ಬೀಚ್‌ಲ್ಲಿ ಸ್ಟೈಲಿಶ್ ಆಗಿ ಜಾಲಿ ಮಾಡೋದೇಗೆ ತೋರಿಸಿದ ಗಿಲ್ಲಿ ಬೆಡಗಿ ರಾಕುಲ್ ವಿಭಿನ್ನ ಫ್ಯಾಷನ್ ಸ್ಟೈಲ್‌ನಿಂದ ಸದಾ ಮಿಂಚುವ ರಾಕುಲ್ ಅವರು ಈಗ ಗೆಳತಿ ಮದುವೆಗಾಗಿ ಗೋವಾಗೆ ತೆರಳಿದ್ದು, ಅಲ್ಲಿನ ಬೀಚ್‌ನಲ್ಲಿ ತನ್ನ ಸ್ನೇಹಿತರ ಗ್ಯಾಂಗ್ ಜೊತೆ ಎಂಜಾಯ್ ಮಾಡ್ತಿದ್ದಾರೆ. ವಿಭಿನ್ನ ಫ್ಯಾಷನ್ ಸ್ಟೈಲ್‌ನಿಂದ ಸದಾ ಮಿಂಚುವ ರಾಕುಲ್ ಅವರು ಈಗ ಗೆಳತಿ ಮದುವೆಗಾಗಿ ಗೋವಾಗೆ ತೆರಳಿದ್ದು, ಅಲ್ಲಿನ ಬೀಚ್‌ನಲ್ಲಿ ತನ್ನ ಸ್ನೇಹಿತರ ಗ್ಯಾಂಗ್ ಜೊತೆ ಎಂಜಾಯ್ ಮಾಡ್ತಿದ್ದಾರೆ. ರಾಕುಲ್ ಪ್ರೀತ್ ಸಿಂಗ್ ಅವರು ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಕಾಲಿರಿಸಿ ಈಗ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ. ತಮ್ಮ ವಿಭಿನ್ನ ಫ್ಯಾಷನ್ ಸ್ಟೈಲ್‌ನಿಂದ ಸದಾ ಮಿಂಚುವ ರಾಕುಲ್ ಅವರು ಈಗ ಬೀಚ್‌ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದು, ಆ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ನಟಿ. ತಮ್ಮ ಗೆಳತಿಯರ ಗ್ಯಾಂಗ್ ಜೊತೆ ಎಂಜಾಯ್ ಮಾಡ್ತಿರುವ ಗಿಲ್ಲಿ ನಟಿ ಬೀಚ್‌ನಲ್ಲಿ ರಜಾ ದಿನಗಳನ್ನು ಹೇಗೆ ಸ್ಟೈಲಿಶ್ ಆಗಿ ಕಳೆಯಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದು, ಅವರ ಈ ಧರಿಸಿರುವ ಸ್ಕಾರ್ಫ್‌ ಧಿರಿಸು ಈಗ ಎಲ್ಲರ ಗಮನ ಸೆಳೆಯುತ್ತಿದೆ. ತನ್ನ ಸ್ನೇಹಿತೆಯೋರ್ವಳ ಮದುವೆಯಲ್ಲಿ ಭಾಗವಹಿಸುವುದಕ್ಕಾಗಿ ನಟಿ ರಾಕುಲ್ ಅವರು ಗೋವಾಗೆ ತೆರಳಿದ್ದು, ತನ್ನ ಲೇಡಿ ಗ್ಯಾಂಗ್ ಜೊತೆ ಎಂಜಾಯ್ ಮಾಡ್ತಿದ್ದಾರೆ ಈ ನಟಿ. ಗೋವಾ ಬೀಚ್‌ನಲ್ಲಿ ಎಂಜಾಯ್ ಮಾಡುವುದಕ್ಕಾಗಿ ಅವರು ಧರಿಸಿದ ಈ ಬೀಚ್‌ ಡ್ರೆಸ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಸೈಡ್ ಒಪನ್ ಆಗಿರುವ ಹೂಗಳ ಚಿತ್ತಾರದ ಈ ಗವನ್ ನೋಡುವುದಕ್ಕೂ ಸ್ಟೈಲಿಶ್ ಆಗಿರುವುದಲ್ಲದೇ ಬೀಚ್‌ನಲ್ಲಿ ಎಂಜಾಯ್ ಮಾಡುವುದಕ್ಕೂ ಆರಾಮದಾಯಕವೆನಿಸಿದೆ. ಜೀವನ ಒಂದು ತಂಗಾಳಿಯಂತೆ ಅದನ್ನು ತೆರೆದ ತೋಳುಗಳಿಂದ ಬರಮಾಡಿಕೊಳ್ಳಿ ಎಂದು ಬರೆದುಕೊಂಡಿರುವ ರಾಕುಲ್ ಅವರು ಜೊತೆಗೆ ಬೀಚ್‌ನಲ್ಲಿ ಸ್ನೇಹಿತರ ಗ್ಯಾಂಗ್ ಜೊತೆ ಎಂಜಾಯ್ ಮಾಡ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಟೈಲಿಶ್ ಉಡುಪಿನ ಜೊತೆ ಕಣ್ಣಿಗೆ ಕೂಲಿಂಗ್ ಗ್ಲಾಸ್ ಕೈಗೆ ಗೋಲ್ಡ್ ಕಲರ್ ಬ್ಯಾಂಡ್ ಕತ್ತಿಗೆ ಗೋವಾ ಸ್ಟೈಲ್ ನೆಕ್ಲೇಸ್ ಧರಿಸಿ ಮಿಂಚುತ್ತಿದ್ದು, ನೋಡುಗರು ಗಿಲ್ಲಿ ನಟಿಯ ಬೆಡಗಿಗೆ ಫಿದಾ ಆಗಿದ್ದಾರೆ. ಇನ್ನು ಸಿನಿಮಾ ವಿಷಯಗಳಿಗೆ ಬರುವುದಾದರೆ ರಾಕುಲ್ ಅವರು ನಟ ಶಿವಕಾರ್ತಿಕೇಯನ್ ಜೊತೆ ಅಯಲಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಇದರ ಜೊತೆಗೆ ಕಮಲ್ ಹಾಸನ್ ನಟನೆಯ ಇಂಡಿಯ 2ದಲ್ಲೂ ಅವರು ನಟಿಸುತ್ತಿದ್ದಾರೆ.