ಅಧಿಕ ರಕ್ತದೊತ್ತಡಕ್ಕೆ ಈ ಹರ್ಬಲ್ ಟೀ ಬೆಸ್ಟ್, ಟ್ರೈ ಮಾಡಿ, ಕೂಲ್ ಆಗಿರಿ ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆ ಸಾಮಾನ್ಯ. ಈ ಸಮಸ್ಯೆ ನಿವಾರಿಸಲು ನಿಮಗಾಗಿ ಇಲ್ಲಿದೆ ಅತ್ಯುತ್ತಮವಾದ 7 ಹರ್ಬಲ್ ಟೀ ಬಗ್ಗೆ ಮಾಹಿತಿ. ಇವುಗಳನ್ನು ಸೇವಿಸುವ ಮೂಲಕ ಸಮಸ್ಯೆ ನಿವಾರಿಸಿ. ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆ ಸಾಮಾನ್ಯ. ಈ ಸಮಸ್ಯೆ ನಿವಾರಿಸಲು ನಿಮಗಾಗಿ ಇಲ್ಲಿದೆ ಅತ್ಯುತ್ತಮವಾದ 7 ಹರ್ಬಲ್ ಟೀ ಬಗ್ಗೆ ಮಾಹಿತಿ. ಇವುಗಳನ್ನು ಸೇವಿಸುವ ಮೂಲಕ ಸಮಸ್ಯೆ ನಿವಾರಿಸಿ. ಈ ಬ್ಯುಸಿ ಲೈಫ್‌ಸ್ಟೈಲ್‌ನಿಂದ ಅತಿಯಾದ ಒತ್ತಡ, ದೈಹಿಕ ನಿಷ್ಕ್ರಿಯತೆಯಿಂದ ( ) ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡ () ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ನಿವಾರಿಸೋದಕ್ಕೆ ನೀವು ಹರ್ಬಲ್ ಟೀಗಳನ್ನು( ) ಟ್ರೈ ಮಾಡಬಹುದು. ಅದಕ್ಕಾಗಿ ಯಾವ ಚಹಾ ಸೇವಿಸಬಹುದು ಅನ್ನೋದನ್ನು ನೋಡೋಣ. ದಾಸವಾಳ ಚಹಾ ( ) :ದಾಸವಾಳ ಚಹಾದಲ್ಲಿ ಆಂಟಿ ಆಕ್ಸಿಡೆಂಟ್ಸ್ ಅಧಿಕವಾಗಿದೆ. ಇದು ರಕ್ತನಾಳಗಳನ್ನು ರಿಲಾಕ್ಸ್ ಮಾಡುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತೆ. ಹೋತಾರ್ನ್ ಟೀ ( ):ಈ ಚಹಾ ಕುಡಿಯೋದರಿಂದ ರಕ್ತದ ಹರಿವು ಹೆಚ್ಚುತ್ತದೆ. ಅಷ್ಟೇ ಆಲ್ಲ ಹೃದಯದ ಮಸಲ್ ಗಳು ಸಹ ಬಲಗೊಳ್ಳುತ್ತದೆ. ಜೊತೆಗೆ ರಕ್ತದೊತ್ತಡವನ್ನು ಸಹ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ತುಳಸಿ ಚಹಾ ( ):ತುಳಸಿ ಚಹಾ ಸಹ ಅತ್ಯುತ್ತಮ ಹರ್ಬಲ್ ಟೀ ಆಗಿದ್ದು, ಇದನ್ನು ಸೇವಿಸೋದರಿಂದ ರಕ್ತನಾಳ ಆರಾಮವಾಗಿರುತ್ತೆ, ಜೊತೆಗೆ ರಕ್ತದೊತ್ತಡ ಕಡಿಮೆಯಾಗುತ್ತದೆ. ಮಿಸ್ಟ್ಲೆಟೋ ಟೀ ( ) :ರಕ್ತನಾಳನ್ನು ಹಿಗ್ಗುವಂತೆ ಮಾಡುತ್ತದೆ, ಇದರಿಂದ ರಕ್ತದ ಹರಿವು ( ) ಸರಾಗವಾಗಿ ಸಾಗುತ್ತದೆ. ಇದರಿಂದಾಗಿ ಬ್ಲಡ್ ಪ್ರೆಶರ್ ( ) ಕೂಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಕ್ಯಾಟ್ಸ್ ಕ್ಲೋ ಟೀ ( ):ಇದು ಕೂಡ ಒಂದು ರೀತಿಯ ಆಯುರ್ವೇದ ಗಿಡವಾಗಿದ್ದು, ಇದರ ಬೇರುಗಳಿಂದ ಮಾಡಿದ ಚಹಾ ಸೇವನೆಯು ದೇಹದ ಇಮ್ಯೂನಿಟಿ ( ) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಕುಡಿಯೋದರಿಂದ ರಕ್ತನಾಳಗಳು ವಿಕಸಿತವಾಗುತ್ತದೆ, ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಗಾರ್ಲಿಕ್ ಟೀ ( ):ಈ ಟೀ ಸಹ ರಕ್ತ ನಾಳಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಅಲ್ಲದೇ ಮೂತ್ರವಿಸರ್ಜನೆ ಹೆಚ್ಚಿಸುತ್ತದೆ. ಇದರಿಂದ ದೇಹದಿಂದ ಬೇಡವಾದ ಅಂಶಗಳು ಹೊರ ಹೋಗುತ್ತವೆ. ಅಲ್ಲದೇ ರಕ್ತದೊತ್ತಡವನ್ನು ನಿಯಂತ್ರಿಸುತ್ತೆ.