ಬರ್ಗರ್ ಕಂಪನಿಯಿಂದ ಬಂಪರ್ ಆಫರ್… ನೀವೂ ಭಾಗವಹಿಸಿ 8 ಕೋಟಿ ಗೆಲ್ಲಿ ಫಾಸ್ಟ್ ಫುಡ್ ಲವರ್ ನೀವಾಗಿದ್ರೆ ಬರ್ಗರ್ ಗಳನ್ನು ಖಂಡಿತವಾಗಿಯೂ ಇಷ್ಟಪಡ್ಟೀರಿ ಅಲ್ವಾ?. ಈ ಬರ್ಗರ್ ನಿಂದಾಗಿಯೇ ನೀವು ಹಣ ಸಂಪಾದಿಸಲು ಅವಕಾಶ ಸಿಕ್ಕರೆ ಹೇಗಿರಬಹುದು ಯೋಚಿಸಿ? ಬರ್ಗರ್ ಕಂಪನಿಯೊಂದು ಇಂತಹ ಸುವರ್ಣಾವಕಾಶವನ್ನು ನೀಡುತ್ತಿದೆ. ಫಾಸ್ಟ್ ಫುಡ್ ಲವರ್ ನೀವಾಗಿದ್ರೆ ಬರ್ಗರ್ ಗಳನ್ನು ಖಂಡಿತವಾಗಿಯೂ ಇಷ್ಟಪಡ್ಟೀರಿ ಅಲ್ವಾ?. ಈ ಬರ್ಗರ್ ನಿಂದಾಗಿಯೇ ನೀವು ಹಣ ಸಂಪಾದಿಸಲು ಅವಕಾಶ ಸಿಕ್ಕರೆ ಹೇಗಿರಬಹುದು ಯೋಚಿಸಿ? ಬರ್ಗರ್ ಕಂಪನಿಯೊಂದು ಇಂತಹ ಸುವರ್ಣಾವಕಾಶವನ್ನು ನೀಡುತ್ತಿದೆ. ಮನೆಯ ಆಹಾರದ ಬದಲು ಹೊರಗಿನ ಆಹಾರವನ್ನು ತಿನ್ನಲು ಬಯಸುವ ಅನೇಕ ಜನರನ್ನು ನೀವು ನೋಡಿರಬಹುದು. ಅವರ ಈ ಅಭ್ಯಾಸವು ಅವರ ಆರೋಗ್ಯಕ್ಕೆ ಎಂದಿಗೂ ಒಳ್ಳೆಯದನ್ನು ಮಾಡದಿದ್ದರೂ, ಇಲ್ಲೊಂದು ಆಫರ್ ಈ ಫಾಸ್ಟ್ ಫುಡ್ ( )ಪ್ರಿಯರಿಗೆ ಅಚ್ಚರಿ ನೀಡುವಂತಿದೆ. ಯಾಕಂದ್ರೆ ಇದರಿಂದ ನೀವು ಹಣ ಸಂಪಾದಿಸಬಹುದು. ಹೌದು… ನೀವು ಬರ್ಗರ್ () ಪ್ರಿಯರಾಗಿದ್ರೆ ನಿಮಗೊಂದು ಸುವರ್ಣ ಅವಕಾಶ ಕಾಯುತ್ತಿದೆ. ಬರ್ಗರ್ ಪ್ರಿಯರನ್ನು ಖುಷಿಯಲ್ಲಿ ಜಿಗಿಯುವಂತೆ ಮಾಡುವ ಕೊಡುಗೆಯ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಈ ಆಫರ್ ಕೋಟಿ ರೂಪಾಯಿಗಳನ್ನು ಗೆಲ್ಲುವ ಅವಕಾಶವನ್ನು ನಿಮಗೆ ನೀಡುತ್ತದೆ. ಫಾಸ್ಟ್ ಫುಡ್ ( ) ಲವರ್ ಖಂಡಿತವಾಗಿಯೂ ಬರ್ಗರ್ ಗಳನ್ನು ಇಷ್ಟಪಡುತ್ತಾರೆ. ಇದೇ ಬರ್ಗರ್ ನಿಂದ ನೀವು ಹಣ ಸಂಪಾದಿಸಲು ಅವಕಾಶ ಸಿಕ್ಕರೆ ಏನು ಮಾಡ್ತೀರಿ? ಫಾಸ್ಟ್ ಫುಡ್ ಕಂಪನಿ - ಬರ್ಗರ್ ಕಿಂಗ್ ಅಂತಹ ಸುವರ್ಣಾವಕಾಶವನ್ನು ನೀಡುತ್ತಿದೆ. ನೀವು ನೀಡುವ ಆಫರ್ ನ್ನು ಒಪ್ಪಿಕೊಂಡರೆ, ನಿಮಗೆ ಅಮೇರಿಕನ್ ಬರ್ಗರ್ ಕಂಪನಿಯಿಂದ ದೊಡ್ಡ ಮೊತ್ತ ಹಣ ನೀಡಲಾಗುತ್ತದೆ. 