ನನ್ನ ಫೆವರೆಟ್​ ಹಾಟ್​ ಸವತಿ ಇವಳೇ ನೋಡಿ... ಹಂಸಾ ಪ್ರತಾಪ್​ಗೆ ಭಾರಿ ಕಮೆಂಟ್ಸ್​! ಪುಟ್ಟಕ್ಕನ ಮಕ್ಕಳು ರಾಜಿ ಉರ್ಫ್​ ಹಂಸಾ ಪ್ರತಾಪ್​ ಗುಂಪು ಕಟ್ಟಿಕೊಂಡು ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಅಭಿಮಾನಿಗಳು ಹೇಳ್ತಿರೋದೇನು? ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸದ್ಯ ಪುಟ್ಟಕ್ಕನ ಸವತಿ ರಾಜಿ ಸೈಡ್​ ಆಗಿದ್ದಾಳೆ. ಸಹನಾಳ ಭೂತ ಬಂದು ರಾಜಿಗೆ ಬುದ್ಧಿ ಕಲಿಸಿದ ಮೇಲೆ ರಾಜಿ ಸ್ವಲ್ಪ ತಣ್ಣಗಾಗಿದ್ದಾಳೆ. ಆದರೆ ಕ್ಯೂಟ್​ ಸವತಿ ಎಂದೇ ಈಕೆ ಫೇಮಸ್​. ಏಕೆಂದ್ರೆ ರಾಜಿ ಪಾತ್ರಧಾರಿಯಾಗಿರುವ ಹಂಸಾ ಪ್ರತಾಪ್​ ಅವರ ಕ್ಯೂಟ್​ ಆಗಿರುವ ಕಾರಣ. ಹೌದು! ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಪುಟ್ಟಕ್ಕನ ಪಾತ್ರಧಾರಿ, ನಟಿ ಉಮಾಶ್ರಿ ಅವರಷ್ಟೇ ಸಕತ್​ ಫೇಮಸ್​ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ಅರ್ಥಾತ್​ ಪತಿಯ ಎರಡನೆಯ ಪತ್ನಿಯ ಪಾತ್ರದಲ್ಲಿ ನಟಿಸ್ತಿರೋ ರಾಜೇಶ್ವರಿ. ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ () ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​. ಈಗ ಸೀರಿಯಲ್​ನಲ್ಲಿ ತಣ್ಣಗಾಗಿರುವ ರಾಜಿ ರೀಲ್ಸ್​ನಲ್ಲಿ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಹಳೆಯ ರೇಡಿಯೋ ಹಿಡಿದು ಬಂದು ರೀಲ್ಸ್​ ಮಾಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. ನಾನೇನಾದ್ರೂ ನಿನ್ನ ಮದ್ವೆಯಾಗಿದ್ರೆ... ನಿವೇದಿತಾ ಹೊಸ ರೀಲ್ಸ್​ ನೋಡಿ ಫ್ಯಾನ್ಸ್​ ಹೇಳಿದ್ದೇನು? ಅಂದಹಾಗೆ ಹಂಸ ಅವರು ಇದಾಗಲೇ ರಾಜಾ ರಾಣಿ ವೇದಿಕೆಯ ಮೇಲೂ ಮಿಂಚುತ್ತಿದ್ದಾರೆ. ಪತಿ ಪ್ರತಾಪ್​ ಜೊತೆಗೆ ಹಲವಾರು ವೀಕ್ಷಕರನ್ನು ಮನಸ್ಸನ್ನು ಗೆಲ್ಲುತ್ತಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಈ ಷೋನಲ್ಲಿ ಹಂಸಾ ತಮ್ಮ ಲೈಫ್​ ಸ್ಟೋರಿಯನ್ನು ಹೇಳಿಕೊಂಡಿದ್ದರು. ಮದುವೆಯಾದಾಗ ನಮ್ಮಿಬ್ಬರ ನಡುವೆ ತುಂಬಾ ಡಿಫರೆನ್ಸ್​ ಇತ್ತು. ಬೇರೆ ಕಪಲ್​ಗಳನ್ನು ನೋಡಿದಾಗ ನಾವ್ಯಾಕೆ ಹೀಗೆ ಇರ್ಲಿಲ್ಲ ಅಂತ ಅಂದ್ಕೊಂಡಿದ್ವಿ. ನಿಜ ಹೇಳಬೇಕು ಎಂದ್ರೆ ಇಬ್ರೂ ಸಪರೇಟ್​ ಕೂಡ ಆದ್ವಿ. ಆದರೆ ಆ ದೇವರ ದಯೆಯಿಂದ ಮತ್ತೆ ಒಂದಾದ್ವಿ ಎಂದು ಸ್ಟೋರಿ ಹೇಳಿಕೊಂಡಿದ್ದರು. ಆಗ ಪ್ರತಾಪ್ ಅವರು ಪತ್ನಿಯನ್ನು ಸಂತೈಸಿ ಇನ್ನು ಸದಾ ಒಟ್ಟಿಗೇ ಇರೋಣ, ಏನೂ ಆಗಲ್ಲ ಎಂದಿದ್ದರು.ಅಷ್ಟಕ್ಕೂ ಹಂಸಾ ಅವರು ಈ ಹಿಂದೆ, ಧ್ರುವ, ಅಮ್ಮ, ರಾಜಾಹುಲಿ, ಸಖತ್​, ಜೇಮ್ಸ್, ಉಂಡೆನಾಮ ​ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಿಯಾಲಿಟಿ ಷೋಗಳಲ್ಲಿಯೂ ಭಾಗಿಯಾಗಿದ್ದಾರೆ. ಹಂಸ ಅವರು ಕೆಲವೊಮ್ಮೆ ತಮ್ಮ ಪತಿ ಹಾಗೂ ಹಲವು ಬಾರಿ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ತಮ್ಮನ ಪಾತ್ರದಲ್ಲಿ ನಟಿಸ್ತಿರೋ ಕಾಳಿಯ ಜೊತೆ ರೀಲ್ಸ್​ ಮಾಡುತ್ತಾರೆ. ಅಂದಹಾಗೆ ಹಂಸ ಅವರು, ನಟಿ, ಅನೇಕ ಆ್ಯಂಗಲ್​ಗಳಲ್ಲಿ, ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಹಂಸ ಅವರಿಗೆ ಓರ್ವ ಮಗನಿದ್ದಾನೆ. ಜ್ಯೋತಿಷಿಗಳು ಅಪಾಯ ಮುನ್ಸೂಚನೆ ಕೊಟ್ರೂ ಹೀಗೆ ಡಾನ್ಸ್​ ಮಾಡೋದಾ- ಸೀತಾರಾಮ ಕಾಲೆಳೆದ ನೆಟ್ಟಿಗರು (@hamsa_narayanaswamy)