: 28 ವರ್ಷಗಳ ನಂತ್ರ ಜೈಲಿನಿಂದ ಬಂದು 23ನೇ ದಿನಕ್ಕೆ ಮತ್ತೆ ಅಂದರ್; ಯಾಕೆ ಗೊತ್ತಾ? ಅಪರಾಧ ಸಾಭೀತಾಗಿ ಜೈಲು ಸೇರಿದ ಅಪರಾಧಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವ ಮುನ್ನ ನೂರು ಬಾರಿ ಕೋರ್ಟ್ ಆಲೋಚನೆ ಮಾಡುತ್ತದೆ. ಮತ್ತೆ ಅವರಿಂದ ಸಮಾಜಕ್ಕೆ ಹಾನಿಯಾಗ್ಬಾರದು ಎಂಬುದೇ ಕೋರ್ಟ್ ಉದ್ದೇಶ. ಆದ್ರೆ ಈತ ಹೀನ ಕೃತ್ಯಮಾಡಿ ಜೈಲು ಸೇರಿ ಪೆರೋಲ್ ಸಿಕ್ಕಿದ್ರೂ ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ನಮ್ಮಲ್ಲಿ ಅಪರಾಧ ಮಾಡಿದವರ ಸಂಖ್ಯೆ ಸಾಕಷ್ಟಿದೆ. ಅದರಲ್ಲಿ ಕೆಲವರು ಮಾಡಿರೋ ಕೃತ್ಯ ಭಯಾನಕವಾಗಿದೆ. ಮಕ್ಕಳು, ವೃದ್ಧರೆನ್ನದೆ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ತಮ್ಮ ಆಸೆ ತೀರಿಸಕೊಂಡ ಪಾಪಿಗಳು ಕರುಣೆ ಇಲ್ಲದೆ ಕೊಲೆ ಮಾಡ್ತಿದ್ದಾರೆ. ಈ ವ್ಯಕ್ತಿ ಕೂಡ ಇವರಲ್ಲಿ ಒಬ್ಬ. ಕ್ರೂರ ಕೃತ್ಯವೆಸಗಿ ಜೈಲು ಸೇರಿದ್ದ. ಸಂಪೂರ್ಣ ಮೃಗದಂತೆ ವರ್ತಿಸಿದ್ದ. ಅಪರಾಧದ ಮೇಲೆ ಜೈಲು ಸೇರಿದ್ದ ಈತನನ್ನು ಕೆಲ ದಶಕಗಳ ನಂತ್ರ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದ್ರೆ ಜೈಲಿನಿಂದ ಹೊರಬಂದ ತಿಂಗಳೊಳಗೆ ಮತ್ತೆ ಜೈಲು ಸೇರಿದ್ದಾನೆ. ಆತ ಕೆಲ ನಿಯಮಗಳನ್ನು ಮುರಿದ ಕಾರಣ, ಆತನಿಗೆ ಮತ್ತೆ ಜೈಲು ಶಿಕ್ಷೆಯಾಗಿದೆ. ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಎಡ್ವಿನ್ ಹಾಪ್ಕಿನ್ಸ್ ಗೆ ಇನ್ಮುಂದೆ ಜೈಲೇ ಗತಿಯಾಗಿದೆ. ಎಡ್ವಿನ್ ಹಾಪ್ಕಿನ್ಸ್ ಮಾಡಿದ ಅಪರಾಧ () ಏನು? : ಎಡ್ವಿನ್ ಹಾಪ್ಕಿನ್ಸ್, ಸೆಪ್ಟೆಂಬರ್ 1995 ರಲ್ಲಿ, 15 ವರ್ಷ ವಯಸ್ಸಿನ ಹುಡುಗಿಯನ್ನು ಹತ್ಯೆ () ಮಾಡಿದ್ದ. ಆ ಹುಡುಗಿ ಹೆಸರು ನವೋಮಿ ಸ್ಮಿತ್. ಆಕೆ ಶಾಲೆಗೆ ಹೋಗ್ತಿದ್ದಳು. ಘಟನೆ ನಡೆದಿರೋದು ಇಂಗ್ಲೆಂಡ್ ನಲ್ಲಿ. ಎಡ್ವಿನ್ ಹಾಪ್ಕಿನ್ ಗೆ ಆಗ ಹತ್ತೊಂಬತ್ತು ವರ್ಷ ವಯಸ್ಸು. ಆತ ನಮೋಮಿ ಕತ್ತು ಕತ್ತರಿಸಿದ್ದ. ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಮನೆ ಬಳಿಯೇ ನಮೋಮಿ ಸ್ಮಿತ್ ಮೃತದೇಹ ಸಿಕ್ಕಿತ್ತು. ಡಿಎನ್ ಎ () ಪರೀಕ್ಷೆಯಲ್ಲಿ ಎಡ್ವಿನ್ ಅಪರಾಧಿ ಎನ್ನುವುದು ಸಾಭೀತಾಗಿತ್ತು. ಹಡಗಿನೊಳಗೆನೇ ಸ್ವಿಮ್ಮಿಂಗ್ ಫೂಲ್​: ಲಕ್ಷದ್ವೀಪಕ್ಕೆ ಕನೆಕ್ಟ್​ ಆಗೋ ಕ್ರೂಸ್​ ಬಗ್ಗೆ ಡಾ.ಬ್ರೋ ಇಂಟರೆಸ್ಟಿಂಗ್​ ಮಾಹಿತಿ ಇಷ್ಟು ಸಾಕ್ಷ್ಯಗಳಿದ್ರೂ ಎಡ್ವಿನ್ ಹಾಪ್ಕಿನ್ ತಾನು ಅಪರಾಧ ಮಾಡಿರೋದನ್ನು ಒಪ್ಪಿಕೊಂಡಿರಲಿಲ್ಲ. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಆತನಿಗೆ ಹದಿನೆಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತ್ರ ಈ ಶಿಕ್ಷೆಯನ್ನು ಮತ್ತೆ ಹತ್ತು ವರ್ಷಕ್ಕೆ ಹೆಚ್ಚಿಸಿತ್ತು. ಇದೀಗ ಎಡ್ವಿನ್ ನನ್ನು ಬಿಡುಗಡೆ ಮಾಡಬಹುದು ಎಂದು ಪೆರೋಲ್ ಮಂಡಳಿ ಕಳೆದ ವರ್ಷ ಹೇಳಿತ್ತು. ಪೆರೋಲ್ ಮಂಡಳಿ ನಿರ್ಧಾರದಂತೆ ಡಿಸೆಂಬರ್ ನಲ್ಲಿ ಎಡ್ವಿನ್ ಹಾಪ್ಕಿನ್ ಜೈಲಿನಿಂದ ಹೊರ ಬಂದಿದ್ದ. ಜನರ ಸುರಕ್ಷತೆ ದೃಷ್ಟಿಯಿಂದ ಪೆರೋಲ್ ಬೋರ್ಡ್ ಆತನಿಗೆ ಕೆಲ ನಿಯಮ ವಿಧಿಸಿತ್ತು. ಯಾವುದೇ ಕಾರಣಕ್ಕೂ ಹತ್ಯೆ ನಡೆದ ಕ್ಷೇತ್ರಕ್ಕೆ ಹೋಗ್ಬಾರದು, ಮಕ್ಕಳ ಹತ್ತಿರಕ್ಕೆ ಹೋಗಬಾರದು ಎಂದು ಪರೋಲ್ ಬೋರ್ಡ್ ಕಟ್ಟುನಿಟ್ಟಾಗಿ ಹೇಳಿತ್ತು. ಸಾಯೋ ಹೊತ್ತಲ್ಲೂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗೆ ಗ್ರೇಡ್ ನೀಡಿದ ಟೀಚರ್! ಎಡ್ವಿನ್ ಹಾಪ್ಕಿನ್ ಹೊರ ಬರ್ತಿರುವ ವಿಷ್ಯ ಕೇಳಿಯೇ ನಮೋಮಿ ಸ್ಮಿತ್ ಪಾಲಕರು ಭಯಗೊಂಡಿದ್ದರು. ಈ ಮಧ್ಯೆ ಆಕೆ ಅಣ್ಣ ಡೆವಿಡ್ ತಂಗಿಯನ್ನು ನೆನಪು ಮಾಡಿಕೊಂಡಿದ್ದ. ಸಾವಿಗೆ ಎರಡು ದಿನ ಮೊದಲು ನಾನು ತಂಗಿಯನ್ನು ನೋಡಿದ್ದೆ. ಸ್ವಿಮ್ಮಿಂಗ್ ಮುಗಿಸಿ ಬರ್ತಿದ್ದ ಆಕೆ, ಮೀನು, ಚಿಪ್ಸ್ ಖರೀದಿಗೆ ಹಣ ನೀಡುವಂತೆ ಪೀಡಿಸುತ್ತಿದ್ದಳು. ಆದ್ರೆ ಎರಡು ದಿನಗಳ ನಂತ್ರ ಅಮ್ಮನ ಫೋನ್ ಬಂತು. ನಮೋಮಿ ಸಾವನ್ನಪ್ಪಿದ್ದಾಳೆ ಎಂಬ ವಿಷ್ಯ ಗೊತ್ತಾಯ್ತು. ಮನೆಗೆ ಬಂದ್ರೆ ಮನೆ ತುಂಬ ಪೊಲೀಸರಿದ್ದರು. ಆಕೆ ಕತ್ತು ಕತ್ತರಿಸಲಾಗಿತ್ತು. ಆಕೆ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಹೇಳಿದ್ದರು ಎಡ್ವಿನ್ ಹಾಪ್ಕಿನ್ ಮೃಗಗಳಿಗಿಂತ ಕೆಟ್ಟದ್ದಾಗಿ ನಡೆದುಕೊಂಡಿದ್ದ. ಅವನಂತೆ ಮೃಗಗಳೂ ವರ್ತಿಸೋದಿಲ್ಲ ಎಂದು ಡೆವಿಡ್ ಹೇಳಿದ್ದ. ಪೆರೋಲ್ ಮೇಲೆ ಹೊರ ಬಂದ ಎಡ್ವಿನ್ ವರ್ತನೆಯಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಲಿಲ್ಲ. ಕೆಲ ನಿಯಮಗಳನ್ನು ಆತ ಮುರಿದಿದ್ದಾನೆ. ಇದೇ ಕಾರಣಕ್ಕೆ ಪೆರೋಲ್ ಬೋರ್ಡ್ ಆತನನ್ನು ಮತ್ತೆ ಜೈಲಿಗಟ್ಟಿದೆ. ಇನ್ಮುಂದೆ ಆತನ ಬಿಡುಗಡೆ ಸಾಧ್ಯವಿಲ್ಲ. ಆತನಿಗೆ ಪೆರೋಲ್ ಸಿಗೋದಿಲ್ಲವೆಂದು ಹೇಳಿಕೆ ನೀಡಿದೆ.