ಬೆಂಕಿ ಉಗುಳೋ ಜಲಪಾತವಿದು, ವಿಶ್ವದ ಅತ್ಯಂತ ವಿಶಿಷ್ಟ ಫಾಲ್ಸ್! ಯೊಸೆಮೈಟ್ ಫೈರ್ಫಾಲ್ ಅದ್ಭುತವಾದ ನೈಸರ್ಗಿಕ ಜಲಧಾರೆಯಾಗಿದ್ದು, ಇದನ್ನ ಫೈರ್ ಫಾಲ್ ಅಂತಾನೂ ಕರೀತಾನೆ, ಯಾಕಂದ್ರೆ, ಈ ಜಲಪಾತದಿಂದ ನೀರು ಬೀಳುತ್ತಿದ್ದರೆ, ಅಗ್ನಿಯೇ ಹರಿದು ಬರುವಂತೆ ಕಾಣಿಸುತ್ತೆ. ಅಷ್ಟಕ್ಕೂ ಈ ಜಲಪಾತ ಎಲ್ಲಿ ಅನ್ನೋದನ್ನು ನೋಡೋಣ. ಯೊಸೆಮೈಟ್ ಫೈರ್ಫಾಲ್ ಅದ್ಭುತವಾದ ನೈಸರ್ಗಿಕ ಜಲಧಾರೆಯಾಗಿದ್ದು, ಇದನ್ನ ಫೈರ್ ಫಾಲ್ ಅಂತಾನೂ ಕರೀತಾನೆ, ಯಾಕಂದ್ರೆ, ಈ ಜಲಪಾತದಿಂದ ನೀರು ಬೀಳುತ್ತಿದ್ದರೆ, ಅಗ್ನಿಯೇ ಹರಿದು ಬರುವಂತೆ ಕಾಣಿಸುತ್ತೆ. ಅಷ್ಟಕ್ಕೂ ಈ ಜಲಪಾತ ಎಲ್ಲಿ ಅನ್ನೋದನ್ನು ನೋಡೋಣ. ಯುಎಸ್ ರಾಜ್ಯ ಕ್ಯಾಲಿಫೋರ್ನಿಯಾದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿ ( ) ಒಂದು ಸೀಸನಲ್ ಜಲಪಾತವಿದೆ, ಇದನ್ನು ಹಾರ್ಸ್ಟೇಲ್ ಜಲಪಾತ ಎಂದು ಕರೆಯಲಾಗುತ್ತದೆ. ಈ ಜಲಪಾತ ಇದರ ವಿಶಿಷ್ಟತೆಯಿಂದಾಗಿಯೇ ವಿಶ್ವಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತೆ. ಅಷ್ಟಕ್ಕೂ ಅದರ ವಿಶೇಷತೆ ಏನು ಅಂತೀರಾ? ಹಾರ್ಸ್ಟೇಲ್ ಜಲಪಾತವನ್ನು ( ) ಫೈರ್ ಜಲಪಾತ ಅಂತಾನೂ ಕರೆಯಲಾಗುತ್ತೆ. ಇದೊಂದು ಸೀಸನಲ್ ಫೈರ್ ಜಲಪಾತ. ಅಂದ್ರೆ ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ, ಈ ಜಲಪಾತದ ಬೀಳುವ ತೊರೆಗಳು ಕೆಂಪು-ಕಿತ್ತಳೆ ದೀಪಗಳಿಂದ ಹೊಳೆಯುತ್ತವೆ, ಅವುಗಳನ್ನ ನೋಡಿದ್ರೆ, ಬೆಂಕಿಯೇ ನೀರಿನಂತೆ ಧುಮ್ಮಿಕ್ಕುವಂತೆ ಕಾಣಿಸುತ್ತೆ. ಅದಕ್ಕಾಗಿಯೇ ಇದನ್ನ ವಿಶಿಷ್ಟ ಜಲಪಾತ ಅನ್ನೋದು. ಆದಾಗ್ಯೂ, ಈ ಅದ್ಭುತ ದೃಶ್ಯದ ರಹಸ್ಯವು ತುಂಬಾ ಆಘಾತಕಾರಿಯಾಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಯೊಸೆಮೈಟ್ ಫೈರ್ ಫಾಲ್ ವೀಡಿಯೊವನ್ನು ಬಳಕೆದಾರರು ಪೋಸ್ಟ್ ಮಾಡಿದ್ದಾರೆ, ಅದರ ಶೀರ್ಷಿಕೆ ಹೀಗಿದೆ, ಯೊಸೆಮೈಟ್‌ನ ಹಾರ್ಸ್ಟೇಲ್ ಫಾಲ್ಸ್ ಬೆಂಕಿಯಂತೆ ಹೊಳೆಯುತ್ತದೆ. ಈ ಪರಿಣಾಮವನ್ನು ಫೆಬ್ರವರಿ ಮಧ್ಯದಿಂದ ಕೊನೆಯವರೆಗೆ ಮಾತ್ರ ನೋಡಬಹುದು. ಈ ಜಲಪಾತ ಸೂರ್ಯಾಸ್ತದ ಸಮಯದಲ್ಲಿ ಕೆಲವು ನಿಮಿಷಗಳ ಕಾಲ ಬೆಂಕಿಯೇ ಹರಿಯುವಂತೆ ಹರಿದು ಬರುತ್ತದೆ ಎಂದು ಬರೆದುಕೊಂಡಿದ್ದಾರೆ. ಯೊಸೆಮೈಟ್ ಫೈರ್ ಫಾಲ್ ರಹಸ್ಯವೇನು?