ಲವ್ವಲ್ಲಿ ಬಿದ್ದಾಗ ಜಯಾ ಬಚ್ಚನ್ ಸ್ಟಾರ್ ನಟಿ, ಆದ್ರೆ ಬಚ್ಚನ್ ಸಾಬ್ ಅವಕಾಶಕ್ಕೆ ಅಲೆಯುತ್ತಿದ್ರಂತೆ! ಸುಮಾರು 50 ವರ್ಷಗಳಿಂದ ಸುಂದರ ಸಂಸಾರ ನಡೆಸುತ್ತಿರುವ ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್, ಸುಂದರ ಪ್ರೇಮ ಕಾವ್ಯ ಶುರುವಾಗಿದ್ದು ಹೇಗೆ ಗೊತ್ತಾ? ಸುಮಾರು 50 ವರ್ಷಗಳಿಂದ ಸುಂದರ ಸಂಸಾರ ನಡೆಸುತ್ತಿರುವ ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್, ಸುಂದರ ಪ್ರೇಮ ಕಾವ್ಯ ಶುರುವಾಗಿದ್ದು ಹೇಗೆ ಗೊತ್ತಾ? ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ( ) ಮತ್ತು ಜಯಾ ಬಚ್ಚನ್ ಜೋಡಿ ತುಂಬಾ ಜನಪ್ರಿಯತೆ ಪಡೆದ ಜೋಡಿ. ಸಿನಿಮಾ ಮೂಲಕ ಜೊತೆಯಾದ ಈ ಜೋಡಿ, ಲವ್, ಡೇಟಿಂಗ್ (), ನಂತ್ರ ಮದುವೆನೂ ಆಗಿ 50 ವರ್ಷ ಯಶಸ್ವಿ ದಾಂಪತ್ಯ ಜೀವನ ನಡೆಸಿದ್ದಾರೆ. ಇವರ ಮುದ್ದಾದ ಲವ್ ಸ್ಟೋರಿ ಇಲ್ಲಿದೆ. ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ( ) ಮೊದಲ ಬಾರಿ ಭೇಟಿಯಾಗಿದ್ದು 1970 ರಲ್ಲಿ ಪುಣೆ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ. ಆವಾಗ್ಲೇ ಬಿಗ್ ಬಿ ಅಮಿತಾಬ್ ಬಚ್ಚನ್ ಪರ್ಸನಾಲಿಟಿಯತ್ತ ಆಕರ್ಷಿತರಾಗಿದ್ದರಂತೆ ಸೂಪರ್ ಸ್ಟಾರ್ ಜಯಾ ಬಚ್ಚನ್ ಆ ಸಮಯದಲ್ಲಿ ಅಮಿತಾಬ್ ಬಚ್ಚನ್ ಇನ್ನೂ ಸಿನಿಮಾ ರಂಗದಲ್ಲಿ ನೆಲೆಯೂರಿರಲಿಲ್ಲ, ಸಿನಿಮಾದಲ್ಲಿ ಅವಕಾಶ ಪಡೆಯೋದಕ್ಕೆ ಕಷ್ಟಪಡುತ್ತಿದ್ದರು, ಆದರೆ ಜಯಾ ಆವಾಗ್ಲೇ ಸೂಪರ್ ಸ್ಟಾರ್ ನಟಿಯಾಗಿದ್ದರು ( ). ಗುಡ್ಡಿ ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಇಬ್ಬರು ಅಧಿಕೃತವಾಗಿ ಒಬ್ಬರಿಗೊಬ್ಬರು ಪರಿಚಿತರಾದರು. ಒಂದು ದಿನ ಅಮಿತಾಬ್ ಬಚ್ಚನ್ ಮ್ಯಾಗಝಿನ್ ಒಂದರ ಕವರ್ ಪೇಜಿನಲ್ಲಿ ಜಯಾ ಅವರ ಫೋಟೋ ನೋಡಿದರಂತೆ. ಅಂದು ಅಮಿತಾಬ್ ಕನಸಿನ ( ) ಹುಡುಗಿ ಹೇಗಿರಬೇಕು ಎಂದು ಬಯಸಿದ್ರೋ ಅದೇ ರೀತಿ ಜಯಾ ಕಂಡಿದ್ದರಂತೆ. ಆವಾಗ್ಲೇ ಮೊದಲ ಬಾರಿಗೆ ಅಮಿತಾಬ್‌ಗೆ ಜಯಾ ಇಷ್ಟ ಆಗಿದ್ದು. ಅಮಿತಾಬ್ ವಿಭಿನ್ನ ವ್ಯಕ್ತಿತ್ವದತ್ತ ಜಯಾ ಎಷ್ಟೊಂದು ಆಕರ್ಷಿತರಾಗಿದ್ರೂ ಅಂದ್ರೆ, ಸ್ವಲ್ಪ ಸಮಯದಲ್ಲೇ ಜಯಾ ಅಮಿತಾಬ್ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಅಮಿತಾಬ್‌ಗೆ ಜಯಾ ಮೇಲೆ ಲವ್ ಆಗಿದ್ದು ಮಾತ್ರ ಏಕ್ ನಜರ್ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ. ನಂತರ ಇಬ್ಬರು ಡೇಟಿಂಗ್ ಆರಂಭಿಸಿದ್ರು. ಇದಾಗಿ ಸ್ವಲ್ಪ ಸಮಯದಲ್ಲಿ ಬಿಗ್ ಬಿ ಮತ್ತು ಅವರ ಸ್ನೇಹಿತರು ಒಟ್ಟಾಗಿ ಸೇರಿ ಚಾಲೆಂಜ್ ಒಂದು ವೇಳೆ ಜಂಝೀರ್ ಸಿನಿಮಾ ಸೂಪರ್ ಹಿಟ್ ಆದ್ರೆ, ಜಯಾ ಸೇರಿ ಎಲ್ಲಾ ಸ್ನೇಹಿತರು ಜೊತೆಯಾಗಿ ಲಂಡನ್‌ಗೆ ಹೋಗೋದಾಗಿ ನಿರ್ಧರಿಸಿದ್ದರಂತೆ. ಆದರೆ ಬಿಗ್ ಬಿ ತಂದೆ ಮಾತ್ರ ಯಾವುದೆ ಹುಡುಗಿ ಜೊತೆ ಲಂಡನ್‌ಗೆ ಹೋಗಬಾರದು, ಮದುವೆಯಾದ್ರೆ ಮಾತ್ರ ಹುಡುಗಿಯನ್ನ ಕರೆದುಕೊಂಡು ಹೋಗಬಹುದು ಎಂದು ಕಂಡೀಷನ್ ಹಾಕಿದ್ರಂತೆ. ಬಿಗ್ ಬಿಗೆ ತಾವು ಒಂದಲ್ಲ ಒಂದು ದಿನ ಜಯಾ ಅವರನ್ನೇ ಮದುವೆಯಾಗೋದಾಗಿ ಗೊತ್ತಿತ್ತು. ಹಾಗಾಗಿ ಅವರು ನೇರವಾಗಿ ಜಯಾ ಮುಂದೆ ಮದುವೆ ಪ್ರಪೋಸಲ್ ಇಟ್ರಂತೆ, ಅದಕ್ಕೆ ಜಯಾ ಕೂಡ ಖುಷಿಯಿಂದಲೇ ಒಪ್ಪಿಕೊಂಡರು. ಜಯಾ ಮತ್ತು ಅಮಿತಾಬ್ ಬಚ್ಚನ್ ಜೂನ್ 3, 1973 ರಲ್ಲಿ ಸಪ್ತಪದಿ ತುಳಿದರು. ಅಷ್ಟೇ ಅಲ್ಲ ಮದ್ವೆಯಾದ ಅದೇ ದಿನ ಲಂಡನ್‌ಗೆ ತೆರಳಿದ್ದರು. ಇಬ್ಬರ ಪ್ರೀತಿ, ವೈವಾಹಿಕ ಜೀವನ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ಅಮಿತಾಬ್ ಜೊತೆ ರೇಖಾ ಹೆಸರು ಕೇಳಿ ಬಂತು, ಇಬ್ಬರ ವೈವಾಹಿಕ ಜೀವನದಲ್ಲಿ ಏರಿಳಿತಗಳು ಶುರುವಾದವು. ಆದರೆ ಎಲ್ಲವನ್ನೂ ಮೆಟ್ಟಿ ನಿಂತು, ಜೀವನದಲ್ಲಿ ಬಂದ ಎಲ್ಲಾ ಸಮಸ್ಯೆಗಳನ್ನು ಜೊತೆಯಾಗಿ ಎದುರಿಸಿದ ಈ ಜೋಡಿ ಕಳೆದ 50 ವರ್ಷಗಳಿಂದ ಸುಂದರವಾದ ಸಂಸಾರ ನಡೆಸಿಕೊಂಡು ಬರುವ ಮೂಲಕ, ಯಶಸ್ವಿ ದಾಂಪತ್ಯ ಜೀವನಕ್ಕೆ( ) ಪ್ರೇರಣೆಯಾಗಿದ್ದಾರೆ.