: ಒಬ್ಬರು ವಿಪರೀತ ಖರ್ಚು ಮಾಡಿದರೆ, ಮತ್ತೊಬ್ಬರ ಸೋಮಾರಿಗಳು! ರಾಶಿಚಕ್ರದ ಪ್ರಕಾರ ಒಂದೊಂದು ರಾಶಿ ಒಂದೊಂದು ಗುಣ ಸ್ವಭಾವವನ್ನು ಹೊಂದಿದ್ದಾರೆ. ನಿಮ್ಮ ರಾಶಿಯ ಪ್ರಕಾರ ನೀವು ಯಾವುದರಲ್ಲಿ ಬೆಸ್ಟ್ ಅನ್ನೋದನ್ನು ತಿಳಿಯೋಣ. ರಾಶಿಚಕ್ರದ ಪ್ರಕಾರ ಒಂದೊಂದು ರಾಶಿ ಒಂದೊಂದು ಗುಣ ಸ್ವಭಾವವನ್ನು ಹೊಂದಿದ್ದಾರೆ. ನಿಮ್ಮ ರಾಶಿಯ ಪ್ರಕಾರ ನೀವು ಯಾವುದರಲ್ಲಿ ಬೆಸ್ಟ್ ಅನ್ನೋದನ್ನು ತಿಳಿಯೋಣ. ಮೇಷ :ಮೇಷ ರಾಶಿಯವರು ನೋಡಲು ತುಂಬಾನೆ ಸುಂದರವಾಗಿರುತ್ತಾರೆ. ನೀವು ಮೇಷರಾಶಿಯವರೇ, ಹಾಗಿದ್ರೆ ಖುಷಿ ಪಡಿ. ತುಂಬಾನೆ ಚೆಂದದ ವ್ಯಕ್ತಿ ನೀವು. ವೃಷಭ: ವೃಷಭ ರಾಶಿಯವರು ತುಂಬಾನೆ ಹಣ ಖರ್ಚು ಮಾಡುತ್ತಾರೆ. ಎಚ್ಚೆತ್ತುಕೊಳ್ಳೋದು ಬೆಸ್ಟ್ ಉಳಿತಾಯ ಮಾಡದೇ ಇದ್ರೆ ಸಮಸ್ಯೆ ಗ್ಯಾರಂಟಿ. ಮಿಥುನ: ಈ ರಾಶಿಯವರು ತುಂಬಾನೆ ಆರಾಮ ಜೀವಿ. ತಿನ್ನೋದು ಮಲಗೋದು ( ) ಅಂದ್ರೆ ಮಿಥುನ ರಾಶಿಯವರಿಗೆ ಬಲು ಇಷ್ಟ. ಕರ್ಕಾಟಕ: ಕರ್ಕಾಟಕ ರಾಶಿಯವರು ಮನರಂಜನೆಯನ್ನು ತುಂಬಾನೆ ಇಷ್ಟಪಡುವವರು. ಇವರು ಹೆಚ್ಚಾಗಿ ಜೋಕ್ ಮಾಡುತ್ತಾ, ಸುತ್ತಲಿನವರನ್ನು ನಗಿಸುತ್ತಲಿರುತ್ತಾರೆ. ಸಿಂಹ: ಸಿಂಹ ರಾಶಿಯವರಿಗೆ ಕೋಪ ಜಾಸ್ತಿ ( ), ಯಾರು ಏನೇ ಮಾತನಾಡಿದರೂ ಅವರ ಜೊತೆಗೆ ವಿವಾದ ಮಾಡುತ್ತಲೇ ಇರುತ್ತಾರೆ. ಕನ್ಯಾ: ಕನ್ಯಾ ರಾಶಿಯವರು ತುಂಬಾನೆ ಸೋಮಾರಿಗಳು, ಯಾವ ಕೆಲಸ ಮಾಡೊದಕ್ಕೂ ಇವರ ಸೋಮಾರಿತನ ಬಿಡೋದೆ ಇಲ್ಲ. ಇದರಿಂದಾಗಿ ಮುಂದೊಂದು ದಿನ ಅವರಿಗೆ ಮುಳುವಾಗೋ ಚಾನ್ಸ್ ಇದೆ. ತುಲಾ: ತುಲಾ ರಾಶಿಯವರು ತುಂಬಾನೆ ಒಳ್ಳೆಯವರು ಇವರು ಇತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇತರರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಜೆಲಸ್ ಜಾಸ್ತಿ, ಇನ್ನೊಬ್ಬರಿಗೆ ಒಳ್ಳೆಯದಾಗುತ್ತದೆ ಅಂದ್ರೆ, ಇವರಿಗೆ ಹೊಟ್ಟೆ ಹುರಿ ಆರಂಭವಾಗುತ್ತೆ. ಧನು: ಮನೆಕೆಲಸ ಮಾಡಲು ಇಷ್ಟಪಡುವ ಧನು ರಾಶಿಯವರು ಹೆಚ್ಚಾಗಿ ಪಾತ್ರೆಗಳನ್ನು ತೊಳೆಯೋದನ್ನು ( ) ಇಷ್ಟಪಡ್ತಾರೆ. ಮಕರ: ಮಕರ ರಾಶಿಯವರು ಮನಿ ಮೇಕಿಂಗ್ ಮನಸ್ಥಿತಿಯವರು. ಇವರು ಹಣ ಹೇಗೆ ಸಂಪಾದಿಸೋದು ಎನ್ನುವ ಬಗ್ಗೆ ತುಂಬಾನೆ ಯೋಚನೆ ಮಾಡ್ತಾರೆ. ಕುಂಭ: ಕುಂಭ ರಾಶಿಯವರು ಅತಿಯಾಗಿ ಯೋಚನೆ ಮಾಡುತ್ತಾರೆ. ನಾನು ಹೀಗೆ ಮಾಡಿದ್ರೆ ಹೇಗಾಗಬಹುದು? ನಾಳೆ ಏನಾಗಬಹುದು? ಎನ್ನುವ ಯೋಚನೆಯಲ್ಲೇ ಇರುತ್ತಾರೆ. ಮೀನ: ಮೀನಾ ರಾಶಿಯವರು ಒಂಥರಾ ಕುತಂತ್ರಿ ವ್ಯಕ್ತಿಗಳು ಎಂದೇ ಹೇಳಬಹುದು. ಅವರು ಹೆಚ್ಚಾಗಿ ಇನ್ನೊಬ್ಬರನ್ನು ಅವಮಾನ ಮಾಡೋದ್ರಲ್ಲಿ ನಿಪುಣರಾಗಿರ್ತಾರೆ.