ಜೈದೇವನ ಮುಂದೆನೂ ಹೀಗೇ ಇರಮ್ಮಿ... ಬೇರೆ ಹೆಣ್ಮಕ್ಳ ಕಡೆ ಅವ ತಿರುಗಿನೂ ನೋಡಲ್ಲ... ಮಲ್ಲಿಗೆ ಫ್ಯಾನ್ಸ್​ ಪಾಠ... ಸೀರೆಯಲ್ಲಿ ಅಮೃತಧಾರೆ ಮಲ್ಲಿ ಕ್ಯಾಟ್​ ವಾಕ್​: ಸೀರಿಯಲ್ಲಿನ ಪೆದ್ದು ಪೆದ್ದಾಗಿರುವ ನಟಿಗೆ ಅಭಿಮಾನಿಗಳು ಏನೆಲ್ಲಾ ಹೇಳ್ತಿದ್ದಾರೆ ಗೊತ್ತಾ? ಮಲ್ಲಿ ಎಂದಾಕ್ಷಣದ ಥಟ್ಟನೆ ನೆನಪಾಗುವುದು ಅಮೃತಧಾರೆ ಸೀರಿಯಲ್​ ಪೆದ್ದು ಮಲ್ಲಿ. ಕೆಲಸದ ಮಲ್ಲಿ ಮನೆ ಯಜಮಾನ ಜೈದೇವನ ಬಲೆಗೆ ಬಿದ್ದು ಗರ್ಭಿಣಿಯೂ ಆಗಿದ್ದಾಳೆ. ಹೇಗೋ ಇವಳಿಗೆ ಎಸ್ಕೇಪ್​ ಆಗಬಹುದು ಎಂದುಕೊಂಡಿದ್ದ ಜೈದೇವನನ್ನು ಭೂಮಿಕಾ ಬಿಡಲಿಲ್ಲ. ಇಬ್ಬರ ಮದುವೆಯನ್ನೂ ಮಾಡಿಸಿದ್ದಾನೆ. ಹೆಜ್ಜೆ ಹೆಜ್ಜೆಗೂ ಭೂಮಿಕಾ ತನ್ನ ಮೇಲೆ ಕಣ್ಣಿಡುವುದರಿಂದ ಜೈದೇವ ಒಳ್ಳೆಯವನ ಥರ ನಾಟಕವಾಡುತ್ತಿದ್ದಾರೆ. ಮಲ್ಲಿಯನ್ನು ಕಂಡರೆ ಆಗದ ಅತ್ತೆ ಶಕುಂತಲಾ ಕೂಡ ಏನೂ ಮಾಡಲಾಗದ ಸ್ಥಿತಿ. ಇನ್ನು ಮಲ್ಲಿಯೋ ತನ್ನ ಗಂಡ ನಿಜಕ್ಕೂ ಬದಲಾಗಿದ್ದಾನೆ ಎಂದುಕೊಂಡುಬಿಟ್ಟಿದ್ದಾಳೆ. ಆದರೆ ಜೈದೇವ ಬೇರೆ ಹೆಣ್ಣುಮಕ್ಕಳ ಜೊತೆ ಚಕ್ಕಂದ ಆಡುವುದನ್ನು ಮುಂದುವರೆಸಿದ್ದಾರೆ. ಇದೀಗ ಮಲ್ಲಿ ಕ್ಯಾಟ್​ ವಾಕ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಅದಕ್ಕೆ ಮಲ್ಲಿಯ ಅಭಿಮಾನಿಗಳು ಮನೆಯಲ್ಲೂ ಹೀಗೆ ಇದ್ದುಬಿಡು, ನಿನ್ನ ಗಂಡ ಜೈದೇವ ಬೇರೆ ಯಾವ ಹೆಣ್ಣುಮಕ್ಕಳ ಹಿಂದೆ ಹೋಗಲ್ಲ ಎಂದು ಕಾಲೆಳೆಯುತ್ತಿದ್ದಾರೆ. ಅಂದಹಾಗೆ ಮಲ್ಲಿ ಪಾತ್ರಧಾರಿಯ ನಿಜವಾದ ಹೆಸರು ರಾಧಾ ಭಗವತಿ. ಈ ಸೀರಿಯಲ್​ನಲ್ಲಿ ಪೆದ್ದು ಪೆದ್ದು ಪಾತ್ರದಲ್ಲಿ ಸೈ ಎನಿಸಿಕೊಂಡಿರುವ ರಾಧಾ ಅವರು, ಸೋಷಿಯಲ್‌ ಮೀಡಿಯಾದಲ್ಲಿ ಸಕತ್‌ ಆಕ್ಟೀವ್‌ ಆಗಿರುವ ಮಲ್ಲಿ ಕ್ಯೂಟ್‌ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಫೋಟೋ ಶೂಟ್​ ಜೊತೆ, ಒಳ್ಳೆಯ ಕಂಠವನ್ನೂ ಹೊಂದಿರುವ ರಾಧಾ ಅವರು ಇವುಗಳ ಬಗ್ಗೆ ಸೋಷಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು ರ್ಯಾಂಪ್​ ವಾಕ್​ ಮಾಡಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಸೀರೆಯಲ್ಲಿಯೂ ರ್ಯಾಂಪ್​ ವಾಕ್​ ಎಷ್ಟು ಚೆನ್ನಾಗಿ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಇಷ್ಟು ಮುದ್ದಾಗಿರೋ ನೀವು ಅಂಥ ಪಾತ್ರ ಮಾಡಬಾರದಿತ್ತು ಎನ್ನುತ್ತಿದ್ದಾರೆ. ಇನ್ನು ಕೆಲವರು ಜೈದೇವನ ಬಗ್ಗೆ ಕಣ್ಣು ಇಟ್ಟಿಡಿ, ಅವನು ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ, ರಾಧಾ ಅವರು ಮಾದಕ ನೋಟದೊಂದಿಗೆ ಕೆಂಪು ಸೀರೆಯಲ್ಲಿ ಮಿಂಚಿದ್ದರು. