ವೀಳ್ಯದೆಲೆ ವ್ಯಾಪಾರಕ್ಕಿಳಿದುಬಿಟ್ಟಳಾ ಭಾಗ್ಯ? ಕಮೆಂಟ್ಸ್​ಗೆಲ್ಲಾ ಉತ್ತರ ಕೊಡುತ್ತಲೇ ಹೃದಯ ಕದ್ದ ನಟಿ... ತೋಟದಲ್ಲಿ ಕಳೆ ಕೀಳುತ್ತಾ, ವೀಳ್ಯದೆಲೆ ವ್ಯಾಪಾರಕ್ಕಿಳಿದೆ ಎನ್ನುತ್ತಲೇ ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ಅಂದ್ರೆ ಸುಷ್ಮಾ ರಾವ್​ ವಿಡಿಯೋ ಮಾಡಿದ್ದಾರೆ. ನಟಿ ಫ್ಯಾನ್ಸ್​ ಹೃದಯ ಗೆದ್ದಿದ್ದೇಕೆ? ಭಾಗ್ಯ ಎಂದ್ರೆ ಸಾಕು, ಕಲರ್ಸ್​ ಕನ್ನಡ ಚಾನೆಲ್​ನ ಭಾಗ್ಯ ಥಟ್​ ಅಂತ ಕಣ್ಣೆದುರು ಪ್ರತ್ಯಕ್ಷ ಆಗಿ ಬಿಡುತ್ತಾಳೆ. ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಸದ್ಯ ಭಾಗ್ಯಳದ್ದೇ ಹವಾ. ಅಳುಮುಂಜಿ ಭಾಗ್ಯ ಬದಲಾಗಿದ್ದಾಳೆ. ಅಳುಮುಂಜಿ ಭಾಗ್ಯಳನ್ನು ನೋಡಿ ನೋಡಿ ಸುಸ್ತಾಗಿ ಹೋಗಿ ಸೀರಿಯಲ್​ ನೋಡುವುದನ್ನೇ ನಿಲ್ಲಿಸುತ್ತೇನೆ ಎಂದು ಒಂದೇ ಸಮನೆ ಗೋಳಾಡುತ್ತಿದ್ದ ವೀಕ್ಷಕರ ಮನಸ್ಥಿತಿಯೂ ಈಗ ಬದಲಾಗಿ ಹೋಗಿದೆ. ನಮಗೆ ಭಾಗ್ಯಲಕ್ಷ್ಮಿ ಸೀರಿಯಲ್​ ಸಿಕ್ಕಾಪಟ್ಟೆ ಇಷ್ಟ ಆಗ್ತಿದೆ ಎನ್ನುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ಸದ್ಯ ಗಂಡ ತಾಂಡವ್​ನ ಕಾಲವೂ ಹೋಗಿದೆ, ಇಟ್ಟುಕೊಂಡಿರೋ ಶ್ರೇಷ್ಠಾಳಿಗೂ ಕುತ್ತು ಬಂದಿದೆ. ಈಗ ಏನಿದ್ರೂ ಪತ್ನಿ ಭಾಗ್ಯಳದ್ದೇ ಕಾಲವಾಗಿದೆ. ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿರೋ ಭಾಗ್ಯ ಸಂಪೂರ್ಣ ಬದಲಾಗಿದ್ದಾಳೆ. ಅವಳ ವರಸೆಯೇ ಬದಲಾಗಿದೆ. ಈಗ ಏನಿದ್ರೂ ಅವಳು ಸ್ಟಾರ್​ ಹೋಟೆಲ್​ನ ಚೀಫ್​ ಶೆಫ್​. ಓಡಾಡಲು ಕಾರು ಇದೆ. ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ. ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಿದ್ದಾಳೆ. ಸರಿಯಾಗಿ ಇಂಗ್ಲಿಷ್​ ಮಾತನಾಡಲೂ ಬರದಿದ್ದ ಭಾಗ್ಯ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವ ಮೂಲಕ ಹಲವರಿಗೆ ಮಾದರಿಯಾಗಿದ್ದಾಳೆ. ಈಕೆ ಹತ್ತನೇ ಕ್ಲಾಸ್​ ಪರೀಕ್ಷೆ ಬರೆದದ್ದರಿಂದ ಸ್ಫೂರ್ತಿಗೊಂಡು, ನಿಜ ಜೀವನದಲ್ಲಿಯೂ ಮಹಿಳೆಯರು ಮಕ್ಕಳ ಜೊತೆ ಪರೀಕ್ಷೆ ಬರೆದಿದ್ದಾಳೆ. ಹೆಣ್ಣು ಅದರಲ್ಲಿಯೂ ಗೃಹಿಣಿ ಎಂದರೆ ತೀರಾ ಕಡೆಗಣನೆಯಿಂದ ನೋಡುತ್ತಿದ್ದವರಿಗೆಲ್ಲರಿಗೂ ಭಾಗ್ಯ ಬದುಕಿನ ಹೊಸ ದಿಸೆ ತೋರಿಸುತ್ತಿದ್ದಾಳೆ. ಇಂತಿಪ್ಪ ಭಾಗ್ಯ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​. ಅಂದಹಾಗೆ, ಭಾಗ್ಯಲಕ್ಷ್ಮಿಯ ಪಾತ್ರಧಾರಿ ಸುಷ್ಮಾ ಕೆ.