2023: ದೀಪಿಕಾ ಪಡುಕೋಣೆ - ಖುಷಿ ಕಪೂರ್‌ವರೆಗೆ ಅತ್ಯಂತ ಸ್ಟೈಲಿಶ್ ಸೆಲೆಬ್ರಿಟೀಸ್! ಫ್ಯಾಶನ್ ಲೋಕದಲ್ಲಿ ಈ ವರ್ಷ ಹಲವಾರು ಸೆಲೆಬ್ರಿಟಿಗಳು ಮಿಂಚಿದ್ದಾರೆ. ತಮ್ಮ ಡ್ರೆಸ್ಸಿಂಗ್ ಸೆನ್ಸ್, ಸ್ಟೈಲ್ ಮತ್ತು ಫ್ಯಾಷನ್ ಮೂಲಕ ಹೆಚ್ಚಾಗಿ ಸದ್ದು ಮಾಡಿದ ಹಾಗೂ ಅಭಿಮಾನಿಗಳ ಮನಸ್ಸು ಗೆದ್ದ ಸೆಲೆಬ್ರಿಟಿಗಳು ಯಾರು ಯಾರು ನೊಡೋಣ… ಫ್ಯಾಶನ್ ಲೋಕದಲ್ಲಿ ಈ ವರ್ಷ ಹಲವಾರು ಸೆಲೆಬ್ರಿಟಿಗಳು ಮಿಂಚಿದ್ದಾರೆ. ತಮ್ಮ ಡ್ರೆಸ್ಸಿಂಗ್ ಸೆನ್ಸ್, ಸ್ಟೈಲ್ ಮತ್ತು ಫ್ಯಾಷನ್ ಮೂಲಕ ಹೆಚ್ಚಾಗಿ ಸದ್ದು ಮಾಡಿದ ಹಾಗೂ ಅಭಿಮಾನಿಗಳ ಮನಸ್ಸು ಗೆದ್ದ ಸೆಲೆಬ್ರಿಟಿಗಳು ಯಾರು ಯಾರು ನೊಡೋಣ… ಸೋನಮ್ ಕಪೂರ್ ಅಹುಜಾ ( )ಸೋನಮ್ ಕಪೂರ್ ಫ್ಯಾಷನ್ನಲ್ಲಿ ಬೆಸ್ಟ್. ಅವರ ಚಲನಚಿತ್ರ ಕರಿಯರ್ ಪ್ರಾರಂಭವಾಗುವ ಮೊದಲೇ, ಅವರು ತಮ್ಮ ಫ್ಯಾಷನ್ ಸೆನ್ಸ್ ಗೆ ಹೆಸರುವಾಸಿಯಾಗಿದ್ದರು ಮತ್ತು ಜೊತೆಗೆ ಹಲವಾರು ಫ್ಯಾಷನ್ ಶೋಗಳಲ್ಲಿ ಭಾಗಿಯಾಗುತ್ತಿದ್ದರು. ಅವರು ಇಂದಿಗೂ ಅತ್ಯಂತ ಸ್ಟೈಲಿಶ್ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅಥಿಯಾ ಶೆಟ್ಟಿ ( )ತನ್ನ ಇನ್ಸ್ಟಾಗ್ರಾಮ್ ಫೀಡ್‌ನಿಂದ ಹಿಡಿದು ಫ್ಯಾಷನ್ ವೀಕ್‌ಗಳಲ್ಲಿ ಮಾಡುವುದು ಮತ್ತು ಅತಿಥಿಯಾಗಿ ಆಹ್ವಾನಿಸಲ್ಪಡುವವರೆಗೆ, ಅಥಿಯಾ ಶೆಟ್ಟಿ ಬೆಸ್ಟ್ ಫ್ಯಾಷನಿಸ್ಟ್ ಆಗಿದ್ದಾರೆ. ಸಿನಿಮಾಗಳಲ್ಲಿ ಗೆಲ್ಲದಿದ್ದರೂ ಅಥಿಯಾ ಈ ವರ್ಷ ಭಾರತದ ಅತ್ಯಂತ ಸ್ಟೈಲಿಶ್ ವಾಗ್ ಎಂದು ಕರೆಯಲ್ಪಟ್ಟಿದ್ದಾರೆ. ಆಲಿಯಾ ಭಟ್ ( )ಪಕ್ಕದ ಮನೆಯ ಹುಡುಗಿ ಲುಕ್ ನಿಂದ ಸಖತ್ ಫ್ಯಾಷನಿಸ್ಟ್ ಆಗಿ ಬದಲಾಗಿದ್ದಾರೆ. ಕೊರೋನಾ ಬರೋಕ್ಕಿಂತ ಮುಂಚಿನ ತನ್ನ ಸಿಂಪಲ್ ಲುಕ್ ನಿಂದ ಹಿಡಿದು ಇಂದಿನ ದಿವಾವರೆಗೆ, ಆಲಿಯಾ ಪ್ರಸ್ತುತ ಅತ್ಯಂತ ಸ್ಟೈಲಿಶ್ ತಾರೆಗಳಲ್ಲಿ ಒಬ್ಬರು. ರಣವೀರ್ ಸಿಂಗ್ ( )ರಣವೀರ್ ಸಿಂಗ್ ಅವರ ನಟನೆ ಎಷ್ಟೊಂದು ಅದ್ಭುತವಾಗಿರುತ್ತೋ, ಅವರ ಫ್ಯಾಷನ್ ಪ್ರಜ್ಞೆ ಕೂಡ ಸಖತ್ತಾಗಿರುತ್ತೆ. ಅವರ ಸ್ಟೈಲ್ ಯಾರೂ ಯೋಚಿಸಲು ಸಾಧ್ಯವೇ ಇರದಂತೆ ಇರುತ್ತೆ. ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮತ್ತು ಸ್ಟೈಲ್ ನಿಂದಾಗಿ ರಣವೀರ್ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಪ್ರಿಯಾಂಕಾ ಚೋಪ್ರಾ ( )ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ತಾರೆಯಿಂದ ಹಾಲಿವುಡ್ ನಾಯಕಿಯಾದ ಪ್ರಿಯಾಂಕಾ ಚೋಪ್ರಾ ಅವರ ಫ್ಯಾಷನ್ ಸೆನ್ಸ್ ಬಗ್ಗೆ ಹೇಳೋದೆ ಬೇಡ.. ಅವರು ತಮ್ಮ ಹದಿಹರೆಯದ ವರ್ಷಗಳಿಂದ ಫ್ಯಾಷನ್ ಇಂಡಸ್ಟ್ರಿಯಲ್ಲಿದ್ದಾರೆ. ಇಂದಿಗೂ ಅವರ ಸ್ಟೈಲ್ ನೋಡೋದೆ ಚೆಂದ. ಬಾಬಿಲ್ ಖಾನ್ ( )ಬಾಲಿವುಡ್ಗೆ ಬಂದಾಗ ಬಾಬಿಲ್ ಖಾನ್ ಹೊಸಬ, ಆದರೆ ಇರ್ಫಾನ್ ಖಾನ್ ಅವರ ಮಗ ಈ ವರ್ಷ ಇನ್ಸ್ಟಾಗ್ರಾಮ್ನಲ್ಲಿ ತನ್ನ ಫ್ಯಾಷನ್ ಸೆನ್ಸ್ ನಿಂದಾಗಿ ಅಲೆಗಳನ್ನು ಸೃಷ್ಟಿಸಿದ್ದಾರೆ. ಆಕರ್ಷಕ ಫ್ರೆಂಡ್ಲಿ ಲುಕ್ ನಿಂದ ಹಿಡಿದು ಚಿಕ್ ಫ್ಯಾಷನ್ ಗ್ರೂಪ್ ವರೆಗೂ ಅವರ ಫ್ಯಾಷನ್ ಸೆನ್ಸ್ ತುಂಬಾನೆ ಚೆನ್ನಾಗಿದೆ. ಖುಷಿ ಕಪೂರ್ ( )ಖುಷಿ ಅವರ ಸ್ಟೈಲಿಸ್ಟಿಕ್ ಲುಕ್ ನೋಡಲು ಅವರ ಇನ್ಸ್ಟಾಗ್ರಾಮ್ ಅನ್ನು ಒಮ್ಮೆ ನೋಡಬೇಕು. ಸೋನಮ್ ಕಪೂರ್ ಅವರ ಸೋದರ ಸಂಬಂಧಿ ಮತ್ತು ಜಾನ್ವಿ ಕಪೂರ್ ಅವರ ತಂಗಿ ಖುಷಿ ನಿಸ್ಸಂದೇಹವಾಗಿ ಸ್ಟೈಲಿಶ್ ನಟಿ ಹೌದು. ಜೊತೆಗೆ ಈ ವರ್ಷ ಖುಷಿ ಫ್ಯಾಷನ್ ಇಂಡಸ್ಟ್ರಿಯಲ್ಲಿ ಸಹ ಗುರುತಿಸಿಕೊಂಡರು. ಭೂಮಿ ಪೆಡ್ನೇಕರ್ ( )ಭೂಮಿ ಪೆಡ್ನೇಕರ್ ಸದ್ದಿಲ್ಲದೆ ಈ ವರ್ಷದ ನಿಜವಾದ ಫ್ಯಾಷನ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಅವರ ಲುಕ್ ಯಾವಾಗಲೂ ಪ್ರಾಕ್ಟಿಕಲ್ ಆಗಿತ್ತು ಮತ್ತು ಈ ವರ್ಷ ತಮ್ಮ ಡ್ರೆಸ್ಸಿಂಗ್ ಮತ್ತು ಸ್ಟೈಲಿಂಗ್ಗ್ ನಿಂದಾಗಿ ಮತ್ತಷ್ಟು ಗುರುತಿಸಿಕೊಂಡರು. ದೀಪಿಕಾ ಪಡುಕೋಣೆ ( )ದೀಪಿಕಾ ಅವರ ಸ್ಟೈಲಿಸ್ಟಿಕ್ ಆಯ್ಕೆಗಳ ಬಗ್ಗೆ ಮಾತನಾಡಲು ಹೊರಟರೆ ಪದಗಳೇ ಸಾಕಾಗಲ್ಲ. ಇವರ ಹೆಸರು 2023 ರಲ್ಲಿ ಅನೇಕ ಅಂತಾರಾಷ್ಟ್ರೀಯ ಅತ್ಯುತ್ತಮ ಉಡುಪುಗಳ ಲಿಸ್ಟ್ ನಲ್ಲಿ ಅಗ್ರಸ್ಥಾನದಲ್ಲಿದೆ. ಇವರ ಡ್ರೆಸ್ಸಿಂಗ್ ಸೆನ್ಸ್ ನೋಡಿದ್ರೆ, ದೀಪಿಕಾ ಈ ವರ್ಷದ ಮೋಸ್ಟ್ ಸ್ಟೈಲಿಶ್ ನಟಿ ಅಂದ್ರೆ ತಪ್ಪೇ ಅಲ್ಲ ಬಿಡಿ.