ನೀನಾದೆ ನಾ 'ವಿಕ್ರಮ್-ವೇದಾ' ಈ ಕಥೆ ಮುಗೀತು, ಪ್ರೀತಿಯ ಹೊಸ ಅಧ್ಯಾಯ ಶೀಘ್ರವೇ ಶುರುವಾಗಲಿದೆ! ಕಳೆದ ಒಂದೂವರೆ ವರ್ಷದಿಂದ ಪ್ರಸಾರ ಕಾಣುತ್ತಿದ್ದ 'ನೀನಾದೆ ನಾ' ಧಾರಾವಾಹಿ ಈ ವಾರದಲ್ಲಿ ಮುಗಿಯಲಿದೆ ಎಂಬುದನ್ನು ತಿಳಿದು ಇದರ ಅಭಿಮಾನಿಗಳು ಸಂಕಟ ಪಡುವುದು ಪಕ್ಕಾ ಎನ್ನಬಹುದು. ಆದರೆ ಅವರಿಗೆ ದುಃಖದಲ್ಲೂ ಕೂಡ ಒಂದು ಸಂತಸದ ಸಂಗತಿಯಿದೆ... ಸ್ಟಾರ್ ಸುವರ್ಣ ವಾಹಿನಿಯಲ್ಲಿ ( ) ಮೂಡಿ ಬರುತ್ತಿರುವ 'ನೀನಾದೆ ನಾ' ಸೀರಿಯಲ್ ( ) ಅಂತಿಮ ಘಟ್ಟಕ್ಕೆ ತಲುಪಿದ್ದು, ವಿಕ್ರಮ್-ವೇದಾ ಪ್ರೇಮಕಥೆ ಕೊನೆಯಾಗಲಿದೆ. ಈ ವಾರ ವಿಕ್ರಮ್ ಹಾಗೂ ವೇದಾ ಕಥೆ ಮುಗಿಯಲಿದ್ದು, ಇಂದು 403ನೇ ಸಂಚಿಕೆ ಪ್ರಸಾರ ಕಾಣಲಿದೆ. ಕಳೆದ ಒಂದೂವರೆ ವರ್ಷದಿಂದ ಪ್ರಸಾರ ಕಾಣುತ್ತಿದ್ದ 'ನೀನಾದೆ ನಾ' ಧಾರಾವಾಹಿ ಈ ವಾರದಲ್ಲಿ ಮುಗಿಯಲಿದೆ ಎಂಬುದನ್ನು ತಿಳಿದು ಇದರ ಅಭಿಮಾನಿಗಳು ಸಂಕಟ ಪಡುವುದು ಪಕ್ಕಾ ಎನ್ನಬಹುದು. ಆದರೆ ಅವರಿಗೆ ದುಃಖದಲ್ಲೂ ಕೂಡ ಒಂದು ಸಂತಸದ ಸಂಗತಿಯಿದೆ. ಅದೇನೆಂದರೆ, ನೀನಾದೆ ನಾ ಸೀರಿಯಲ್ ಮುಗಿಯುತ್ತಿದ್ದರೂ ಈ ಹೆಸರು ಮುಗಿಯುತ್ತಿಲ್ಲ. ಅಂದರೆ, ಈಗಿನ ವಿಕ್ರಮ್-ವೇದಾ ಕಥೆ ಮಾತ್ರ ಕೊನೆಯಾಗಲಿದ್ದು, ಹೊಸ ಕಥೆ ಇದೇ ಹೆಸರಲ್ಲಿ ಶುರುವಾಗಲಿದೆ. ಸದ್ಯದಲ್ಲೇ ಹೊಸ ಕಥೆಯೊಂದಿಗೆ ಮತ್ತೆ 'ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ..' ಧಾರಾವಾಹಿ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲ, ಜನಮೆಚ್ಚಿದ ಅದೇ ಜೋಡಿ ನಾಯಕ-ನಾಯಕಿ ಮುಂದಿನ ಸೀರಿಯಲ್‌ನಲ್ಲಿ, ಅಂದರೆ ಪ್ರೀತಿಯ ಹೊಸ ಅಧ್ಯಾಯದಲ್ಲಿಯೂ ಕೂಡ ಮುಂದುವರೆಯಲಿದ್ದಾರೆ. ಇದು ಅಚ್ಚರಿ ಎನಿಸಿದರೂ ಸತ್ಯ! ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ' ಚಿತ್ರದಲ್ಲಿ ಆರತಿ, ಅಂಬರೀಷ್ ನಟಿಸಿಲ್ಲ ಯಾಕೆ? ಸ್ಟಾರ್ ಸುವರ್ಣ ವಾಹಿನಿ ಈ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಸೀರಿಯಲ್ ವೀಕ್ಷಕರು ಈ ಮೂಲಕ ನೀನಾದೆ ನಾ ಧಾರಾವಾಹಿಯನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಆದರೆ, ಆ ವಿಕ್ರಮ್-ವೇದಾರನ್ನು ಅದೇ ಪಾತ್ರಗಳಲ್ಲಿ ಮತ್ತೆ ನೋಡಲಾಗದು. ಆದರೆ, ವೀಕ್ಷಕರು ಮೆಚ್ಚಿ ಮುದ್ದಾಡಿದ ಅದೇ ಜೋಡಿ ಅದೇ ಹೆಸರಿನಲ್ಲಿ ಹೊಸ ರೂಪದಲ್ಲಿ ವೀಕ್ಷಕರ ಮುಂದೆ ಬರಲಿದ್ದು, ಅವರನ್ನು ಒಪ್ಪಿಕೊಳ್ಳಬೇಕು. ಈ ಬದಲಾವಣೆಯನ್ನು ತಿಳಿದು ವೀಕ್ಷಕರು ಥ್ರಿಲ್ ಆಗಿ ಹೊಸ ಕುತೂಹಲಕ್ಕೆ ಈಗಾಗಲೇ ರೆಡಿ ಆಗಿರಬಹುದು. ಈಗಿರುವ ಕಥೆಯ ಕ್ಲೈಮ್ಯಾಕ್ಸ್ ಈ ವಾರವೇ ನಡೆಯಲಿದೆ. ಅಲ್ಲಿಗೆ, ಶುರುವಾಗಲಿರುವ ನೀನಾದೆ ನಾ ಹೊಸ ಕಥೆ ಹೇಗಿರಬಹುದು? ವೀಕ್ಷಕರ ಅಚ್ಚುಮೆಚ್ಚಿನ ವಿಕ್ರಮ್-ವೇದಾ ಜೋಡಿ ಮೋಡಿ ಮಾಡಲು ಹೊಸ ರೂಪದಲ್ಲಿ ಬಂದಾಗ ಹೇಗನ್ನಿಸಬಹುದು? ಬದಲಾದ ಮೇಕಿಂಗ್, ಸ್ಥಳ ಎಲ್ಲವೂ ಹೇಗೆಲ್ಲಾ ಇರಬಹುದು? ಹೀಗೆ ಸಾಕಷ್ಟು ಪ್ರಶ್ನೆಗಳು ವೀಕ್ಷಕರ ಮನಸ್ಸನ್ನು ಕಾಡುವುದು ನಿಶ್ಚಿತ. ಅದಕ್ಕೆಲ್ಲಾ ಉತ್ತರ ಇನ್ನು ಕೆಲವೇ ದಿನಗಳಲ್ಲಿ ಸಿಗಲಿದೆ. ಸದ್ಯಕ್ಕೆ ವಿಕ್ರಮ್-ವೇದಾ ಕಥೆಯ ಕ್ಲೈಮ್ಯಾಕ್ಸ್ ನೋಡಲು ಮರೆಯದಿರಿ ಎನ್ನುತ್ತಿದೆ ಸ್ಟಾರ್ ಸುವರ್ಣ..! ಅಣ್ಣಾವ್ರು 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಹಣವನ್ನು ಮನೆಗೆ ತೆಗೆದುಕೊಂಡು ಹೋಗ್ಲೇ ಇಲ್ಲ!