ದೀರ್ಘಕಾಲದವರೆಗೆ ಮೂತ್ರ ತಡೆಹಿಡಿಯೋದರಿಂದ ಕಿಡ್ನಿಗೆ ಹಾನಿಯಾಗುತ್ತದೆಯೇ? ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುಅದು ನಿಮ್ಮ ದೇಹದ ಮೇಲೆ ಯಾವ ಅಡ್ಡಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುಅದು ನಿಮ್ಮ ದೇಹದ ಮೇಲೆ ಯಾವ ಅಡ್ಡಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಅನೇಕ ಬಾರಿ ಸಮಯದ ಕೊರತೆಯಿಂದಾಗಿ, ಕೆಲಸದಲ್ಲಿ ಬ್ಯುಸಿಯಾಗಿರೋದರಿಂದ ಅಥವಾ ಶೌಚಾಲಯದ ಕೊರತೆಯಿಂದಾಗಿ, ಜನರು ಆಗಾಗ್ಗೆ ಮೂತ್ರವನ್ನು ( ) ದೀರ್ಘಕಾಲದವರೆಗೆ ತಡೆದಿರುತ್ತಾರೆ. ನೀವು ಸಹ ಇದನ್ನು ಮಾಡಿದರೆ, ಇಂದಿನಿಂದ ಆ ಅಭ್ಯಾಸ ಬಿಟ್ಟು ಬಿಡೋದು ಉತ್ತಮ. ಏಕೆಂದರೆ ಇದು ನಿಮ್ಮ ಮೂತ್ರಪಿಂಡಗಳಿಗೆ ಮಾತ್ರವಲ್ಲದೆ ದೇಹದ ಇತರ ಭಾಗಗಳಿಗೂ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ದೀರ್ಘಕಾಲದವರೆಗೆ ಮೂತ್ರ ಹಿಡಿದಿಟ್ಟುಕೊಳ್ಳುವುದರಿಂದ ಉಂಟಾಗುವ ಹಾನಿ ಬಗ್ಗೆ ಹೆಚ್ಚಿನ ಜನರು ಪ್ರಶ್ನೆ ಮಾಡುತ್ತಿರುತ್ತಾರೆ. ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅದು ನಿಮ್ಮ ದೇಹದ ಮೇಲೆ ಯಾವ ಅಡ್ಡಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮೂತ್ರವನ್ನು ದೀರ್ಘಕಾಲ ತದೆ ಹಿಡಿಯೋದರಿಂದ ಮೊದಲನೆಯದಾಗಿ, ನಿಮ್ಮ ಮೂತ್ರಪಿಂಡಗಳು () ಸೇರಿದಂತೆ ದೇಹದಲ್ಲಿ ಸೋಂಕಿನ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಲ್ಲದೇ ಯುಟಿಐ ಸೋಂಕು ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಲ್ಲದೆ, ಹೊಟ್ಟೆಯ ಕೆಳಭಾಗದಲ್ಲಿ ನೋವು, ಪಿತ್ತಕೋಶದ ಸ್ನಾಯುಗಳು ಎಳೆಯಲು ಪ್ರಾರಂಭಿಸುತ್ತವೆ. ಮೂತ್ರ ಸೋರಿಕೆ ( ) ಸಮಸ್ಯೆಯಾಗಬಹುದು ಮತ್ತು ದೇಹದ ಅನೇಕ ಭಾಗಗಳಲ್ಲಿ ಅದರ ಅಡ್ಡಪರಿಣಾಮಗಳಿಂದಾಗಿ, ನೀವು ಗಂಭೀರ ಕಾಯಿಲೆಗಳಿಗೆ ಬಲಿಯಾಗಬಹುದು. ಸರಿಯಾದ ಸಮಯದಲ್ಲಿ ಮೂತ್ರ ಮಾಡೋದರಿಂದ ಅದರ ಪ್ರಕ್ರಿಯೆಯು ನೇರವಾಗಿ ನಡೆಯುತ್ತದೆ. ಆದರೆ ಮೂತ್ರವನ್ನು ತಡೆ ಹಿಡಿಯೋದರಿಂದ ಇದರಿಂದ ಕಿಡ್ನಿ ಮೇಲೆ ಒತ್ತಡ ಉಂಟಾಗಿ, ಅಡ್ಡಪರಿಣಾಮ ಬೀರುತ್ತದೆ. ಮೂತ್ರಪಿಂಡಗಳನ್ನು ಈ ರೀತಿ ಆರೋಗ್ಯಕರವಾಗಿರಿಸಿಕೊಳ್ಳಿಮೂತ್ರಪಿಂಡವನ್ನು ಆರೋಗ್ಯವಾಗಿಡಲು ಹೆಚ್ಚು ಹೆಚ್ಚು ನೀರು ಕುಡಿಯಿರಿ. ಸರಿಯಾದ ಸಮಯದಲ್ಲಿಮೂತ್ರಮಾಡಿ. ಅದನ್ನು ತಡೆ ಹಿಡಿಯಬೇಡಿ. ಯೋಗ ಮಾಡಿ. ನಿಮ್ಮ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಪ್ರಮಾಣವನ್ನು ಹೆಚ್ಚಿಸಿ. ಯಾವುದೇ ರೀತಿಯ ಮಾದಕ ದ್ರವ್ಯವನ್ನು ತೆಗೆದುಕೊಳ್ಳಬೇಡಿ. ಹೆಚ್ಚು ಮಸಾಲೆಯುಕ್ತ ಸ್ಪೈಸಿ ಆಹಾರವನ್ನು ( ) ಸೇವಿಸಬೇಡಿ. ಮೂತ್ರಪಿಂಡ ವೈಫಲ್ಯದ ಲಕ್ಷಣಗಳುಕಾಲಲ್ಲಿ ಊತಹಸಿವಿನ ಮೇಲೆ ಪರಿಣಾಮಉಸಿರಾಟದ ತೊಂದರೆ ( )ತುರಿಕೆಕಡಿಮೆಯಾದ ಮೂತ್ರವಿಸರ್ಜನೆಮೂತ್ರದಲ್ಲಿ ರಕ್ತಬೆಳಗ್ಗೆ ವಾಕರಿಕೆ ಅನುಭವಿಸುವುದುಕಣ್ಣುಗಳ ಬಳಿ ಊತ ಈ ಮೇಲೆ ತಿಳಿಸಿದ ಯಾವುದೇ ಲಕ್ಷಣ ನಿಮಗೆ ಕಂಡು ಬಂದಲ್ಲಿ, ಕೂಡಲೇ ವೈದ್ಯರಲ್ಲಿ ಪರೀಕ್ಷಿಸಿ. ಇಲ್ಲವಾದರೆ ಕಿಡ್ನಿ ವೈಫಲ್ಯ ( ) ಉಂಟಾಗುವ ಸಾಧ್ಯತೆ ಇದೆ. ಸಮಸ್ಯೆ ಗಂಭೀರ ರೂಪ ತಾಳುವ ಮುನ್ನ ಆರಂಭದಲ್ಲೇ ನೀವು ಎಚ್ಚರಿಕೆ ವಹಿಸಿ.