ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ 'ಪೊರ್ಕಿ' ಸುಂದರಿ ಪ್ರಣೀತಾ ಮತ್ತೊಂದು ಫೋಟೋ ವೈರಲ್! ವೈರಲ್ ಅಯ್ತು ನಟಿ ಪ್ರಣಿತಾ ಸುಭಾಷ್ ಹೊಸ ಲುಕ್. ಇಂಡೋ ವೆಸ್ಟ್ರನ್ ಲುಕ್‌ನಲ್ಲಿ ಫುಲ್ ಮಿಂಚಿಂಗ್..... ವೈರಲ್ ಅಯ್ತು ನಟಿ ಪ್ರಣಿತಾ ಸುಭಾಷ್ ಹೊಸ ಲುಕ್. ಇಂಡೋ ವೆಸ್ಟ್ರನ್ ಲುಕ್‌ನಲ್ಲಿ ಫುಲ್ ಮಿಂಚಿಂಗ್..... 2010ರಲ್ಲಿ ಪೋರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುಂದರಿ ಪ್ರಣಿತಾ ಸುಭಾಷ್ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. 2021 ಮೇ 30ರಂದು ಉದ್ಯಮಿ ನಿತಿನ್ ರಾಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಣಿತಾ 2022ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕೆಲವರು ದಿನಗಳ ಹಿಂದೆ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಗುಡ್ ನ್ಯೂಸ್ ಹಂಚಿಕೊಂಡ ಪ್ರಣಿತಾ ಸುಭಾಷ್‌ಗೆ ಎಲ್ಲರಿಗೂ ವಿಶ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರಣಿತಾ ಇಂಡೋ ವೆಸ್ಟ್ರನ್ ಲುಕ್‌ನಲ್ಲಿ ಮಿಂಚಿರುವ ಫೋಟೋ ಸಖತ್ ವೈರಲ್ ಅಗುತ್ತಿದೆ. ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಮೇಲೆ ವೈರಲ್ ಆಗುತ್ತಿರುವ ಕಾರಣ ಅನೇಕರು ಬೇಬಿ ಬಂಪ್ ಕಾಣಿಸುತ್ತಿದೆ ಕಾಣಿಸುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಪ್ರೆಗ್ನೆನ್ಸಿ ಅನೌನ್ಸ್ ಮಾಡುವ ಅದೆಷ್ಟೋ ತಿಂಗಳ ಮುನ್ನ ಪ್ರಣಿತಾ ಈ ಫೋಟೋಶೂಟ್ ಮಾಡಿಸಿದ್ದರ. ಹೀಗಾಗಿ ಜನರ ಗೊಂದಲಕ್ಕೆ ಉತ್ತರ ಕೊಟ್ಟಿಲ್ಲ.