12 ಗಂಟೆಕ್ಕಿಂತಲೂ ಹೆಚ್ಚು ಹೊತ್ತು ಬ್ರಾ ಧರಿಸಿದರೆ ಆರೋಗ್ಯಕ್ಕೆ ಕುತ್ತು! ಮಹಿಳೆಯರು ತಾವು ಚೆನ್ನಾಗಿ ಕಾಣಿಸಬೇಕು ಎಂದು ಬ್ರಾ ಧರಿಸುತ್ತಾರೆ. ಆದರೆ ನೀವು ಅಗತ್ಯಕ್ಕಿಂತ ಹೆಚ್ಚು ಸಮಯದವರೆಗೆ ಬ್ರಾ ಧರಿಸುತ್ತಿದ್ದರೆ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಬನ್ನಿ ಅವುಗಳ ಬಗ್ಗೆ ತಿಳಿಯೋಣ. ಮಹಿಳೆಯರು ತಾವು ಚೆನ್ನಾಗಿ ಕಾಣಿಸಬೇಕು ಎಂದು ಬ್ರಾ ಧರಿಸುತ್ತಾರೆ. ಆದರೆ ನೀವು ಅಗತ್ಯಕ್ಕಿಂತ ಹೆಚ್ಚು ಸಮಯದವರೆಗೆ ಬ್ರಾ ಧರಿಸುತ್ತಿದ್ದರೆ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಬನ್ನಿ ಅವುಗಳ ಬಗ್ಗೆ ತಿಳಿಯೋಣ. ದೇಹದ ಉತ್ತಮ ಆಕಾರ ಮತ್ತು ಸ್ತನಗಳು ಫಿಟ್ ( ) ಆಗಿ ನಿಲ್ಲುವಂತೆ ಸಪೋರ್ಟ್ ನೀಡಲು ಮಹಿಳೆಯರು ದಿನವಿಡೀ ಬ್ರಾ ಧರಿಸುತ್ತಾರೆ. ಆದರೆ ಹೀಗೆ ಮಾಡೋದು ನಿಮ್ಮ ಆರೋಗ್ಯಕ್ಕೆ ಉತ್ತಮವೇ? ದೀರ್ಘಕಾಲದವರೆಗೆ ಬ್ರಾ ಧರಿಸುವುದರಿಂದ, ನೀವು ದೇಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೊಂದಬಹುದು. ಇದರ ಬಗ್ಗೆ ತಿಳಿಯೋಣ. ಸೊಂಟ ನೋವುಸ್ಟೈಲಿಶ್ ಆಗಿ ಕಾಣಲು ಬ್ರಾ ಧರಿಸುತ್ತಿರಿ ಅನ್ನೋದೇನೋ ನಿಜಾ. ಆದರೆ ನೀವು ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕಾಲ ಬ್ರಾ ಧರಿಸಿದರೆ, ಅದು ಬೆನ್ನು ನೋವಿಗೆ () ಕಾರಣವಾಗಬಹುದು. ಇದರಿಂದ ನಿಮ್ಮ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ರಕ್ತ ಪರಿಚಲನೆಯ ಮೇಲೆ ಪರಿಣಾಮಗಳುದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಬ್ರಾ ಧರಿಸುವುದರಿಂದ, ಚರ್ಮ ಆಮ್ಲಜನಕವನ್ನು ಸರಿಯಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ದೇಹದಲ್ಲಿ ರಕ್ತ ಪರಿಚಲನೆಯ ( ) ಮೇಲೆ ಪರಿಣಾಮ ಬೀರುತ್ತದೆ. ದದ್ದು ಸಮಸ್ಯೆನೀವು ದೀರ್ಘಕಾಲದವರೆಗೆ ಬ್ರಾ ಧರಿಸಿದರೆ, ಬ್ರಾ ಇರುವ ಜಾಗಗಳಲ್ಲಿ ಒಳಗೆ ಬೆವರು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಹೆಚ್ಚು ಹೆಚ್ಚು ಬೆವರುವುದರಿಂದ ನೀವು ದದ್ದುಗಳ ಸಮಸ್ಯೆಯನ್ನು ಹೊಂದುವ ಸಾಧ್ಯತೆ ಹೆಚ್ಚಿದೆ. ಚರ್ಮ ಸಮಸ್ಯೆದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕಾಲ ಬಿಗಿಯಾದ ಬ್ರಾ ಧರಿಸುವುದರಿಂದ ಸ್ತನದ ಸುತ್ತಲೂ ಚರ್ಮದ ಸಮಸ್ಯೆಗಳು ( ) ಉಂಟಾಗಬಹುದು. ತುರಿಕೆ, ಚರ್ಮ ಕೆಂಪಾಗುವುದು, ಹೀಗೆ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಬ್ರಾ ಸ್ಟ್ರಾಪ್ ಗುರುತುದೀರ್ಘಕಾಲದವರೆಗೆ ಬ್ರಾ ಧರಿಸುವುದರಿಂದ, ಚರ್ಮದ ಮೇಲೆ ಬ್ರಾ ಗುರುತುಗಳು ಉಳಿಯುತ್ತವೆ, ಇದು ತುಂಬಾ ಕೆಟ್ಟದಾಗಿ ಕಾಣುತ್ತದೆ. ಅಲ್ಲದೇ ಬ್ರಾ ಸ್ಟ್ರಾಪ್ ( ) ಗಳಿಂದ ಬ್ಲಡ್ ಕ್ಲಾಟ್ ಆಗುವ ಸಾಧ್ಯತೆಯೂ ಹೆಚ್ಚು. ಸ್ತನಗಳಲ್ಲಿ ನೋವುಸ್ತನದ ಉತ್ತಮ ಆಕಾರಕ್ಕಾಗಿ ನೀವು ಬಿಗಿ ಬ್ರಾ ಧರಿಸಿದರೆ, ಅದು ಸ್ತನ ನೋವಿನ ( ) ಸಮಸ್ಯೆ ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚು ಸಮಯ ಬ್ರಾ ಧರಿಸಬಾರದು. ಎಷ್ಟು ಸಮಯ ಬ್ರಾ ಧರಿಸಬೇಕುಕಚೇರಿಯಿಂದ ಅಥವಾ ಹೊರಗಿನಿಂದ ಮನೆಗೆ ಬಂದ ತಕ್ಷಣ ಬ್ರಾವನ್ನು ತೆಗೆದು ಹಾಕಬೇಕು. ಇನ್ನು ನೀವು ದೀರ್ಘಕಾಲ ಹೊರಗೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ನೀವು ಹತ್ತಿ ಬಟ್ಟೆಯ ಸರಿಯಾದ ಗಾತ್ರದ ಬ್ರಾ ಧರಿಸಬೇಕು.