ಶ್ರೀರಸ್ತು ಶುಭಮಸ್ತು ಲೇಡಿ ವಿಲನ್​ ದೀಪಿಕಾ ಬರ್ತ್​ಡೇ ಸೆಲಬ್ರೇಷನ್​ ಹೀಗಿತ್ತು ನೋಡಿ... ಶ್ರೀರಸ್ತು ಶುಭಮಸ್ತು ಲೇಡಿ ವಿಲನ್​ ದೀಪಿಕಾ ಉರ್ಫ್​ ದರ್ಶಿನಿ ಡೆಲ್ಟಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ ಬರ್ತ್​ಡೇ ಸೆಲಬ್ರೇಷನ್​ ಹೀಗಿತ್ತು ನೋಡಿ... ವಿಲನ್​ ದೀಪಿಕಾ ಎಂದಾಕ್ಷಣ ಸೀರಿಯಲ್​ ಪ್ರೇಮಿಗಳ ಕಣ್ಣೆದುರು ಬರುವುದು ಶ್ರೀರಸ್ತು ಶುಭಮಸ್ತುವಿನ ಸೊಸೆ. ತೀರಾ ಕೆಟ್ಟವಳು ಈ ಸೀರಿಯಲ್​ನಲ್ಲಿ ಈಕೆ. ಈ ಸೀರಿಯಲ್​ನಲ್ಲಿ ಒಂದೇ ಮನೆಯ ಸೊಸೆಯಂದಿರಾಗಿರುವವರು ಪೂರ್ಣಿ ಮತ್ತು ದೀಪಿಕಾ. ಅಣ್ಣ ತಮ್ಮಂದಿರ ಪತ್ನಿಯರಾದ ಇವರಿಬ್ಬರದ್ದೂ ಸೀರಿಯಲ್​ನಲ್ಲಿ ಭಿನ್ನ ಕ್ಯಾರೆಕ್ಟರ್​. ಒಬ್ಬಳು ಅತೀ ಒಳ್ಳೆಯವಳು, ಇನ್ನೊಬ್ಬಳು ಅಗತ್ಯಕ್ಕಿಂತ ಹೆಚ್ಚು ಕೆಟ್ಟವಳು ಅಂದ್ರೆ ವಿಲನ್​. ದೊಡ್ಡ ಸೊಸೆ ಪೂರ್ಣಿಗೆ ಇನ್ನಿಲ್ಲದ ಕಾಟ ಕೊಡುವುದು ಎಂದರೆ ದೀಪಿಕಾಗೆ ಇನ್ನಿಲ್ಲದ ಖುಷಿ. ಅದರಲ್ಲಿಯೂ ಪೂರ್ಣಿ ಅನಾಥೆ ಎನ್ನುವ ಕಾರಣಕ್ಕೆ, ಅವಳನ್ನು ಹೆಜ್ಜೆ ಹೆಜ್ಜೆಗೂ ಹಂಗಿಸಿ, ಟೀಕಿಸುತ್ತಾಳೆ. ಅದೇ ಪೂರ್ಣಿ ತುಂಬಾ ಒಳ್ಳೆಯವಳು. ಎಲ್ಲವನ್ನೂ ಸಹಿಸಿಕೊಂಡು ಹೋಗುವವಳು. ಇದೀಗ ದೀಪಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಶ್ರೀರಸ್ತು ಶುಭಮಸ್ತು ಸೀರಿಯಲ್​ ಟೀಮ್​ ಅದನ್ನು ಹೇಗೆ ಆಚರಿಸಿದೆ ಎಂಬುದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ ನಟಿ.ದೀಪಿಕಾ ನಿಜವಾದ ಹೆಸರು ದರ್ಶಿನಿ ಡೆಲ್ಟಾ. ದರ್ಶಿನಿ ಕುರಿತು ಹೇಳುವುದಾದರೆ, ಇವರು ನಟಿಯಾಗೋ ಮೊದಲು ಮಾಡೆಲ್ (), ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ ( ) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಶ್ರೀರಸ್ತು ಶುಭಮಸ್ತು ಸೊಸೆಯಂದಿರ ಭರ್ಜರಿ ಡಾನ್ಸ್​! ಅತ್ತೆ ತುಳಸಿ ಪ್ರೆಗ್ನೆಂಟ್​ ಆದ ಖುಷಿಗಾ ಕೇಳ್ತಿದ್ದಾರೆ ಫ್ಯಾನ್ಸ್​... ಅಪ್ಪನ ಕನಸಿನಂತೆ ಡ್ಯಾನ್ಸರ್ () ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ಮೊದಲಿಗೆ ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತಮಿಳಿನಲ್ಲಿ ಜಾನಿ ಮಾಸ್ಟರ್ ( ) ಅವರಿಗೆ ಅಸಿಸ್ಟಂಟ್ ಆಗಿ ಪ್ರಭುದೇವ () ಅವರಿಗೆ ಕೊರಿಯೋಗ್ರಫಿ ಮಾಡಿದ ದರ್ಶಿನಿ ಡೆಲ್ಟಾ ನಾಗರಾಜ್, ಸದ್ಯ ಕನ್ನಡದ ಮೊದಲ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇವರು ಆಗಾಗ್ಗೆ ಪೂರ್ಣಿ ಅಂದ್ರೆ, ಲಾವಣ್ಯ ಭಾರಧ್ವಾಜ್​ ಜೊತೆಗೆ ರೀಲ್ಸ್​ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇವರು ಓಪನ್ ದ ಬಾಟಲ್ ಹಾಡಿಗೆ ಪುನೀತ್ ರಾಜ್ ಕುಮಾರ್ ಗೆ ಜಾನಿ ಮಾಸ್ಟರ್ ಗೆ ಅಸಿಸ್ಟಂಟ್ ಕೊರಿಯೋಗ್ರಫಿ ಮಾಡಿದ್ದರು. ನನ್ನ ಕೊರಿಯೋಗ್ರಫಿ ಮೇಲೆ ನನಗಿಂತ ಹೆಚ್ಚಿನ ನಂಬಿಕೆ ಇಟ್ಟಿದ್ದ ಪುನೀತ್ ರಾಜ್ ಕುಮಾರ್ ( ) ಅವರ ಆಶೀರ್ವಾದದಿಂದಲೇ ನಾನು ಇವತ್ತು ಈ ಹಂತಕ್ಕೆ ಬಂದಿದ್ದೇನೆ ಎಂದು ಹೇಳ್ತಾರೆ. ಗಗನಸಖಿಯಂತೆ ಇನ್ಮುಂದೆ ಬಸ್ಸಲ್ಲೂ ಬರ್ತಿದ್ದಾಳೆ ‘ಶಿವನೇರಿ ಸುಂದರಿ': ಪ್ರಯಾಣಿಕರಿಗೆ ಬಸ್‌ ಸಖಿ ಭಾಗ್ಯ! (@darshini_deltaofficial)