6 ಸೆಕೆಂಡ್ ಕಿಸ್ ಥಿಯರಿ ಬಗ್ಗೆ ನಿಮಗೇನಾದ್ರೂ ಗೊತ್ತಾ? ಪ್ರೇಮಿಗಳ ದಿನ ಬಂದೇ ಬಿಟ್ಟಿದೇ. ಜನರಂತೂ ತಮ್ಮ ಸ್ಪೇಷಲ್ ದಿನವನ್ನು ವಿಶೇಷವಾಗಿಸಲು ತಮ್ಮ ಸಂಗಾತಿಗಾಗಿ ಗಿಫ್ಟ್, ಚಾಕಲೇಟ್, ಡೇಟಿಂಗ್ ಪ್ಲ್ಯಾನ್ ಮಾಡೋದರಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಶೇಷ ದಿನದಂದು ನಾವು ನಿಮಗೆ 6 ಸೆಕೆಂಡ್ ಕಿಸ್ ಥಿಯರಿ ಬಗ್ಗೆ ಹೇಳ್ತೀವಿ ಕೇಳಿ… ಪ್ರೇಮಿಗಳ ದಿನ ಬಂದೇ ಬಿಟ್ಟಿದೇ. ಜನರಂತೂ ತಮ್ಮ ಸ್ಪೇಷಲ್ ದಿನವನ್ನು ವಿಶೇಷವಾಗಿಸಲು ತಮ್ಮ ಸಂಗಾತಿಗಾಗಿ ಗಿಫ್ಟ್, ಚಾಕಲೇಟ್, ಡೇಟಿಂಗ್ ಪ್ಲ್ಯಾನ್ ಮಾಡೋದರಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಶೇಷ ದಿನದಂದು ನಾವು ನಿಮಗೆ 6 ಸೆಕೆಂಡ್ ಕಿಸ್ ಥಿಯರಿ ಬಗ್ಗೆ ಹೇಳ್ತೀವಿ ಕೇಳಿ… ಪ್ರೇಮಿಗಳ ವಾರದ ( ) ಏಳನೇ ದಿನ ಅಂದರೆ ಫೆಬ್ರವರಿ 13 ಅನ್ನು ಕಿಸ್ ಡೇ ( )ಎಂದು ಆಚರಿಸಲಾಗುತ್ತದೆ. ಜನರು ತಮ್ಮ ಸಂಗಾತಿಯನ್ನುಚುಂಬಿಸುತ್ತಾರೆಮತ್ತು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ವಿಶೇಷ ಸಂದರ್ಭದಲ್ಲಿ, 6 ಸೆಕೆಂಡ್ ಕಿಸ್ ಥಿಯರಿ ಬಗ್ಗೆ ನೀವು ತಿಳಿದುಕೊಳ್ಳದೇ ಇದ್ದರೆ ಹೇಗೇ? 6 ಸೆಕೆಂಡ್ ಕಿಸ್ ಪರಿಣಾಮ:6 ಸೆಕೆಂಡ್ ಕಿಸ್ ಥಿಯರಿ (6 ) ಅಂದ್ರೆ ಏನು ಅಂತ ನೀವು ಯೋಚನೆ ಮಾಡ್ತಿದ್ರೆ ಕೇಳಿ… ಈ ಥಿಯರಿಯು ಸಂಬಂಧದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ, ಅಲ್ಲದೇ ಇಬ್ಬರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಈ ಸಿದ್ಧಾಂತ ಏನು ಹೇಳುತ್ತೆ?:ರಿಲೇಶನ್ ಶಿಪ್ ಎಕ್ಸ್ ಪರ್ಟ್ ( )ಆಗಿರುವ ಡಾ. ಜಾನ್ ಗಾಟ್ಮನ್ ಈ ಸಿದ್ಧಾಂತವನ್ನು ನೀಡಿದ್ದಾರೆ. 6 ಸೆಕೆಂಡುಗಳ ಕಾಲ ಚುಂಬಿಸುವುದರಿಂದ ಸಂಬಂಧದಲ್ಲಿ ಸಕಾರಾತ್ಮಕ ಪರಿಣಾಮ ಹೆಚ್ಚಾಗುತ್ತದೆ ಎಂದು ಅವರು ನಂಬಿದ್ದಾರೆ. ಇದನ್ನೆ ಅವರು ಪ್ರೇಮಿಗಳಿಗೂ ಹೇಳುತ್ತಾರೆ. ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆ:ನೀವು 6 ಸೆಕೆಂಡುಗಳ ಕಾಲ ಸಂಗಾತಿಗೆ ಕಿಸ್ ಮಾಡಿದ್ರೆ, ನಿಮ್ಮ ದೇಹದಲ್ಲಿ ಆಕ್ಸಿಟೋಸಿನ್ ( ) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರೀತಿಯ ಭಾವನೆ:6 ಸೆಕೆಂಡ್ ಕಿಸ್ ಥಿಯರಿ ಪ್ರಕಾರ, ನೀವು ಯಾರನ್ನಾದರೂ ಕಿಸ್ ಮಾಡಿದಾಗ, ನೀವು ಆ ವ್ಯಕ್ತಿಯ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ಅನುಭವಿಸುತ್ತೀರಿ. ಇದರಿಂದ ಸಂಬಂಧವು ಗಟ್ಟಿಯಾಗುತ್ತಾ ಹೋಗುತ್ತದೆ. ಇದರಿಂದ ಪ್ರೀತಿ ಗಟ್ಟಿಯಾಗಲು ಸಹಾಯ ಮಾಡುತ್ತದೆ. ಆಯಾಸ ದೂರವಾಗುತ್ತೆ:ಸಂಗಾತಿಗೆ ಮನಸಾದಗಲೆಲ್ಲಾ 6 ಸೆಕೆಂಡ್ ಕಿಸ್ ಮಾಡೋದ್ರಿಂದ ಆಯಾಸವೆಲ್ಲಾ ದೂರವಾಗುತ್ತದೆ, ಅಷ್ಟೇ ಅಲ್ಲ ಒತ್ತಡ () ದೂರವಾಗಿ ಮನಸು ಶಾಂತವಾಗುತ್ತದೆ. ಇದರಿಂದ ನಿಮ್ಮ ದಾಂಪತ್ಯ ಜೀವನವೂ ಸುಂದರವಾಗಿರಲು ಸಹಾಯ ಮಾಡುತ್ತದೆ. ವಿಶ್ವಾಸ ಹೆಚ್ಚುತ್ತದೆ:ಈ ಥಿಯರಿಯನ್ನು ನೀವು ಅನುಸರಿಸಿದ್ರೆ, ನಿಮ್ಮ ಸಂಗಾತಿಗೆ ಖಂಡಿತವಾಗಿಯೂ ನಿಮ್ಮ ಮೇಲೆ ವಿಶ್ವಾಸ ಹೆಚ್ಚಾಗುತ್ತದೆ, ಅಷ್ಟೇ ಅಲ್ಲ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಹೆಚ್ಚುತ್ತದೆ. ಮಧುರ ದಾಂಪತ್ಯ ಜೀವನದ ( ) ಬುನಾದಿಯೇ ನಂಬಿಕೆ ರೋಮ್ಯಾನ್ಸ್ ಹೆಚ್ಚುತ್ತೆ:ಕಿಸ್ ಮಾಡೋದ್ರಿಂದ ಖಂಡಿತವಾಗಿಯೂ ರೊಮ್ಯಾನ್ಸ್ ಹೆಚ್ಚಾಗುತ್ತದೆ ಅಲ್ವಾ?. ಖಂಡಿತಾ ಹೌದು. ಈ 6 ಸೆಕೆಂಡ್ ಥಿಯರಿಯ ಪ್ರಕಾರ ನೀವು ನಿಮ್ಮ ಸಂಗಾತಿಗೆಕಿಸ್ಮಾಡುತ್ತಿದ್ದರೆ, ಅಲ್ಲಿ ರೋಮ್ಯಾನ್ಸ್ () ಹೆಚ್ಚುತ್ತದೆ, ಪ್ರೀತಿಯೂ ಹೆಚ್ಚಿ ಇಂಟಿಮೆಟ್ ಕ್ಷಣ ಹುಟ್ಟುತ್ತೆ. ಕಾಣೆಯಾದ ಪ್ರೀತಿ ಮತ್ತೆ ಜಾಗೃತವಾಗುತ್ತೆ:ಹೀಗೆ ಸಂಗಾತಿಗೆ 6 ಸೆಕೆಂಡ್ ಕಿಸ್ ಮಾಡೋದ್ರಿಂದ ನಿಮ್ಮಿಬ್ಬರ ನಡುವೆ ಕೆಲಸದ ಜಂಜಾಟದಲ್ಲಿ ಮರೆಯಾಗಿದ್ದ ಪ್ರೀತಿ, ಭರವಸೆ ಮತ್ತೆ ಜಾಗೃತವಾಗುತ್ತದೆ. ಮತ್ತೆ ದಾಂಪತ್ಯ ಜೀವನ ಸುಂದರವಾಗುತ್ತದೆ.