ರಾವ್​. ಇವರ ನಿರೂಪಣಾ ಶೈಲಿ ಟಿ.ವಿ. ವೀಕ್ಷಕರಿಗೆ ಚಿರಪರಿಚಿತ. ಇದೀಗ ಅಣ್ಣನ ತೋಟದಲ್ಲಿ ಕಳೆ ಕೀಳುತ್ತಾ, ವೀಳ್ಯದೆಲೆ ತೆಗೆಯುತ್ತಾ ಇರೋ ಭಾಗ್ಯ ಅರ್ಥಾತ್​ ಸುಷ್ಮಾ ಅವರು ಇದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ವೀಳ್ಯದೆಲೆಯನ್ನು ತೆಗೆಯುತ್ತಾ, ವೀಳ್ಯದೆಲೆ ಮಾರಾಟಕ್ಕೆ ಇಳಿದಿದ್ದೇನೆ. ನಿಮಗೂ ಬೇಕಾದ್ರೆ ಹೇಳಿ ಎಂದು ತಮಾಷೆ ಮಾಡಿದ್ದಾರೆ. ಕನಕಪುರದಲ್ಲಿರುವ ತಮ್ಮ ಅಣ್ಣನ ತೋಟದಲ್ಲಿ ತಾವು ಕೆಲಸ ಮಾಡುತ್ತಿರುವುದಾಗಿ ಸುಷ್ಮಾ ಹೇಳಿಕೊಂಡಿದ್ದಾರೆ. ಒಳಗಡೆ ಷರ್ಟ್​ ಇದ್ಯಾ ನಮ್ಗೆ ಕಾಣಿಸ್ಲೇ ಇಲ್ಲ! ಸೀತಾರಾಮ ಸೀತಾಳ ಹೀಗೆ ಕಾಲೆಳೆಯೋದಾ ಟ್ರೋಲಿಗರು? ಆದರೆ ಇಲ್ಲಿ ಸುಷ್ಮಾ ಅವರು ಅಭಿಮಾನಿಗಳ ಮನಸ್ಸನ್ನು ಗೆದ್ದಿರುವುದು ತೋಟದಲ್ಲಿ ಕೆಲಸ ಮಾಡಿದ್ದಕ್ಕಲ್ಲ. ಬದಲಿಗೆ ಈ ವಿಡಿಯೋಗೆ ಹಾಕಿದ ಪ್ರತಿಯೊಂದು ಕಮೆಂಟ್​ಗು ಸುಷ್ಮಾ ಅವರು ಉತ್ತರ ಕೊಟ್ಟಿದ್ದಾರೆ. ಇದಕ್ಕಾಗಿ ಅಭಿಮಾನಿಗಳ ಖುಷಿ ತಡೆಯಲು ಆಗುತ್ತಿಲ್ಲ. ಈ ಜಾಗ ಎಲ್ಲಿ ಎಂದು ಕೇಳಿದ್ದಕ್ಕೆ ಕನಕಪುರ ಎಂದಿದ್ದಾರೆ ಸುಷ್ಮಾ. ಅದೇ ರೀತಿ ಇನ್ನೊಬ್ಬರು ನಮ್ಮ ಅಜ್ಜಿಗೆ ನಿಮ್ಮ ಪಟಪಟಾ ಮಾತು ತುಂಬಾ ಇಷ್ಟ ಎಂದಿದ್ದು, ಅದಕ್ಕೂ ಸುಷ್ಮಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇನ್ನೊಬ್ಬರು ನಮ್ಮ ಮನೆಯ ತೋಟದಲ್ಲೂ ಬಂದು ಕೆಲಸ ಮಾಡಿ ನಾಲ್ಕು ಹೊತ್ತು ಊಟ ಕೊಟ್ಟು ತೋಟ ನಿಮ್ಮ ಹೆಸರಿಗೆ ಬರೆದು ಕೊಡುತ್ತೇನೆ ಎಂದಿದ್ದು ಅದಕ್ಕೆ ನಗುವಿನ ಇಮೋಜಿ ಹಾಕಿದ್ದಾರೆ ನಟಿ. ಇನ್ನೊಬ್ಬರು ಕಳೆ ಮಾತ್ರ ಕೀಳಿ, ಒಳ್ಳೆಯ ಬೆಳೆನೂ ಕೀಳಬೇಡಿ ಮತ್ತೆ ಎಂದಾಗ ಸುಷ್ಮಾ ನಮ್ಮ ಅಣ್ಣನೂ ಹಾಗೇ ಹೇಳ್ತಿದ್ದ ಎಂದಿದ್ದಾರೆ. ಹೀಗೆ ಎಲ್ಲರ ಕಮೆಂಟ್​ಗೂ ಉತ್ತರಿಸುತ್ತಾ ಹೃದಯ ಕದ್ದಿದ್ದಾರೆ ನಟಿ. ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಸುಷ್ಮಾ ರಾವ್ ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಹಲವು ವರ್ಷಗಳ ಅವರಿಂದ ವಿಚ್ಛೇದನ ಪಡೆದರು. ಪಾಪ ಪಾಂಡುನಲ್ಲಿ ನಟಿಸಿದ್ದೆ ಎಂಬ ಒಂದೇ ಕಾರಣಕ್ಕೆ ಆಫರೇ ಸಿಗ್ಲಿಲ್ಲ.. ಆದ್ರೆ... ಶಾಲಿನಿ ನೋವಿನ ಮಾತು .. (@anchor_sushmakrao)