ಯೊಸೆಮೈಟ್ ಫೈರ್ ಫಾಲ್ ( ) ನ್ಯಾಚುರಲ್ ಆಪ್ಟಿಕಲ್ ಇಲ್ಯೂಶನ್ ( ) ಆಗಿದ್ದು, ಇದು ಸೂರ್ಯಾಸ್ತಮಾನದ ಕಿರಣಗಳು ಹಾರ್ಸ್ಟೇಲ್ ಜಲಪಾತದಿಂದ ಬೀಳುವ ತೊರೆಗಳಿಗೆ ಸರಿಯಾದ ಕೋನದಲ್ಲಿ ಪ್ರತಿಫಲಿಸಿದಾಗ, ಅಂದರೆ ಸೂರ್ಯನ ಕಿರಣಗಳು ಈ ಜಲಪಾತದ ನೀರಿನ ಮೇಲೆ ಬಿದ್ದಾಗ ಇದು ಸಂಭವಿಸುತ್ತದೆ. ಸೂರ್ಯನ ಬೆಳಕು ನಿಖರವಾಗಿ ಜಲಪಾತದ ಮೇಲೆ ಬೀಳುತ್ತದೆ. ಇದರಿಂದ ಜಲಪಾತದ ನೀರಿನಲ್ಲಿ ಕೆಂಪು-ಕಿತ್ತಳೆ ಹೊಳಪನ್ನು ಉಂಟುಮಾಡುತ್ತದೆ, ಇದು ಜಲಪಾತಕ್ಕೆ ಬೆಂಕಿ ಹೊತ್ತಿಕೊಂಡಂತೆ ಕಾಣುತ್ತದೆ ಎಂದು . ವರದಿ ಮಾಡಿದೆ. ಈ ಅದ್ಭುತ ಸೌಂದರ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ. ನಿಜವಾಗಿ ಸೂರ್ಯಾಸ್ತಮಾನದ ಬೆಳಕು ಈ ಭ್ರಮೆಯನ್ನು ಸೃಷ್ಟಿಸುತ್ತದೆ. ಜನರು ಅದರ ಚಿತ್ರಗಳನ್ನು ತೆಗೆದುಕೊಂಡಾಗ, ಯೊಸೆಮೈಟ್ ಫೈರ್ ಫಾಲ್ ನಿಜವಾಗಿಯೂ ಬೆಂಕಿಯಿಂದ ಮಾಡಲ್ಪಟ್ಟಿದೆಯೇ ಎನ್ನುವಂತೆ ಕಾಣಿಸುತ್ತೆ. ಎಷ್ಟು ಅದ್ಭುತವಾಗಿದೆ ಅಲ್ವಾ? ಈ ಪ್ರಕೃತಿ ಸೌಂದರ್ಯ. ಯೊಸೆಮೈಟ್ ಫೈರ್ ಫಾಲ್ ಯಾವಾಗ ಕಾಣಿಸಿಕೊಳ್ಳುತ್ತದೆ?ಯೊಸೆಮೈಟ್ ಫೈರ್ ಫಾಲ್ ನೋಡಲು ಉತ್ತಮ ಸಮಯವೆಂದರೆ ಫೆಬ್ರವರಿ ಮಧ್ಯದಿಂದ ಕೊನೆಯವರೆಗೆ. ಈ ನೈಸರ್ಗಿಕ ವಿದ್ಯಮಾನವನ್ನು ಪ್ರತಿವರ್ಷ ಫೆಬ್ರವರಿ 10 ರಿಂದ 27 ರವರೆಗೆ ನೋಡಬಹುದು. ಸಂಜೆ 5:30 ರ ಸುಮಾರಿಗೆ ಸೂರ್ಯ ಮುಳುಗಿದಾಗ ( ), ಅದರ ಬೆಳಕು ಜಲಪಾತಕ್ಕೆ ಅಪ್ಪಳಿಸುತ್ತದೆ. ಆ ಸಂದರ್ಭದಲ್ಲಿ, ಈ ಅದ್ಭುತ ನೋಟವನ್ನು ಕೇವಲ 3 ನಿಮಿಷಗಳ ಕಾಲ ನೋಡಲು ಸಿಗುತ್ತೆ, ಆದ್ದರಿಂದ ಜನರು ಅದನ್ನು ನೋಡಲು ಸಂಜೆ 4 ಗಂಟೆಯಿಂದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸುತ್ತಾರೆ.