ಮೊಸರನ್ನ ತಿನ್ನುತ್ತಾ ಕ್ರಿಸ್‌ಮಸ್ ಶುಭಾಶಯ ತಿಳಿಸಿದ ರುಕ್ಮಿಣಿ ವಸಂತ್‌ಗೆ ನೆಟ್ಟಿಗರು ಹೀಗಾ ಅನ್ನೋದು! ಸ್ಯಾಂಡಲ್‌ವುಡ್‌ನ ನಟಿ ರುಕ್ಮಿಣಿ ವಸಂತ್ ಸದ್ಯ ತಮ್ಮ ಮನೆಯಲ್ಲಿ ಕ್ರಿಸ್‌ಮಸ್‌ ಹಬ್ಬದ ಸಂಭ್ರಮದಲ್ಲಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಬ್ರೇಕ್‌ ನೀಡಿರುವ ಅವರು ಹಬ್ಬಕ್ಕಾಗಿ ಬಿಡುವು ಮಾಡಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನ ನಟಿ ರುಕ್ಮಿಣಿ ವಸಂತ್ ಸದ್ಯ ತಮ್ಮ ಮನೆಯಲ್ಲಿ ಕ್ರಿಸ್‌ಮಸ್‌ ಹಬ್ಬದ ಸಂಭ್ರಮದಲ್ಲಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಬ್ರೇಕ್‌ ನೀಡಿರುವ ಅವರು ಹಬ್ಬಕ್ಕಾಗಿ ಬಿಡುವು ಮಾಡಿಕೊಂಡಿದ್ದಾರೆ. ರುಕ್ಮಿಣಿ ವಸಂತ್​ ಇವರ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬಿಡುಗಡೆ ಆದಾಗಿನಿಂದ ಈ ಚೆಲುವೆಯ ಹೆಸರೇ ಎಲ್ಲೆಡೆ ಕೇಳಿಬರುತ್ತಿದೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾ, ಅದ್ಭುತ ಅಭಿನಯದ ಮೂಲಕ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿಯಾಗಿದ್ದಾರೆ. 'ಬೀರಬಲ್​ ಟ್ರಯಾಲಜಿ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ಬೆಡಗಿ ಸದ್ಯ 'ಸಪ್ತ ಸಾಗರ'ದ ರಾಣಿಯಾಗಿ ಮಿಂಚುತ್ತಿದ್ದಾರೆ. ಗೋಲ್ಡನ್​ ಸ್ಟಾರ್​ ಗಣೇಶ್​ ಜೊತೆ 'ಬಾನ ದಾರಿಯಲಿ' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇದೀಗ ರುಕ್ಮಿಣಿ ವಸಂತ್ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ನನ್ನಿಂದ ಮತ್ತು ನನ್ನ ತಟ್ಟೆಯ ಮೊಸರನ್ನದಿಂದ ಕ್ರಿಸ್‌ಮಸ್ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ರುಕ್ಮಿಣಿ ವಸಂತ್ ಫೋಟೋಗಳಿಗೆ ನೆಟ್ಟಿಗರು, ನಿನ್ನನ್ನು ಪಡೆಯಲು ನಾನು ಏಳು ಸಾಗರಗಳನ್ನು ದಾಟಬಲ್ಲೆ, ನಿಮಗೂ ಮತ್ತು ನಿಮ್ಮ ಮೊಸರನ್ನ ತಟ್ಟೆಗೂ ಯೇಸು ಜನ್ಮಾಷ್ಟಮಿಯ ಶುಭಾಶಯಗಳು, ಹ್ಯಾಪಿ ಕ್ರಿಸ್‌ಮಸ್‌ ಪುಟ್ಟಿ, ಸಾಂತ ತಾತನು ಸಂತೆಯಲ್ಲಿ ಕಳೆದುಹೋಗುವ ಆ ನಿನ್ನ ನಗೆಯ ಕಂಡು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಹೇಮಂತ್ ರಾವ್​ ನಿರ್ದೇಶನದ ​'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟನೆಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ 'ಪುಟ್ಟಿ' ಪಾತ್ರವೇ ಈ ಹಿಂದೆ ಹೆಚ್ಚು ಸದ್ದು ಮಾಡಿತ್ತು. ಬಣ್ಣದ ಲೋಕದಲ್ಲಿ ಯಾರೂ ಯಾವಾಗ ಬೇಕಾದ್ರೂ ಸ್ಟಾರ್​ ಆಗಬಹುದು. ರಾತ್ರೋರಾತ್ರಿ ಸ್ಟಾರ್​ ಗಿರಿ ಪಟ್ಟ ಗಿಟ್ಟಿಸಿಕೊಂಡವರು ಅನೇಕರು. ಆ ಸಾಲಿನಲ್ಲಿ ರುಕ್ಮಿಣಿ ವಸಂತ್​ ಕೂಡ ಸೇರಿದ್ದಾರೆ.