ಮತ್ತೆ ಬರಲಿದೆ ಅಮೆರಿಕಾ ಅಮೆರಿಕಾ ಸಿನಿಮಾ; ರಮೇಶ್ ಬದಲು ಪಾರ್ಟ್-2ದಲ್ಲಿ ಯಾರಿದ್ದಾರೆ? ನಾಗತಿಹಳ್ಳಿಯವರು ಅಂದು ಈ ಚಿತ್ರಕ್ಕೆ 16ಜನರ ಟೀಮ್ ಕಟ್ಟಿಕೊಂಡು 45 ದಿನಗಳ ಕಾಲ ಶೂಟಿಂಗ್ ಮಾಡಿದ್ದರು. ಕನ್ನಡ ಪ್ರೇಕ್ಷಕರಿಗೆ ಅಮೆರಿಕಾ ದೇಶವನ್ನು ಚೆನ್ನಾಗಿ ಪರಿಚಯಿಸಿದ್ದರು. ಅಮೆರಿಕಾ ನೋಡದಿದ್ದ ಅದೆಷ್ಟೋ ಜನರು ಈ ಸಿನಿಮಾ.. ನಾಗತಿಹಳ್ಳಿ ಚಂದ್ರಶೇಖರ್ ( ) ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ, ಅವರೀಗ 'ಅಮೆರಿಕಾ ಅಮೆರಿಕಾ' ಸಿನಿಮಾದ ಸೀಕ್ವೆಲ್ ಅಂದ್ರೆ 'ಪಾರ್ಟ್ 2' ಶೂಟಿಂಗ್ ನಡೆಸುತ್ತಿದ್ದಾರಂತೆ. ಈ ಸಿನಿಮಾ ಮೂಲಕ ಕನ್ನಡದ ಎವರ್‌ಗ್ರೀನ್ ಸಿನಿಮಾ 'ಮಂಗಾರು ಮಳೆ'ಯನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಲಿದ್ದಾರೆ ನಾಗತಿಹಳ್ಳಿಯವರು ಎನ್ನಲಾಗ್ತಿದೆ. 1997ರಲ್ಲಿ ಅಮೆರಿಕಾ ಅಮೇರಿಕಾ ( ) ಸಿನಿಮಾ ತೆರೆಗೆ ಬಂದಿತ್ತು. ಅದರಲ್ಲಿ ರಮೇಶ್ ಅರವಿಂದ್, ಹೇಮಾ ಪಂಚಮುಖಿ ಹಾಗೂ ಅಕ್ಷಯ್ ಆನಂದ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ನಾಗತಿಹಳ್ಳಿಯವರು ಅಂದು ಈ ಚಿತ್ರಕ್ಕೆ 16ಜನರ ಟೀಮ್ ಕಟ್ಟಿಕೊಂಡು 45 ದಿನಗಳ ಕಾಲ ಶೂಟಿಂಗ್ ಮಾಡಿದ್ದರು. ಕನ್ನಡ ಪ್ರೇಕ್ಷಕರಿಗೆ ಅಮೆರಿಕಾ ದೇಶವನ್ನು ಚೆನ್ನಾಗಿ ಪರಿಚಯಿಸಿದ್ದರು. ಅಮೆರಿಕಾ ನೋಡದಿದ್ದ ಅದೆಷ್ಟೋ ಜನರು ಈ ಸಿನಿಮಾ ಮೂಲಕ ಅಮೆರಿಕಾ ನೋಡಿ ಖುಷಿಯಾಗಿದ್ದರು. ಮನೋಮೂರ್ತಿ ಅವರು ತಮ್ಮ ಮೊದಲ ಚಿತ್ರದ ಸಂಗೀತ ನಿರ್ದೇಶನದಲ್ಲೇ ಕನ್ನಡಿಗರ ಮನಸ್ಸನ್ನು ಗೆದ್ದುಬಿಟ್ಟಿದ್ದರು. ಇಂದಿಗೂ ಕೂಡ ಅಮೆರಿಕಾ ಅಮೆರಿಕಾ ಚಿತ್ರದ ಹಾಡುಗಳನ್ನು ಇಷ್ಟಪಟ್ಟು ಕೇಳುವವರಿದ್ದಾರೆ. ಸಂಗೀತ ಸಂಜೆಯಲ್ಲಿ, ಆರ್ಕಸ್ಟ್ರಾದಲ್ಲಿ ಆ ಹಾಡುಗಳು ಬರುತ್ತಲೇ ಇರುತ್ತವೆ. ಅಣ್ಣಾವ್ರಿಗಿತ್ತು ಬಾಲಿವುಡ್ ನಂಟು, ಡಾ ರಾಜ್‌ ಚಿತ್ರಕ್ಕೆ ಕೆಲಸ ಮಾಡಿದ್ರು ಸಲ್ಲೂ ತಂದೆ ಸಲೀಮ್! ಅದಾದ ಬಳಿಕ ಕೂಡ ನಾಗತಿಹಳ್ಳಿ ಚಂದ್ರಶೇಖರ್ ಅವರು 'ಅಮೃತಧಾರೆ' ಸಿನಿಮಾ ಮೂಲಕ ಮತ್ತೆ ಗೆದ್ದು ಬೀಗಿದ್ದರು. ಆದರೆ, ನಂತರ ಮಾಡಿದ ಸಿನಿಮಾಗಳು ನಾಗತಿಹಳ್ಳಿವರನ್ನು ಅಷ್ಟಾಗಿ ಕೈ ಹಿಡಯಲಿಲ್ಲ. ಇದೀಗ, ಬರೋಬ್ಬರಿ 27 ವರ್ಷಗಳ ಬಳಿಕ ಮತ್ತೆ ಅದೇ 'ಅಮೇರಿಕಾ ಅಮೇರಿಕಾ' ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್, ಈ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ಸಿನಿಪ್ರಿಯರು ಸಖತ್ ಖುಷಿಯಾಗಿದ್ದಾರೆ. ಆದರೆ, ಸಿಕ್ಕ ಮಾಹಿತಿ ಪ್ರಕಾರ, ಮುಂಬರುವ 'ಅಮೆರಿಕಾ ಅಮೆರಿಕಾ 2' ಚಿತ್ರದಲ್ಲಿ 'ಭಾಗ 1' ಇದ್ದ ನಟನಟಿಯರು ಇರುವುದಿಲ್ಲ ಎನ್ನಲಾಗಿದೆ. ನಟ ರಮೇಶ್ ಅರವಿಂದ್ ಹಾಗು ಹೇಮಾ ಪಂಚಮುಖಿ ಮುಂಬರಉವ ಚಿತ್ರದಲ್ಲಿ ನಟಿಸುತ್ತಿಲ್ಲ. ಹೀಗಾಗಿ ಕೆಲವರಿಗೆ ನಿರಾಸೆ ಆಗಬಹುದು. ಆದರೆ, ಹಳೆಯ ನೀರು ಕೊಚ್ಚಿ ಹೋಗಿ ಹೊಸ ನೀರು ಬರುವುದು ನಿಸರ್ಗ ನಿಯಮ ಎಂದುಕೊಂಡರೆ ಆಯ್ತು, ಹೊಸಬರನ್ನು ವೆಲ್‌ಕಮ್ ಮಾಡಬಹುದು ಅಲ್ವಾ..! ಏನಂತೀರಾ? ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಕನ್ನಡದ ಸ್ವೀಟಿ, ಅಂತೂ ಇಂತೂ ಬಾಯ್ಬಿಟ್ರು ರಾಧಿಕಾ ಕುಮಾರಸ್ವಾಮಿ! (@simple_trolls_)