ಪಂಚೆಯುಟ್ಟು ಸಿಕ್ಸ್ ಪ್ಯಾಕ್ ತೋರಿಸಿದ ಗೀತಾ ಸೀರಿಯಲ್‌ನ ಧನುಷ್ : ಎಂದ ಹುಡುಗೀರು ಗೀತಾ ಸೀರಿಯಲ್ ಖ್ಯಾತಿಯ ಧನುಷ್ ಗೌಡ, ಹೊಸ ಫೋಟೋವೊಂದನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದು, ಫೋಟೋ ಸಖತ್ ವೈರಲ್ ಆಗ್ತಿದೆ. ಗೀತಾ ಸೀರಿಯಲ್ ಖ್ಯಾತಿಯ ಧನುಷ್ ಗೌಡ, ಹೊಸ ಫೋಟೋವೊಂದನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದು, ಫೋಟೋ ಸಖತ್ ವೈರಲ್ ಆಗ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ನಲ್ಲಿ ( ) ವಿಜಯ್ ಪಾತ್ರ ನಿರ್ವಹಿಸುತ್ತಿರುವ ನಟ ಧನುಷ್ ಗೌಡ ಸೋಶಿಯಲ್ ಮೀಡೀಯಾದಲ್ಲಿ ಸಖತ್ ಆಗಿ ಆಕ್ಟೀವ್ ಆಗಿರ್ತಾರೆ. ಯಾವಾಗಲೂ ಒಂದಲ್ಲ ಒಂದು ಫೋಟೊ ಶೇರ್ ಮಾಡುತ್ತಿರುತ್ತಾರೆ. ಫಿಟ್ನೆಸ್ ಫ್ರೀಕ್ ಆಗಿರುವ ಧನುಷ್ ( ) ಕಳೆದ ಕೆಲವು ದಿನಗಳಿಂದ ತಮ್ಮ ಸಿಕ್ಸ್ ಪ್ಯಾಕ್ ತೋರಿಸುವ ಫೋಟೋಗಳನ್ನೇ ಶೇರ್ ಮಾಡುತ್ತಿದ್ದು, ನೆಚ್ಚಿನ ನಾಯಕನ ಕಟ್ಟುಮಸ್ತಾದ ಮಸಲ್ಸ್ ಬಾಡಿ ನೋಡಿ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ಇದೀಗ ಮತ್ತೆಧನುಷ್ಪಂಚೆಯುಟ್ಟು, ಶರ್ಟ್ ಲೆಸ್ ಆಗಿ, ಹಗ್ಗದಂತಿರೋ ಚಿನ್ನದ ಸರವನ್ನು ಕತ್ತಿಗೆ ಹಾಕಿಕೊಂಡು, ಕೈಯಲ್ಲಿ ಚಿನ್ನದ ಖಡಗ ಹಾಕಿಕೊಂಡು, ತಮ್ಮ ಸಿಕ್ಸ್ ಪ್ಯಾಕ್ ದೇಹ ( ) ಪ್ರದರ್ಶನ ಮಾಡಿದ್ದು, ಸದ್ಯಕ್ಕಂತೂ ಈ ಫೋಟೋ ವೈರಲ್ ಆಗುತ್ತಿದೆ. ಗೀತಾ ಸೀರಿಯಲ್ ನ ನೆಚ್ಚಿನ ನಟನ ಶರ್ಟ್ ಲೆಸ್ ಸಿಕ್ಸ್ ಪ್ಯಾಕ್ ಫೋಟೋ ವೈರಲ್ ಆಗುತ್ತಿದ್ದಂತೆ, ಜನರು ಜಸ್ಟ್ ಲುಕಿಂಗ್ ಲೈಕ್ ಅ ವಾವ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ತುಂಬಾನೆ ಹಾಟ್ ಆಗಿ ಕಾಣುತ್ತಿದ್ದೀರಿ ಎಂದು ಸಹ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ತುಂಬಾನೆ ಸೂಪರ್ ಆಗಿದೆ ಫೋಟೋ ಶೂಟ್, ಪಂಚೆಯಲ್ಲಿ ಚೆನ್ನಾಗಿ ಕಾಣಿಸುತ್ತೀರಿ. ದೃಷ್ಟಿ ಬೀಳಬಹುದು ನಿಮಗೆ, ನಿಮ್ಮ ಬಾಡಿ ತುಂಬಾನೆ ಸಖತ್ ಆಗಿದೆ. ಫೈರ್ ಎಂದು ಅಭಿಮಾನಿಗಳು ಒಂದೊಂದಾಗಿ ಕಾಮೆಂಟ್ ಮಾಡಿದ್ದಾರೆ. ಗೋಲ್ಡನ್ ಜರಿ ಪಂಚೆ, ಕುತ್ತಿಗೆ, ಕೈಯಲ್ಲಿ ಚಿನ್ನಭಾರಣ ಧರಿಸಿರುವ ಧನುಷ್ ಗೌಡ ಫೋಟೋಗೆ ರಾಮಾಚಾರಿ ಸೀರಿಯಲ್ ಖ್ಯಾತಿಯ ಚಾರು ಅಂದ್ರೆ ಮೌನ ಗುಡ್ಡೆಮನೆ ( ) ಸಹ ಕಾಮೆಂಟ್ ಮಾಡಿದ್ದು, ಅವರು ಬಂಗಾರಪ್ಪ ಎಂದು ಕರೆದಿದ್ದಾರೆ. ಫಿಟ್ನೆಸ್ () ಬಗ್ಗೆ ತುಂಬಾನೆ ಕಟ್ಟುನಿಟ್ಟಾಗಿರುವ ಧನುಷ್, ಒಂದು ದಿನವೂ ಮಿಸ್ ಮಾಡದೇ ವರ್ಕ್ ಔಟ್ ಮಾಡುತ್ತಾರೆ. ತಮ್ಮ ಹಾರ್ಡ್ ವರ್ಕ್ ಫಲವೇ ಈ ರೀತಿಯಾಗಿ ಬಾಡಿ ಬಿಲ್ಡ್ ಮಾಡಲು ಸಾಧ್ಯ ಆಯ್ತು ಅಂತಾನೂ ಹೇಳುತ್ತಾರೆ ಧನುಷ್ ಗೌಡ.