ಆಗರ್ಭ ಶ್ರೀಮಂತ ಉದ್ಯಮಿಗಳನ್ನ ಮದ್ವೆಯಾದ ಬಾಲಿವುಡ್ ಸ್ಟಾರ್ ನಟಿಯರಿವರು… ಬಾಲಿವುಡ್ ನಲ್ಲಿ ಜನಪ್ರಿಯತೆ ಗಳಿಸಿರುವ ಕೆಲವು ಸೂಪರ್ ಸ್ಟಾರ್ ನಟಿಯರು, ಮದುವೆಯಾಗಿರೋದು ಸಾಮಾನ್ಯ ವ್ಯಕ್ತಿಗಳನ್ನ ಅಲ್ವೇ ಅಲ್ಲ. ಆಗರ್ಭ ಶ್ರೀಮಂತರನ್ನ ಮದುವೆಯಾಗಿರುವ ಆ ನಟಿಯರು ಯಾರ್ಯಾರು ಅನ್ನೋದನ್ನ ನೋಡೋಣ. ಬಾಲಿವುಡ್ ನಲ್ಲಿ ಜನಪ್ರಿಯತೆ ಗಳಿಸಿರುವ ಕೆಲವು ಸೂಪರ್ ಸ್ಟಾರ್ ನಟಿಯರು, ಮದುವೆಯಾಗಿರೋದು ಸಾಮಾನ್ಯ ವ್ಯಕ್ತಿಗಳನ್ನ ಅಲ್ವೇ ಅಲ್ಲ. ಆಗರ್ಭ ಶ್ರೀಮಂತರನ್ನ ಮದುವೆಯಾಗಿರುವ ಆ ನಟಿಯರು ಯಾರ್ಯಾರು ಅನ್ನೋದನ್ನ ನೋಡೋಣ. ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ, ಸೋನಂ ಕಪೂರ್ ಇವರೆಲ್ಲರೂ ಬಾಲಿವುಡ್ ನ ಶ್ರೀಮಂತ ನಟಿಯರು ಹೌದು, ಹಾಗಂತ ಇವರು ಮದುವೆ ಆಗಿರೋದೆನೂ ಕಡಿಮೆ ಹಣ ಇರೋರನ್ನ ಅಲ್ಲ. ಕೋಟ್ಯಾಂತರ ರೂಪಾಯಿಗಳ ನೆಟ್ ಮೌಲ್ಯ ಹೊಂದಿರುವ ಆಗರ್ಭ ಶ್ರೀಮಂತ ಉದ್ಯಮಿಗಳನ್ನು ( ) ಇವರು ಮದುವೆಯಾಗಿದ್ದಾರೆ. ಈ ಸ್ಟಾರ್ ನಟಿಯರ ಪತಿಯರಲ್ಲಿ ಒಬ್ಬರು ಮೆಹ್ತಾ ಗ್ರೂಪ್ ಚೇರ್ ಮೆನ್ ಆಗಿದ್ದರೆ, ಇನ್ನೊಬ್ಬರು ಎಕ್ಸ್’ಪೋರ್ಟ್ ಕಂಪನಿಯ ಮಾಲೀಕರು ಹೌದು, ಮತ್ತೊಬ್ಬರು 53ಸಾವಿರ ಕೋಟಿ ಮೌಲ್ಯದ ಕುಟುಂಬ ಆಸ್ತಿಯನ್ನು ಸಹ ಹೊಂದಿದ್ದಾರೆ. ಇವರ ಬಗ್ಗೆ ಡಿಟೇಲ್ ಆಗಿ ತಿಳಿಯೋಣ ಬನ್ನಿ. ಶಿಲ್ಪಾ ಶೆಟ್ಟಿ :ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ( ) ಸ್ವತಃ ಹಲವು ಹೊಟೇಲ್ ಗಳನ್ನು ಹೊಂದಿದ್ದಾರೆ. ಆದರೆ ಇವರ ಪತಿ ಕೋಟ್ಯಾಧಿಪತಿ ಅನ್ನೋದನ್ನ ಮರೆಯುವಂತಿಲ್ಲ. ಶಿಲ್ಪಾ ಪತಿ ರಾಜ್ ಕುಂದ್ರಾ ಲಂಡನ್ ನ ದೊಡ್ಡ ಬ್ಯುಸಿನೆಸ್ ಮೆನ್. ಇವರ ನೆಟ್ ವರ್ತ್ 2800 ಕೋಟಿ. ಜೂಹಿ ಚಾವ್ಲಾ :ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಮಿಂಚಿದ ನಟಿ ಜೂಹಿ ಚಾವ್ಲಾ ( ) ಪತಿ ಜೈ ಮೆಹ್ತಾ ಅವರು ದ ಮೆಹ್ತಾ ಗ್ರೂಪ್ ಚೇರ್ ಮೆನ್ ಆಗಿದ್ದಾರೆ. ಇವರು 4200 ಕೋಟಿಯ ಒಡೆಯರಾಗಿದ್ದಾರೆ. ಹಣಕ್ಕೋಸ್ಕರ ಜೂಹಿ ಜೈ ಮೆಹ್ತಾರನ್ನು ಮದುವೆಯಾಗಿದ್ದರು ಅನ್ನೋ ಸುದ್ದಿ ಕೂಡ ಒಂದು ಸಮಯದಲ್ಲಿ ಓಡಾಡ್ತಿತ್ತು. ಸೋನಮ್ ಕಪೂರ್ :ಸೋನಂ ಕಪೂರ್ ( ) ಪತಿ ಆನಂದ್ ಅಹುಜಾ ಕೂಡ ಶ್ರೀಮಂತ ವ್ಯಕ್ತಿ. ಆನಂದ್ ದೇಹಶ ಅತ್ಯಂತ ದೊಡ್ಡದಾದ ಎಕ್ಸ್’ಪೋರ್ಟ್ ಕಂಪನಿ ಶಶಿ ಎಕ್ಸ್’ಪೋರ್ಟ್ ಮಾಲಿಕರೂ ಹೌದು. ಇವರ ನೆಟ್ ವರ್ಟ್ ಬರೋಬ್ಬರಿ 5000 ಕೋಟಿ ಆಗಿರುತ್ತೆ. ರಾಣಿ ಮುಖರ್ಜಿ :ರಾಣಿ ಮುಖರ್ಜಿ ( ) ಮದುವೆಯಾಗಿರೋದು ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ ಆದಿತ್ಯಾ ಚೋಪ್ರಾ ಅವರನ್ನು. ಇವರು ಯಶ್ ರಾಜ್ ಫಿಲಂಮ್ಸ್ ಮಾಲಿಕರೂ ಹೌದು. ಇವರ ಒಟ್ಟು ನಿವ್ವಳ ಮೌಲ್ಯ 7200 ಕೋಟಿ ಆಗಿದೆ. ಶರ್ಮೀನ್ ಸೇಗಲ್: ಹೀರಾಮಂಡಿ ಸಿನಿಮಾದಲ್ಲಿ ಆಲಂ ಝೇಬ್ ಪಾತ್ರದಲ್ಲಿ ಕಾಣಿಸಿಕೊಂಡ ಶರ್ಮೀನ್ ಸೇಗಲ್ ( ) ಪತಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶರ್ಮೀನ್ ಪತಿ ಅಮನ್ ಮೆಹ್ತಾ ಟೊರೆಂಟ್ ಫಾರ್ಮ ಕಂಪನಿಯ ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿದ್ದಾರೆ. ಇವರ ಕುಟುಂಬದ ಒಟ್ಟು ನೆಟ್ ವರ್ತ್ 53000 ಕೋಟಿಗೂ ಅಧಿಕವಾಗಿದೆ.