ಪತ್ನಿ ಅಪರ್ಣಾ ಜೊತೆ ಕಳೆದ ಆಪ್ತ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡ ನಾಗರಾಜ್ ವಸ್ತಾರೆ ನಾನು ಮತ್ತು ಅಪರ್ಣೆ ತುಂಬಾ ಖಾಸಗಿಯಾಗಿ ಬದುಕಿದವರು ಎಂದು ನಾಗರಾಜ್ ವಸ್ತಾರೆ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಖಾಸಗಿ ಬದುಕಿನ ಕುರಿತ ಯಾವುದೇ ಮಾಹಿತಿಯನ್ನೂ ಅಪರ್ಣಾ ಮತ್ತು ನಾಗರಾಜ್ ಹಂಚಿಕೊಳ್ಳುತ್ತಿರಲಿಲ್ಲ. ಬೆಂಗಳೂರು:ಕನ್ನಡದ ಖ್ಯಾತ ನಿರೂಪಕಿ, ಕನ್ನಡತಿ ಅಪರ್ಣಾ ( ) ನಿಧನಕ್ಕೆ ಇಡೀ ಕರುನಾಡು ಕಣ್ಣೀರಿಟ್ಟಿದೆ. ಎರಡು ವರ್ಷಗಳಿಂದ ಮಾರಕ ಕಾಯಿಲೆ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಈ ವಿಷಯವನ್ನು ಯಾರೊಂದಿಗೂ ಅಪರ್ಣಾ ಹಂಚಿಕೊಂಡಿರಲಿಲ್ಲ. ತುಂಬಾ ಅತ್ಯಾಪ್ತರಾದ ಬೆರಳಣಿಕೆಯಷ್ಟೇ ಜನರಗೆ ಈ ವಿಷಯ ಗೊತ್ತಿತ್ತು. ತಮ್ಮ ಅನಾರೋಗ್ಯದ ವಿಷಯವನ್ನು ಯಾರ ಬಳಿಯೂ ಹೇಳಬಾರದೆಂದು ಅಪ್ತರ ಬಳಿಯಲ್ಲಿಯೂ ಅಪರ್ಣಾ ಮಾತು ತೆಗೆದುಕೊಂಡಿದ್ದರು. ನಾನು ಮತ್ತು ಅಪರ್ಣೆ ತುಂಬಾ ಖಾಸಗಿಯಾಗಿ ಬದುಕಿದವರು ಎಂದು ನಾಗರಾಜ್ ವಸ್ತಾರೆ ( ) ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಖಾಸಗಿ ಬದುಕಿನ ಕುರಿತ ಯಾವುದೇ ಮಾಹಿತಿಯನ್ನೂ ಅಪರ್ಣಾ ಮತ್ತು ನಾಗರಾಜ್ ಹಂಚಿಕೊಳ್ಳುತ್ತಿರಲಿಲ್ಲ. ಇದೀಗ ಪತ್ನಿ ನಿಧನದ ಬಳಿಕ ನಾಗರಾಜ್ ವಸ್ತಾರೆ ದೀರ್ಘ ಕವನ ಮತ್ತು ಅಪರ್ಣಾ ಜೊತೆಗಿನ ಸುಂದರ ಫೋಟೋಗಳನ್ನು ನಾಗರಾಜ್ ವಸ್ತಾರೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ವರ್ಷದ ಹಿಂದಿನದು, ಆವಾಗ ಇದನ್ನು ಹೊರಮಾಡುವ ಮನಸ್ಸಿರಲಿಲ್ಲ ಎಂದು ಕವನದ ಕೊನೆಗೆ ನಾಗರಾಜ್ ಬರೆದುಕೊಂಡಿದ್ದಾರೆ. "ಅಪರ್ಣಾಗೆ 6 ತಿಂಗಳು ಬದುಕೋದೆ ಡೌಟ್ ಎಂದಿದ್ದರು, ಛಲದಿಂದ ಒಂದೂವರೆ ವರ್ಷ ಬದುಕಿದ್ಳು"! ನಾಗರಾಜ್ ವಸ್ತಾರೆ ಫೇಸ್‌ಬುಕ್ ಪೋಸ್ಟ್ ಮಂತ್ರಪಠಣದ ನಡುವೆ ನುಡಿತಪ್ಪಿದಂತುಂಟಾದ ನಮ್ಮನ್ನುಯಾತಕ್ಕು ಇದ್ದುಕೊಳ್ಳಿರೆಂದು ಸುಮ್ಮನೆ ಒಡಮಾಡಲಾಯಿತುಹಿಡಿಗಾತ್ರದ ಹೃದಯಕ್ಕೆ ಇಡಿಜಗತ್ತಿನ ನೋವು ಬರೆದುಅನುಭವಿಸಿರೆಂದು ಒಡನೋದಿಸಲಾಯಿತುಇದೇ ಮೇರೆಗೆ ನಿಘಂಟುದಪ್ಪದ ಪುಸ್ತಕದೊಳಗೆಯಾರೋ ಒತ್ತಿರಿಸಿ ಮರೆತ ಎರಡು ಹೂಪಕಳೆಗಳಂತೆಒತ್ತಿ ಒತ್ತರಿಸಿಕೊಂಡಿದ್ದೆವುಇನ್ನು ಆಯ್ಕೆಯ ಅವಕಾಶವೇ ಇಲ್ಲದೆ ತತ್ತರಿಸಿಕೊಂಡಿದ್ದೆವುಅದಿಬದಿಯ ಸಂಗತಿಯಿರಲಿ ಒಡನಿರುವ ಅರ್ಥವನ್ನೂ ಅರಿಯದೆಹೀಗೇತಕ್ಕೆಂದು ತಲೆಕೆಡಿಸಿಕೊಳ್ಳದೆ ಅಥವಾ ಕೆಡಿಸಿಕೊಳ್ಳತಕ್ಕತಲೆಯೇ ಇಲ್ಲದೆ ನಮ್ಮ ಪಾಡಿಗೆ ನಾವಿದ್ದೆವುಪುಪ್ಪುಸಗಳನ್ನು ಗಾಳಿಗೆ ಅಡವಿಡಲಾಗಿತ್ತುಉಸುರುವ ಹಕ್ಕಿರಲಿಲ್ಲಅಂಗೈಯಲ್ಲಿ ಕಿಟಕಿ ಹೂಡಲಾಗಿತ್ತುಕಾಣುವ ಅಪ್ಪಣೆಯಿರಲಿಲ್ಲಬೆನ್ನುಹುರಿಗೆ ಗೆಜ್ಜೆ ಬಿಗಿಯಲಾಗಿತ್ತುಸದ್ದಿನ ಸನ್ನದಿರಲಿಲ್ಲಪೂರ್ತಾಕಾಶದ ರಹ ತೆರೆಯಲಾಗಿತ್ತುಬೆಳಕಿಗೆ ಎಡೆಯಿರಲಿಲ್ಲಸದಾ ತಲೆಯೆತ್ತಿರುವ ಸೊಕ್ಕು ನಸೀಬಿನಲ್ಲಿತ್ತುಮೋಡ ರಾಚುವಾಗ ತಗ್ಗಿ ಬಗ್ಗಿ ಡೊಗ್ಗಿ ತಪ್ಪಿಸಿಕೊಳ್ಳಲಿಕ್ಕೆ ಬೆನ್ನಿರಲಿಸರಿಮೈಯೇ ನಮಗಿರದಾಗಿತ್ತುಇಷ್ಟಿದ್ದೂ ಇದ್ದೇ ಇದ್ದೆವುಮೌನವೇ ನೋವಿನ ಪ್ರತ್ಯರ್ಥವೆಂದು ಬಗೆದುತಾಳ್ಮೆಯೊಳಗಿನ ಅತ್ಯರ್ಥ ತೆಗೆದುಇತ್ಯರ್ಥದ ಯೋಚನೆಯನ್ನೇ ಎಡತಾಕಗೊಡದೆ ಸರಿದೂರಕ್ಕೊಗೆದುಇರುವ ಕರುಮ ತೀರಿಕೊಳ್ಳಲೆಂದು ನಾವೇ ನಾವಾಗಿದ್ದೆವುಈ ನಡುವೆ ಹೀಗೆಲ್ಲ ಪದ್ಯ ಬರೆಯಬೇಡವೆಂದು ನೋವು ಹೇಳಿತುನರನರಕ್ಕು ಹೊಕ್ಕು ಅಲುಗಿಸುವ ನಿಮ್ಮ ನರಕದ ಗೋಳನ್ನುಯಾರೂ ಕೇಳಬಯಸುವುದಿಲ್ಲವೆಂದು ತಾಕೀತು ಮಾಡಿತುಸರಿಯೆಂದು ಬರೆಯನಿಲ್ಲಿಸಿದರೆಮೈಯೊಳಗಿನ ಇಪ್ಪತ್ತೊಂದು ಲಕ್ಷಕೋಟಿ ನರಗಳೊಟ್ಟಾಗಿ ಒಕ್ಕೊರಲಾಗಿಬರೆಬರೆಯೆಂದು ಬೊಬ್ಬಿರಿದವುಪದ್ಯವೇ ನೋವು ನೀಗುವತ್ತಲಿನ ಸರಿದಾರಿಯೆಂದುಮನವರಿಕೆಗೆ ಮೊದಲಾದವುತೂಗುದೀಪದ ವಾಲಾಡುವ ಜ್ವಾಲೆಗೆ ತೆಳ್ಳಗೆ ನೇತಲುಗುವ ಅದೃಷ್ಟವೂಇದೇ ಸರಿಯೆಂದು ಮರುಮರಳಿ ಸಾರಿತುಮಾಯತಕ್ಕ ಸರಿತರೀಕೆಯೆಂದರೆ ಜಗತ್ತಿನಲ್ಲಿನ ಇತರರುನಿಮಗೂ ಹೆಚ್ಚು ನೋವಿನಲ್ಲಿರುವುದನ್ನು ಅರಿತಂದೆಂದು ಸಾರಿ ಸಾರಿ ಮೊಳಗಿತುಸರಿಪದ್ಯ ಹುಟ್ಟುವುದೇ ನೋವಿನ ಮಧ್ಯದಲ್ಲೆಂದು ಏತನ್ಮಧ್ಯೆತಿಳಿದವರೊಬ್ಬರು ತಿಳಿಹೇಳಿದರುಭಗವದ್ಗೀತೆಯನ್ನು ಮೊದಲು ಯುದ್ಧಭೂಮಿಯಲ್ಲಿ ಆಡಲಾಯಿತುಸಾಯನಿಂತವರು ಮುಗಿಯುವ ಮುನ್ನದ ಮಹಾಕ್ಲೇಶವು ಅದನ್ನು ಹುಟ್ಟಿಸಿತುಅದರ ಮೊದಲ ಅಧ್ಯಾಯವೇ ವಿಷಾದಯೋಗವಷ್ಟೆಗೀತೆಯಾಡಿದ ಮೇಲೆ ರಣಭೂಮಿಯೇ ಸರಿಮರಣದ ಬರಿಯೆಡೆಯಾಯಿತುಕಾಣಿ ಕಾಣಿರೆಂದು ಹತ್ತೆಂಟು ಬಾರಿ ದೃಷ್ಟಾಂತವಿಟ್ಟು ಹೇಳಿದರುನೋವು ಕತ್ತಲಿದ್ದ ಹಾಗೆಕಾಣುವ ಕಾಣಿಸುವ ಬೆಳಕುದಿಸಿದ್ದು