ಭರ್ಜರಿ ಬ್ಯಾಚುಲರ್ಸ್‌ ಏಂಜೆಲ್‌ಗಳ ಬಿಗಿದಪ್ಪಿದ ಕ್ರೇಜಿಸ್ಟಾರ್‌ ರವಿಚಂದ್ರನ್‌: ನಾಟಿ ರವಿಮಾಮ ಎಂದ ಫ್ಯಾನ್ಸ್ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವಿದೇಶದಲ್ಲಿ ಹೋಗಿ ರಿಯಾಲಿಟಿ ಶೋ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್‌ ಏಂಜೆಲ್ಸ್‌ಗಳ ಜೊತೆಗೆ ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭರ್ಜರಿಯಾಗಿಯೇ ಪೋಸ್‌ ಕೊಟ್ಟಿದ್ದಾರೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವಿದೇಶದಲ್ಲಿ ಹೋಗಿ ರಿಯಾಲಿಟಿ ಶೋ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್‌ ಏಂಜೆಲ್ಸ್‌ಗಳ ಜೊತೆಗೆ ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭರ್ಜರಿಯಾಗಿಯೇ ಪೋಸ್‌ ಕೊಟ್ಟಿದ್ದಾರೆ. ಭರ್ಜರಿ ಬ್ಯಾಚುಲರ್ಸ್‌ ಶೋನ ಜಗಮಗ ಜಗ್ಗಪ್ಪನ ಜೋಡಿಯಾಗಿರುವ ಲಾಸ್ಯ ನಾಗರಾಜ್‌ ಅವರು ಕ್ರೇಜಿಸ್ಟಾರ್‌ ರವಿಚಂದ್ರನ್‌ ಭರ್ಜರಿ ಪೋಸ್‌ ನೀಡಿದ್ದಾರೆ. ಮಲೇಷ್ಯಾದಲ್ಲಿ ನಡೆಯುತ್ತಿರುವ ರಿಯಾಲಿಟಿ ಶೋ ಬಿಡುವಿನ ಸಮಯದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರೊಂದಿಗೆ ಕಂಟೆಸ್ಟೆಂಟ್‌ಗಳು ಭರ್ಜರಿ ಎಂಜಾಯ್‌ ಮಾಡುತ್ತಿದ್ದಾರೆ. ಕುರಿಗಾಹಿ ಹಾಡುಗಾರ ಹನುಮಂತನ ಜೋಡಿ ಮಾಡೆಲ್‌ ಆಸಿಯಾ ಬೇಗಂ ಕ್ರೇಜಿಸ್ಟಾರ್‌ ರವಿಚಂದ್ರನ್‌ ಜೊತೆಗೆ ವಿಭಿನ್ನ ಪೋಸ್‌ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಕನ್ನಡದ ಮಾಡೆಲ್‌ ಮಾಡೆಲ್‌ ಆಸಿಯಾ ಬೇಗಂ ಕ್ರೇಜಿಸ್ಟಾರ್‌ ರವಿಚಂದ್ರನ್‌ ಜೊತೆಗೆ ವಿಭಿನ್ನ ಪೋಸ್‌ ಕೊಟ್ಟು ಫೋಟೋ ತೆಗೆಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಹಳ್ಳಿಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋನಿಂದ ಪರಿಚಿತವಿರುವ ಐಶ್ವರ್ಯಾ ಈಗ ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲೂ ಏಂಜೆಲ್ಸ್‌ ಆಗಿ ಭಾಗವಹಿಸಿದ್ದಾಳೆ. ಮಂಗಳಗೌರಿ ಮದುವೆ ಧಾರವಾಹಿ ನಟಿ ಯಶಸ್ವಿನಿ ಗೌಡ ಕೂಡ ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ಗಿಲ್ಲಿನಟನ ಜೋಡಿಯಾಗಿ ಭಾಗವಹಿಸಿದ್ದು, ಮಿಂಚುತ್ತಿದ್ದಾರೆ. ಜೀ ಕನ್ನಡದ ಭಾಗ್ಯಲಕ್ಷ್ಮಿ, ಲಕ್ಷ್ಮೀಬಾರಮ್ಮ ಸೇರಿ ವಿವಿಧ ಧಾರಾವಾಹಿಗಳಲ್ಲಿ ಮಿಂಚಿದ ಆಶಾ ಅಯ್ಯನರ್‌ ಅವರೂ ಕೂಡ ಕ್ರೇಜಿಸ್ಟಾರ್‌ ರವಿಚಂದ್ರನ್‌ ಜೊತೆಗೆ ಭರ್ಜರಿ ಪೋಸ್‌ ಕೊಟ್ಟಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಡಿಫರೆಂಟ್‌ ಮ್ಯಾನರಿಸಂ ಹೊಂದಿದ ಉಮೇಶ್‌ ಕಿನ್ನಾಳ್‌ನ ಜೋಡಿಯಾಗಿರುವ ಆಂಕರ್‌ ರಶ್ಮಿ ಜಗಳ ಮತ್ತು ಅಡ್ಜಸ್ಟ್‌ಮೆಂಟ್‌ನಲ್ಲೇ ಶೋನಲ್ಲಿ ತನ್ನ ಛಾಪು ಮೂಡಿಸಿದ್ದಾಳೆ.