ಫೇರ್‌ನೆಸ್ ಕ್ರೀಂ ಬಳಸೋದ್ರಿಂದ ನಿಜಕ್ಕೂ ಬೆಳ್ಳಗಾಗ್ಬೋದಾ? ಬೆಳ್ಳಗೆ ಆಗ್ಬೇಕೆಂದು ನಿರಂತರ ಫೇರ್‌ನೆಸ್ ಕ್ರೀಂ ಬಳಸ್ತೀರಾ? ಹೀಗೆ ಮಾಡೋದ್ರಿಂದ ಬೆಳ್ಳಗಾಗ್ತೀರೋ ಇಲ್ವೋ, ಗಂಭೀರ ಕಾಯಿಲೆಯನ್ನು ನೀವು ಆಹ್ವಾನಿಸ್ತಿರೋದಂತೂ ಹೌದು ಅಂತಾರೆ ಸಂಶೋಧಕರು! ಬಿಳಿಯಾಗಬೇಕೆಂದು ಫೇರ್‌ನೆಸ್ ಕ್ರೀಮನ್ನು ವರ್ಷಗಳಿಂದ ಹಚ್ಚುತ್ತಾ ಬಂದಿದ್ದೀರಾ? ಒಂದು ಕ್ರೀಂ ವರ್ಕ್ ಆಗುತ್ತಿಲ್ಲವೆಂದು ಮತ್ತೊಂದು ಕ್ರೀಂ ಹಚ್ಚಿ ಪ್ರಯೋಗ ಮಾಡ್ತಿದೀರಾ? ಹೀಗೆಲ್ಲ ಮಾಡಿದ್ರಿಂದ ನೀವು ಬೆಳ್ಳಗಾಗಿದ್ದೀರಾ? ಖಂಡಿತಾ ಇಲ್ಲ. ಇಷ್ಟಕ್ಕೂ ಬೆಳ್ಳಗಿದ್ರೇ ಸೌಂದರ್ಯ ಅನ್ನೋದನ್ನು ತಲೆಯಿಂದ ತೆಗೆದು ಹಾಕಿ ಮತ್ತು ಫೇರ್‌ನೆಸ್ ಕ್ರೀಗೆ ಗುಡ್ ಬೈ ಹೇಳಿ. ಏಕೆಂದ್ರೆ ನೀವು ಸೌಂದರ್ಯ ಹೆಚ್ಚಿಸಲು ಬಳಸುತ್ತಿರುವ ಅದೇ ಕ್ರೀಂ ನಿಮ್ಮ ಆರೋಗ್ಯ ಹಾಳು ಮಾಡುತ್ತಿರಬಹುದು! ಅಷ್ಟೇ ಏಕೆ, ಅದು ಗಂಭೀರ ಸಮಸ್ಯೆಗೆ ನಿಮ್ಮನ್ನು ನೂಕಬಹುದು. 'ವಿಶ್ವ ಆರೋಗ್ಯ ಸಂಸ್ಥೆ' ಪ್ರಕಾರ, ನಾಲ್ಕು ಮಹಿಳೆಯರಲ್ಲಿ ಮೂವರು ಫೇರ್‌ನೆಸ್ ಕ್ರೀಮ್ ಬಳಸುತ್ತಾರೆ. ಮುಖದ ಮೇಲಿನ ಕಪ್ಪು ಕಲೆಗಳನ್ನು ಮರೆಮಾಚಲು ಮತ್ತು ಮುಖದ ಕಾಂತಿ ಹೆಚ್ಚಿಸಲು ಮಹಿಳೆಯರು ಫೇರ್ ನೆಸ್ ಕ್ರೀಮ್ ಬಳಸುತ್ತಾರೆ ಎಂದು ಬ್ರಿಟನ್ ನ ರಾಷ್ಟ್ರೀಯ ಆರೋಗ್ಯ ಸೇವೆ ಹೇಳಿಕೊಂಡಿದೆ. ಫೇರ್‌ನೆಸ್ ಕ್ರೀಂಗಳಲ್ಲಿನ ರಾಸಾಯನಿಕಗಳು!ಫೇರ್‌ನೆಸ್ ಕ್ರೀಮ್‌ಗಳ ಆರಂಭಿಕ ಫಲಿತಾಂಶಗಳು ಆಶಾದಾಯಕವಾಗಿ ತೋರುತ್ತದೆಯಾದರೂ, ದೀರ್ಘಕಾಲದ ಅಥವಾ ದಿನನಿತ್ಯದ ಬಳಕೆಯು ಬಹಳಷ್ಟು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಫೇರ್‌ನೆಸ್ ಕ್ರೀಮ್‌ಗಳಲ್ಲಿನ ಹಾನಿಕಾರಕ ರಾಸಾಯನಿಕಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು, ಹಾಗಾಗಿ, ತಜ್ಞರು ಇಂಥ ಕ್ರೀಂಗಳ ಅತಿಯಾದ ಬಳಕೆಯಿಂದ ದೂರವಿರಲು ಸಲಹೆ ನೀಡುತ್ತಾರೆ. ಫೇರ್‌ನೆಸ್ ಕ್ರೀಮ್ ಹಚ್ಚುವುದರಿಂದ ಆಗುವ ಅನಾನುಕೂಲಗಳುಫೇರ್‌ನೆಸ್ ಕ್ರೀಮ್ ಅನ್ನು ಹಚ್ಚುವುದರಿಂದ ನೀವು ಬೆಳ್ಳಗೆ ಮತ್ತು ಸುಂದರಿಯಾಗುತ್ತೀರಿ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಇದು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.