ಮತದಾನ ಮಾಡಿದ ಮಹಿಳೆಯರಿಗೆ ಕನ್ನಡತಿ ನ್ಯಾಚುರಲ್‌ ಬ್ಯೂಟಿ ಪಾರ್ಲರ್‌ನಿಂದ ಉಚಿತ ಐಬ್ರೊ ಭಾಗ್ಯ! ಮತದಾನ ಮಾಡಿದ ಮಹಿಳೆಯರೇ, ಇಲ್ಲಿ ನಿಮ್ಮ ಬೆರಳಿಗೆ ಹಾಕಿದ ಶಾಯಿ ಗುರುತು ತೋರಿದರೆ ಸಾಕು ನಿಮಗೆ ಉಚಿತ ಐ ಬ್ರೋ (ಕಣ್ಣಿನ ಹುಬ್ಬು ಅಲಂಕಾರ) ಭಾಗ್ಯ ಲಭಿಸಲಿದೆ! ಬಿ.ರಾಮಪ್ರಸಾದ್‌ ಗಾಂಧಿ ಹರಪನಹಳ್ಳಿ:ಮತದಾನ ಮಾಡಿದ ಮಹಿಳೆಯರೇ, ಇಲ್ಲಿ ನಿಮ್ಮ ಬೆರಳಿಗೆ ಹಾಕಿದ ಶಾಯಿ ಗುರುತು ತೋರಿದರೆ ಸಾಕು ನಿಮಗೆ ಉಚಿತ ಐ ಬ್ರೋ (ಕಣ್ಣಿನ ಹುಬ್ಬು ಅಲಂಕಾರ) ಭಾಗ್ಯ ಲಭಿಸಲಿದೆ! ಹೌದು! ಇಲ್ಲಿಯ ಮಠದ ಕೇರಿಯ ರಾಘವೇಂದ್ರ ಮಠದ ಬಳಿ ಇರುವ ಕನ್ನಡತಿ ನ್ಯಾಚುರಲ್‌ ಬ್ಯೂಟಿ ಪಾರ್ಲರ್‌ ಮಾಲಕರು ಮೇ 7 ರಂದು ನಡೆಯುವ ಲೋಕಸಭೆ ಮತದಾನ ವೇಳೆ ಮತ ಚಲಾಯಿಸಿ ಬಂದ ಮಹಿಳೆಯರಿಗೆ ಇಂತಹ ಒಂದು ಆಫರ್‌ ನೀಡಿದ್ದಾರೆ. ಬಳ್ಳಾರಿಗೆ ಶ್ರೀರಾಮುಲು ಕೊಡುಗೆ ಚೊಂಬು, ದಯವಿಟ್ಟು ಗೆಲ್ಲಿಸಬೇಡಿ: ಸಿಎಂ ಸಿದ್ದರಾಮಯ್ಯ ಮತದಾನ ಪ್ರಮಾಣ ಹೆಚ್ಚಾಗಲಿ, ಅದರಲ್ಲೂ ಹೆಚ್ಚು ಹೆಚ್ಚು ಮಹಿಳೆಯರು ಮತದಾನದಲ್ಲಿ ಪಾಲ್ಗೊಳ್ಳಲಿ ಎನ್ನುವ ಕಾರಣಕ್ಕೆ ಉಚಿತ ಐ ಬ್ರೊ ಮಾಡುವುದಾಗಿ ಘೋಷಿಸಿದ್ದಾರೆ. ಮೇ 7ರಂದು ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ನಿರಂತರವಾಗಿ ನಡೆಯುತ್ತದೆ. ಈ ಸಮಯದಲ್ಲಿ ಮತದಾನ ಮಾಡಿದ ಎಷ್ಟೇ ಮಹಿಳೆಯರು ತಮ್ಮ ಪಾರ್ಲರ್‌ಗೆ ಆಗಮಿಸಿದರೂ ಯಾವುದೇ ಹಣ ಪಡೆಯದೇ ಉಚಿತ ಐ ಬ್ರೊ ಮಾಡಲಾಗುವುದು ಎಂದು ಹೇಳುತ್ತಾರೆ ಬ್ಯೂಟಿಷಿಯನ್‌ ಕೆ.ಎಂ. ಲತಾ. ಉಚಿತ ರಾಖಿ ವಿತರಣೆ: ಈ ಹಿಂದೆ ಇವರು ಲೇಡೀಸ್‌ ಟೈಲರಿಂಗ್‌ ಶಾಪ್‌ ನಡೆಸುತ್ತಿದ್ದರು. ಆಗಲೂ ರಾಖಿ ಹಬ್ಬದಲ್ಲಿ ಸತತ ಎಂಟು ವರ್ಷ ಮಹಿಳೆಯರಿಗೆ ಉಚಿತವಾಗಿ ರಾಖಿಗಳನ್ನು ವಿತರಿಸಿ ಸಹೋದರರ ಭ್ರಾತೃತ್ವದ ಬಗ್ಗೆ ಸಂದೇಶ ನೀಡಿದ್ದರು. ಈಗ್ಗೆ 6 ತಿಂಗಳ ಹಿಂದೆ ಇವರು ಈ ಬ್ಯೂಟಿ ಪಾರ್ಲರ್‌ ಆರಂಭಿಸಿದ್ದಾರೆ. ಬಿರು ಬಿಸಿಲಿನ ಮಧ್ಯೆ ಬಿಸಿ ಏರಿದ ಬೀದರ್ ಎಲೆಕ್ಷನ್: ಬಿಜೆಪಿ ಅಭ್ಯರ್ಥಿ ಖೂಬಾಗೆ ಸಚಿವ ಖಂಡ್ರೆ ಮಗ ಸವಾಲ್! ಮತದಾನದ ಉತ್ತೇಜನಕ್ಕಾಗಿ, ಸಾಮಾಜಿಕ ಕಳಕಳಿಗಾಗಿ ನಮ್ಮ ಉಚಿತ ಐ ಬ್ರೊ ಮಾಡಲಿದ್ದೇವೆ. ಮಹಿಳೆಯರು ತಪ್ಪದೇ ಮತ ಚಲಾಯಿಸಿ, ಈ ಸೌಲಭ್ಯ ಪಡೆದುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿಷಿಯನ್‌ ಕೆ.ಎಂ.ಲತಾ.