8 ಕೋಟಿ ರೂಪಾಯಿ ಗೆಲ್ಲಬಹುದು:ನ್ಯೂಯಾರ್ಕ್ ಪೋಸ್ಟ್ ( ) ವರದಿಯ ಪ್ರಕಾರ, ಫ್ಲೋರಿಡಾದ ಅತ್ಯುತ್ತಮ ಫಾಸ್ಟ್ ಫುಡ್ ಚೈನ್ ಬರ್ಗರ್ ಕಿಂಗ್ ತನ್ನ ಅಭಿಮಾನಿಗಳಿಗೆ ಒಟ್ಟು 1 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ಘೋಷಿಸಿದೆ. ಇದಕ್ಕಾಗಿ, ಅವರು ಕಂಪನಿಯ ಸ್ಯಾಂಡ್ ವಿಚ್ ಅನ್ನು ತಮ್ಮದೇ ಆದ ರೀತಿಯಲ್ಲಿ ವಿನ್ಯಾಸಗೊಳಿಸಬೇಕು. ಪತ್ರಿಕಾ ಪ್ರಕಟಣೆ ತಿಳಿಸಿದಂತೆ ಬರ್ಗರ್ ಕಿಂಗ್ ( ) ತಮ್ಮ ಅತಿಥಿಗಳು ಇಷ್ಟಪಡುವ ಸ್ಯಾಂಡ್ ವಿಚ್ ಹೇಗಿರಬೇಕು ಅನ್ನೋದನ್ನು ಅತಿಥಿಗಳಿಂದಲೇ ಕೇಳಿ ತಿಳಿದುಕೊಳ್ಳುತ್ತಾರೆ. ಅದೇ ರೀತಿ ಬರ್ಗರ್ ತಯಾರಿಸಲಾಗುವುದು. ಯಾವ ವ್ಯಕ್ತಿ ಡಿಸೈನ್ ಮಾಡಿದ ಬರ್ಗರ್ ಗೆ ಹೆಚ್ಚು ಮತಗಳು ಬರುತ್ತದೆಯೋ ಅವರನ್ನು ಸ್ಪರ್ಧೆಯ ವಿಜೇತರೆಂದು ಘೋಷಿಸಲಾಗುತ್ತದೆ ಮತ್ತು 1 ಮಿಲಿಯನ್ ಯುಎಸ್ ಡಾಲರ್ ಅಂದರೆ 8 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬಹುಮಾನವನ್ನು ನೀಡಲಾಗುತ್ತದೆ. ನೀವು ಹೇಗೆ ಭಾಗವಹಿಸಬಹುದು?:ಈ ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿಯನ್ನು ಬರ್ಗರ್ ಕಿಂಗ್ ವೆಬ್ಸೈಟ್ನಲ್ಲಿ ( )ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ರಾಯಲ್ ಪರ್ಕ್ಸ್ ಅಕೌಂಟ್ ಹೊಂದಿರಬೇಕು. ಅರ್ಜಿ ಸಲ್ಲಿಸಲು ಮಾರ್ಚ್ 17 ಕೊನೆಯ ದಿನವಾಗಿದೆ. ಮೊದಲಿಗೆ, ಬರ್ಗರ್ ನ ಚಿತ್ರವನ್ನು ಎಐ ಮೂಲಕ ತಯಾರಿಸಲಾಗುತ್ತದೆ, ಇದರಿಂದ ನಿಮ್ಮ ಹೆಸರು ಎಂಟ್ರಿಯಾಗುತ್ತದೆ. ಇದರಲ್ಲಿ, ಆಯ್ಕೆಯಾದ ಅಂತಿಮ ಸ್ಪರ್ಧಿಗಳನ್ನು ಮಿಯಾಮಿಯಲ್ಲಿರುವ ಕಂಪನಿಯ ಪ್ರಧಾನ ಕಚೇರಿಗೆ ಕರೆಯಲಾಗುತ್ತದೆ ಮತ್ತು ಅವರ ಪರಿಕಲ್ಪನೆಯನ್ನು ಪರಿಷ್ಕರಿಸಲು ಅವಕಾಶ ನೀಡಲಾಗುವುದು.