ಇದು ಹೋಮ್ ವರ್ಕಾ ಅಥವಾ ಇಡಿ ದಾಳಿಯಾ? ಶಾಲೆ ಕೇಳ್ತಿದೆ ಅಚ್ಚರಿ ಮಾಹಿತಿ ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಹೋಮ್ ವರ್ಕ್ ನಲ್ಲಿ ಅರ್ಧ ಪಾಲಕರು ಮಾಡ್ಬೇಕು. ಕೆಲ ಕ್ರಾಫ್ಟ್, ಮಾಹಿತಿ ಮಕ್ಕಳಿಗೆ ತಿಳಿದೇ ಇರೋದಿಲ್ಲ. ಇಂಥದ್ದನ್ನು ಪಾಲಕರು ಎದ್ದು – ಬಿದ್ದು ಮಾಡಿ ಕಳಿಸ್ತಾರೆ. ಆದ್ರೆ ಕುಟುಂಬ ಮಾಹಿತಿಯನ್ನು ಕೇಳಿದ್ರೆ ಹೆಂಗೆ ಹೇಳಿ? ಮಕ್ಕಳ ಭವಿಷ್ಯದ ಬಗ್ಗೆ ಪಾಲಕರಿಗೆ ಜವಾಬ್ದಾರಿ ಇದ್ದೇ ಇರುತ್ತದೆ. ಪಾಲಕರಲ್ಲಿ ಒಬ್ಬರು ಮಕ್ಕಳ ಓದಿನ ಜವಾಬ್ದಾರಿಯನ್ನು ಹೊತ್ತುಕೊಳ್ತಾರೆ. ಇದೇ ಕಾರಣಕ್ಕೆ ವೃತ್ತಿ ಬಿಡುವವರಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿ ದಿನ ಹೋಮ್ ವರ್ಕ್ ನೀಡಲಾಗುತ್ತದೆ. ಪಾಲಕರು ಮಕ್ಕಳ ಹೋಮ್ ವರ್ಕ್ ಚೆಕ್ ಮಾಡೋದಲ್ಲದೆ ಅವರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡ್ತಾರೆ. ಒಂದೊಂದು ಸ್ಕೂಲ್ ನಿಯಮ ಒಂದೊಂದು ರೀತಿ ಇರುತ್ತದೆ. ಕೆಲ ಶಾಲೆಯಲ್ಲಿ ಮಕ್ಕಳ ಅಡ್ಮಿಷನ್ ಮುನ್ನ ಪಾಲಕರಿಗೆ ಪರೀಕ್ಷೆ ನಡೆಯುತ್ತದೆ. ಪಾಲಕರು ಬುದ್ಧಿವಂತರಾಗಿದ್ದಲ್ಲಿ ಮಾತ್ರ ಮಕ್ಕಳಿಗೆ ಅಡ್ಮಿಷನ್ ಸಿಗುತ್ತದೆ. ಇನ್ನು ಕೆಲ ಶಾಲೆಯಲ್ಲಿ ಅಡ್ಮಿಷನ್ ಫಾರ್ಮ್ ನಲ್ಲಿ ಪಾಲಕರ ವೃತ್ತಿ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಪ್ರತಿ ವರ್ಷ, ಪಾಲಕರು ಮಕ್ಕಳ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಲು ಅರ್ಹರೇ ಎಂಬುದನ್ನು ಈ ಮೂಲಕ ಪರೀಕ್ಷೆ ಮಾಡಲಾಗುತ್ತದೆ. ಇದೆಲ್ಲವೂ ಸರಿ, ಆದ್ರೆ ಹೋಮ್ ವರ್ಕ್ ರೂಪದಲ್ಲಿ ಮನೆಯ ಆರ್ಥಿಕ ಸ್ಥಿತಿಯನ್ನು ತಿಳಿಯೋದು ಎಷ್ಟು ಸರಿ?. ಮನೆಯಲ್ಲಿ ಎಷ್ಟೇ ಸಮಸ್ಯೆ ಇರಲಿ ಮಕ್ಕಳಿಗೆ ಇದು ತಿಳಿಯಬಾರದು ಎಂಬ ಉದ್ದೇಶ ಪಾಲಕರದ್ದು. ಮಕ್ಕಳಿಗೆ ತಿಳಿಯದೆ ಸಾಲ ಮಾಡಿ ಅವರನ್ನು ಓದಿಸುವ ಪಾಲಕರಿದ್ದಾರೆ. ನಿಮಗೆ ಹಣ ಹೇಗೆ ಬಂತು, ಯಾವ ಕೆಲಸ ಮಾಡುತ್ತಿದ್ದೀರಿ, ಸಾಲ () ಎಷ್ಟಿದೆ ಎನ್ನುವುದನ್ನೆಲ್ಲ ಮಕ್ಕಳ ಹೋಮ್ ವರ್ಕ್ () ಬುಕ್ ನಲ್ಲಿ ಬರೆಯುವ ಅಗತ್ಯವಿಲ್ಲ. ಇದನ್ನು ಮಕ್ಕಳಿಗೆ ಹಾಗೂ ಶಾಲೆಗೆ ತಿಳಿಸುವ ಅಗತ್ಯವೂ ಇಲ್ಲ. ಆದ್ರೆ ಚೀನಾದ ಶಾಲೆ () ಯೊಂದು ಹೋಮ್ ವರ್ಕ್ ಹೆಸರಿನಲ್ಲಿ, ಮನೆಯ ಗುಟ್ಟು ತಿಳಿಯುವ ಪ್ರಯತ್ನ ನಡೆಸಿದೆ. ಸಂಗಾತಿ ಜತೆ ಈ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿದ್ರೆ ಏಳು ಜನ್ಮದಲ್ಲೂ ಜೊತೆಯಾಗುತ್ತಾರಂತೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಈ ವಿಷ್ಯವನ್ನು ಬಹಿರಂಗಪಡಿಸಿದ್ದಾಳೆ. ಘಟನೆ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಮಗುವಿಗೆ ಹೋಮ್ ವರ್ಕ್ ಮಾಡಿಸಲು ತಾಯಿ ಬಂದಾಗ, ಹೋಮ್ ವರ್ಕ್ ವಿಷ್ಯ ನೋಡಿ ದಂಗಾಗಿದ್ದಾಳೆ. ಅಲ್ಲಿ ಕೇಳಿದ್ದ ಪ್ರಶ್ನೆಗಳು ಆಕೆ ತಲೆ ಸುತ್ತುವಂತೆ ಮಾಡಿದೆ. 14ನೇ ಶತಮಾನದಲ್ಲಿ 50 ಮಿಲಿಯನ್ ಜನರ ಸಾವಿಗೆ ಕಾರಣವಾದ ಬುಬೊನಿಕ್ ಪ್ಲೇಗ್ ಪತ್ತೆ! ಶಾಲೆ, ಮಗುವಿನ ಹೋಮ್ ವರ್ಕ್ ನಲ್ಲಿ, ಕುಟುಂಬದ ಉಳಿತಾಯ, ಸಂಪಾದನೆ, ಖರ್ಚು, ಸಾಲದ ಬಗ್ಗೆ ಮಾಹಿತಿ ಕೇಳಿದ್ದಾರೆ. ಶಾಲೆ ಹೋಮ್ ವರ್ಕ್ ನೀಡ್ತಾ ಇದ್ಯಾ ಇಲ್ಲ ಇಡಿ – ಸಿಬಿಐ ಕೆಲಸ ಮಾಡ್ತಿದೆಯಾ ಎಂಬುದು ಗೊತ್ತಾಗ್ತಿಲ್ಲ. ಯಾಕೆಂದ್ರೆ ಹೋಮ್ ವರ್ಕ್ ನಲ್ಲಿ ಗೃಹ ಸಾಲ, ಆಹಾರದ ವೆಚ್ಚ, ವಾಹನ ಸಾಲದ ಬಗ್ಗೆಯೂ ಕೇಳಲಾಗಿದೆ. ಇದು ಮನೆ ಕೆಲಸವಾ ಅಥವಾ ಕುಟುಂಬದ ಹಿನ್ನಲೆಯನ್ನು ಪರಿಶೀಲನೆ ಮಾಡಲಾಗ್ತಿದೆಯಾ ಎಂದು ಮಹಿಳೆ ಕೇಳಿದ್ದಾಳೆ. ಶಾಲೆ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದೆ. ಮಕ್ಕಳಿಗೆ ಮನೆಯ ಸ್ಥಿತಿಯ ಅರಿವಿರಬೇಕು. ಎಷ್ಟು ಕಷ್ಟಪಟ್ಟು ಪಾಲಕರು ನಮ್ಮನ್ನು ಓದಲು ಕಳಿಸುತ್ತಿದ್ದಾರೆ ಎಂಬುದು ಮಕ್ಕಳಿಗೆ ಗೊತ್ತಾಗಬೇಕು. ಸಾಲದ ಬಗ್ಗೆ ಮಕ್ಕಳು ತಿಳಿದಿರಬೇಕು. ಹಣದ ಮಹತ್ವ ತಿಳಿಯಲು, ಪಾಲಕರು ಹೇಗೆ ಹಣ ಗಳಿಸುತ್ತಿದ್ದಾರೆ ಎಂಬುದನ್ನು ಮಕ್ಕಳು ತಿಳಿದಾಗ ಅವರು ಕೃತಜ್ಞತೆ ವ್ಯಕ್ತಪಡಿಸುತ್ತಾರೆ ಎಂದು ಶಾಲೆ ಆಡಳಿತ ಮಂಡಳಿ ಹೇಳಿದೆ. ಆದ್ರೆ ಮಹಿಳೆ ಇದನ್ನು ವಿರೋಧಿಸಿದ್ದಾಳೆ. ಮಕ್ಕಳಿಗೆ ಹಣದ ಮಹತ್ವವನ್ನು ಹೀಗೆ ತಿಳಿಸುವ ಅಗತ್ಯವಿಲ್ಲ. ನನಗೆ ಈಗ್ಲೂ ಇದು ಯಾವ ರೀತಿಯ ಟೀಚಿಂಗ್ ಎಂಬುದು ಗೊತ್ತಾಗ್ತಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಆಕೆ ಪೋಸ್ಟ್ ವೈರಲ್ ಆಗಿದೆ. ಅನೇಕರು ಮಹಿಳೆ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. ಶಾಲೆ ಕ್ರಮವನ್ನು ಬಹುತೇಕರು ಖಂಡಿಸಿದ್ದಾರೆ. ಇನ್ನು ಕೆಲವರು, ಅಂದಾಜಿಗೆ ಈ ಫಾರ್ಮ್ ಭರ್ತಿ ಮಾಡಿ. ಯಾಕೆಂದ್ರೆ ಶಿಕ್ಷಕರಿಗೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.