ಅದರೊಳಗಿಂದಲೇ ಎಂದುಎಂಥದೋ ಕಣ್ಮನಸಿಗೆಟುಕದ ಸಿದ್ಧಾಂತವರುಹಿದರುನಿರೀಕ್ಷೆಯೇ ಮೊದಲಾಯಿತುಚಳಿಯೆದುರು ಎಲೆಯುದುರುವ ಹಾಗೆ ಗಳಿಗೆಗಳು ಮೈಕಳೆದು ಮುಗಿದವುತುಟಿಗೆಟುಕದ ಗುಟುಕುಗಳಂತೆ ನಾಳೆಗಳು ಉರುಳುರುಳಿ ಮುಗಿದವುಕಾಲದ ಹೊಸಹೊಸಲಿನಲ್ಲಿ ಲೋಕವು ಬೀದಿಮೆರೆತಕ್ಕೆ ತೊಡಗಿದ ಸರಿರಾತ್ರಿಯಲ್ಲಿಇಬ್ಬರ ಒಳಗುಂಡಿಗೆಗಳೂ ಲೂಟಿಗೊಂಡ ಶಹರದ ಹೆಬ್ಬಾಗಿಲಂತೆಕುಸಿದು ನೆಲಕಚ್ಚಿದ್ದವುನರಕದ ಹೆದ್ದಾರಿಯಂತಿದ್ದ ಆ ನಟ್ಟಿರುಳಿನಲ್ಲಿ ಅದೃಷ್ಟವೆಣಿಸಿದರೆಅಂಗೈಗಳು ಒಡೆದ ಕನ್ನಡಿ ತೆರೆದು ನುಚ್ಚಾದ ನೂರು ಭವಿಷ್ಯವನ್ನರುಹಿದವುನೋಡುನೋಡುತ್ತಲೇ ಏನೆಂತೆಷ್ಟು ಜರುಗಿಹೋದವುಇದಲ್ಲ ಅದಲ್ಲ ಯಾವುದೂ ಸಲ್ಲದೆಂಬ ಪಟ್ಟು ಪ್ರತಿಪೆಟ್ಟಿನ ನಡುವೆಬದಲಿದ ಪಠ್ಯದೊಳಗೆ ಇನಿತಾದರೂ ಬದುಕು ಬದಲದೆರಾಮನಾಮ ಪಾಯಸದೆದುರು ಟಿಪ್ಪೂನಾಮದ ಹುಸಿ ಚಪ್ಪರಿಕೆಯೂಬರಿಮಾತಿನ ಕೊಪ್ಪರಿಗೆಯೊಳಗೆ ನಿಜಸವರಿದ ಸುಳ್ಳಿನುಪ್ಪೇರಿಯೂಪದೇಪದೇ ತುಂಬಿ ಮೈದುಂಬಿಕೊಂಡುಂಟಾದವುಇದ್ದು ಸತ್ತವರ ಚರಿತೆಯು ಇದ್ದೂ ಇರದವರನ್ನು ಇರದೆ ಇದ್ದವರೊಡನೆಹೂಡಿ ಕೂಡಿ ಕಾಡಿ ಬಾಯಿಗೆ ಬಂದದ್ದಾಡಿ ಕೊಂದಿತುಎಡಬಲವೆಂದೆರಡಾಗಿ ಒಡೆದ ಜಗತ್ತು ಜರುಗಲು ಎರಡೂ ಅಲ್ಲದ ನಡುದಾರಿಕಾಣದೆ ಕಂಗೆಟ್ಟಿತುಜರುಗುವುದೆ ಜಗವು ಜರುಗದ್ದದಲ್ಲವು ಎಂಬ ಹಳೆವಾಣಿಯೆದುರುಕಂಡಕಂಡ ಕಡೆ ಅದು ಸೊಂಡಿಲು ಚಾಚಿ ರಾಚಿ ಮುನ್ನಡೆದ ಮಧ್ಯೆಬದುಕಿನ ಬೇಸಾಯ ಪೂರಯಿಸುವ ಮುನ್ನವೇ ನಾವುಸಾವಿನ ಸಾಗುವಳಿಗೆ ಅನುವಾದೆವುಅವರದೊಂದು ಮಾತು ಇಬ್ಬರ ಬದುಕನ್ನೂ ಅನಾಮತ್ತನೆ ಬದಲಿಸಿಟ್ಟಿತುಅದಕ್ಕಿಂತ ಸಾವಿನ ಜಾಡು ಬದಲಾಯಿತುನೋಯುವ ಮೈಯಿ ಸಾವಿನ ಸಾರಿಗೆಯೆಂದು ಹಿಂದೊಮ್ಮೆ ಉಡಾಫೆಗೆ ಬರೆದಿದ್ದುಇದೀಗ ಕಡುದಿಟದ ಅರಿವಾಗಿ ಮೈಗೂಡಿತುಹೇಗಿದ್ದೀರೆಂದು ಕೇಳುವಲ್ಲಿ ಹೇಗಿಲ್ಲವೆಂದು ಆಡಿದೆವುಏನಾಯಿತೆಂದರೆ ಏನಲ್ಲವೆಂದು ಹೇಳಹೆಣಗಿದವುಹಲವು ದೇಶಾವರಿಯೆದುರು ಕೆಲಸಾರಿ ಸುಮ್ಮಗೆ ನಸುನಕ್ಕೆವುನಿಜದೊಳಗಿನ ನಿಜವೇನೆಂದರೆಇರುಳಿರುಳೂ ಕಗ್ಗತ್ತಲಿನ ಮುಸುಡಿಗಟ್ಟಿ ಚೀರುವ ನೋವನ್ನೆಂದೂ ಆಡಲಾರೆವುದಿಗಿಲಿನ ಗುಹೆಯೊಳಗಿನ ಮತಿಗೆಟ್ಟ ಬಾವಲಿಗಳ ಹಾರುಪೇರನ್ನೆಲ್ಲೂ ತೋಡಲಾರೆವುಬವರವೋ ಬವಳಿಯೋ ಜ್ವರವೋ ಜ್ವಾಲಾಮುಖಿಯೋ ಗರವೋ ಬರಗೆಟ್ಟ ಸಡಗರವೋತೋಚದ ತೋಚುಗಾಣಿಸದಒಟ್ಟಾರೆ ಗೋತಹೊಡೆದ ಪಟಸೂತ್ರವೆಳೆಯುತ್ತ ಮಗ್ಗುಲಾದೆವುಮಂತ್ರವೊಂದರ ಮಧ್ಯೆ ಉಲಿಗೆಟ್ಟುಂಟಾದೆವಷ್ಟೆನೂರೆಂಟು ಮದ್ದುಮಾತ್ರೆಗಿಂತ ಫಲಿಸಲೊಲ್ಲದ ಮಂತ್ರತಂತ್ರವೇ ಲೇಸೆಂದುಸಲೀಸೆನಿಸುವ ಮಹಿಮೆಯೆದುರು ಕಾದೆವು ಕಾದೆವು ಮತ್ತು ಕಾದೇ ಕಾದೆವುಮೈಯನ್ನೇ ಮೈಯಿ ಕಾಯುತ್ತಿದ್ದಿತಷ್ಟೆತಕ್ಕುದಾಗಿ ನಮ್ಮನ್ನೇ ನಾವು ಕಾದುಕೊಂಡೆವುಪದ್ಯವಾಗಿ ಒಡಮೂಡದೆ ಪದಪದ ಬೆನ್ನುಹತ್ತಿ ಸೋತೆವುರೂಪಕಗಳ ಹಿಂದವಿಯುವ ಕಸುಬರಿತಿದ್ದೆವಷ್ಟೆನೋವು ಸಾಯದಿದ್ದರೂ ಸಾವು ನೋಯಲೆಂದು ಹಪಹಪಿಸಿ ಶಪಿಸಿಉಳಿದುಬಳಿದುದನ್ನೆಲ್ಲ ಬಳಿದು ಬಳಿಗೊಳಿಸಿ ತುಸುತುಸುವೇ ಅಸುವೆಣಿಸಿದೆವು ಖ್ಯಾತ ನಿರೂಪಕಿ ಅಪರ್ಣಾರ ಕೊನೆ ಆಸೆ ಬಗ್ಗೆ ಹೇಳಿ ಭಾವುಕರಾದ ಪತಿ ನಾಗರಾಜ್ ವಸ್ತಾರೆ