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿತ್ತು. ನಿಮ್ಮ ನಟನೆಯಷ್ಟೇ ಕ್ಯೂಟ್‌ ಆಗಿದೆ ನಿಮ್ಮ ಈ ಸೌಂದರ್ಯ ಎಂದಿದ್ದರು ಫ್ಯಾನ್ಸ್​. ನಿಮ್ಮ ಕಣ್ಣೋಟದಲ್ಲಿಯೇ ಕೊಲ್ಲಬೇಡಮ್ಮಾ ಎಂದು ಹಲವರು ಕಮೆಂಟ್​ ಮಾಡಿದ್ದರು. ಪೆದ್ದು ಮಲ್ಲಿಯ ಅದ್ಭುತ ಕಂಠಸಿರಿಗೆ ಮನಸೋತ ಫ್ಯಾನ್ಸ್‌: ನಟನೆಯಷ್ಟೇ ಮುದ್ದಾಗಿದೆ ದನಿ ಅಂತಿದ್ದಾರೆ... ಅಂದಹಾಗೆ, ರಾಮ್​ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಧಾ ಅವರು ಇದೀಗ ಮಲ್ಲಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್​ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಈಗ ಮತ್ತೆ ಕಿರುತೆರೆಗೆ ಪ್ರವೇಶ ಪಡೆದು ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ. ಮಾಡೆಲ್ ಕೂಡ ಆಗಿರುವ ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಆಸೆ ಎಂದಿದ್ದಾರೆ. ಎಂಥ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುವ ಇವರಿಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ. ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.ಅಂದಹಾಗೆ ರಾಧಾ ಅವರ ಕುಟುಂಬದವೇ ಕಲಾವಿದರ ಕುಟುಂಬ. ಇವರ ಅಜ್ಜ ರಂಗಭೂಮಿ ಕಲಾವಿದರು. ಇದರ ಜೊತೆಗೆ ಸವರು ಹರಿಕಥೆ ದಾಸರೂ ಕೂಡಾ ಆಗಿದ್ದರು. ರಾಧಾ ಅವರ ತಾಯಿಯೂ ಜನಪದ ಗೀತೆಗಳಿಗೆ ದನಿಯಾದವರು. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ನಟನೆಯತ್ತ ಎಳೆ ವಯಸ್ಸಿನಲ್ಲಿಯೇ ಆಸಕ್ತಿ ಮೂಡಿದೆ. ಕಿರುತೆರೆ, ಹಿರಿತೆರೆ, ಮ್ಯೂಸಿಕ್ ಆಲ್ಬಂ ಮಾತ್ರವಲ್ಲದೇ ರಾಧಾ ಅವರು, ಹಿನ್ನೆಲೆ ಗಾಯಕಿಯೂ ಹೌದು. ಈಗಾಗಲೇ ಎರಡು ಸಿನಿಮಾಗಳಲ್ಲಿ ಹಾಡಿರುವ ಈಕೆ ಕಂಠದಾನಕ್ಕೂ ಸೈ. 'ಮದುಮಗಳು' ಧಾರಾವಾಹಿಯಲ್ಲಿನ ನಾಯಕಿಯ ಪಾತ್ರಕ್ಕೆ ಕಂಠದಾನ ಮಾಡುತ್ತಿರುವ ರಾಧಾ ಅವರಿಗೆ ಕಲೆ ಎಂಬುದು ರಕ್ತಗತವಾಗಿಯೇ ಒಲಿದು ಬಂದಿದೆ. ಮಾದಕ ನೋಟದಲ್ಲಿ ಅಮೃತಧಾರೆ ಪೆದ್ದಿ ಮಲ್ಲಿ: ಕಣ್ಣಲ್ಲೇ ಕೊಲ್ಲಬೇಡಮ್ಮಾ ಎಂದ ಪಡ್ಡೆ ಹುಡುಗರು (@radha_bhagavati)