳು ಸೂಕ್ತ ಆಗುವುದಿಲ್ಲ' ಎಂದಿದ್ದಾರೆ ಸಂದೀಪ್​ ರೆಡ್ಡಿ ವಂಗಾ. ಸುಮಲತಾ ಎದುರೇ ಮಾಲಾಶ್ರೀ ಹೇಳಿದ್ರು; ಅಂಬರೀಷ್ ಜತೆ ಸುಮಲತಾ ಬಂದಾಗೆಲ್ಲ ಹೊಟ್ಟೆಕಿಚ್ಚು ಆಗ್ತಿತ್ತು..! 'ನನಗೆ ಆಡಿಷನ್​ ಮಾಡುವುದರಲ್ಲಿ ನಂಬಿಕೆ ಇಲ್ಲ. ಆ ಕ್ಷಣಕ್ಕೆ ನನಗೆ ಅನಿಸಿದ್ದನ್ನು ಮಾಡುತ್ತೇನೆ. ಮೊದಲಿಂದಲೂ ನನಗೆ ಪರಿಣೀತ ಚೋಪ್ರಾ ನಟನೆ ಇಷ್ಟ ಆಗಿತ್ತು. ಅವರ ಜೊತೆ ಸಿನಿಮಾ ಮಾಡಲು ನಾನು ಬಯಸಿದ್ದೆ. 'ಕಬೀರ್​ ಸಿಂಗ್​' ಸಿನಿಮಾಗೂ ಅವರೇ ನಾಯಕಿ ಆಗಬೇಕಿತ್ತು, ಆದರೆ ಸಾಧ್ಯವಾಗಿರಲಿಲ್ಲ. ಈ ಬಾರಿ ನಾನು ಅವರ ಬಳಿ ಕ್ಷಮೆ ಕೇಳಿದೆ. 'ಸಿನಿಮಾಗಿಂತಲೂ ದೊಡ್ಡದು ಯಾವುದೂ ಇಲ್ಲ, ಹಾಗಾಗಿ ನಾನು ನನ್ನ ಅನಿಮಲ್​ ಚಿತ್ರಕ್ಕೆ ಬೇರೆ ನಟಿಯನ್ನುಆಯ್ಕೆ ಮಾಡಿಕೊಳ್ಳುತ್ತೇನೆ' ಎಂದೆ. ಅವರಿಗೆ ಆಗ ಬೇಸರ ಆಯಿತು, ಆದರೆ ಆಮೇಲೆ ನನ್ನನ್ನು ಅರ್ಥ ಮಾಡಿಕೊಂಡರು' ಎಂದಿದ್ದಾರೆ ಸಂದೀಪ್​ ರೆಡ್ಡಿ ವಂಗಾ.