: ಬಾ ಗುರು ಶೆಡ್ ಗೆ ಟೀ ಕುಡಿಯೋಣ…. ಟೀ ಅಂಗಡಿ ಮುಂದೆ ಶೆಡ್ ಹವಾ.. ನಟ ದರ್ಶನ್ ಅವರ ಶೆಡ್ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಹಕವಾಗಿದ್ದು, ಇದೀಗ ತರಿಕೇರಿಯಲ್ಲಿ 'ಶೆಡ್ ಟೀ ಸ್ಟಾಲ್' ಆರಂಭವಾಗಿದೆ. ಈ ಟೀ ಅಂಗಡಿಯ ವಿಶಿಷ್ಟ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಯಾಂಡಲ್ವುಡ್ ಡಿ ಬಾಸ್ ದರ್ಶನ್ ( ) ಶೆಡ್ ಗಲಾಟೆ ಸೋಶಿಯಲ್ ಮೀಡಿಯಾ ( ) ದಲ್ಲಿ ಟ್ರೆಂಡ್ ಆಗಿರೋದು ಹಳೆದಾಯ್ತು. ಶೆಡ್ () ಗೆ ಸಂಬಂಧಿಸಿದಂತೆ ಸಿಕ್ಕಾಪಟ್ಟೆ ರೀಲ್ಸ್, ವಿಡಿಯೋ ವೈರಲ್ ಆಗಿದೆ, ಆಗ್ತಾನೆ ಇದೆ. ಈ ಮಧ್ಯೆ ಜನರು ಇದನ್ನು ತಮ್ಮ ಬ್ಯುಸಿನೆಸ್ ಗೆ ಬಳಸಿಕೊಳ್ತಿದ್ದಾರೆ. ವ್ಯಾಪಾರದ ಐಡಿಯಾ ( ) ಯಾವಾಗ್ಲೂ ಯುನೀಕ್ ಆಗಿರ್ಬೇಕು ಎನ್ನುವ ಮಾತಿದೆ. ಅದು ರಿಯಲ್ ಎಸ್ಟೇಟ್ ಇರ್ಲಿ ಇಲ್ಲ ಟೀ ಸ್ಟಾಲ್ ( ) ಇರಲಿ. ಆಕರ್ಷಕ ಹೆಸರು ಕಾಣ್ತಿದ್ದಂತೆ ಅದಕ್ಕೆ ಗ್ರಾಹಕರು ಅಟ್ರ್ಯಾಕ್ಟ್ ಆಗ್ತಾರೆ. ಈಗ ವ್ಯಕ್ತಿಯೊಬ್ಬರು ತಮ್ಮ ಟೀ ಸ್ಟಾಲ್ ಗೆ ವಿಚಿತ್ರ ಹೆಸರಿಟ್ಟು ಗಮನ ಸೆಳೆದಿದ್ದಾರೆ. ಬಾ ಗುರು ಶೆಡ್ ಗೆ ಟೀ ಕುಡಿ ಎಂಬ ಶೀರ್ಷಿಕೆ ಜೊತೆ ಶೆಡ್ ಟೀ ಸ್ಟಾಲ್ ( ) ಅಂತ ಟೀಗೆ ಸ್ಟಾಲ್ ಗೆ ನಾಮಕರಣ ಮಾಡಿದ್ದಾರೆ, ಶೆಡ್ ಟೀ ಸ್ಟಾಲ್ ಇರೋದು ತರಿಕೇರಿಯಲ್ಲಿ. ಸಾಮಾಜಿಕ ಜಾಲತಾಣದಲ್ಲಿ ಈ ಶೆಡ್ ಟೀ ಸ್ಟಾಲ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಕನ್ನಡ ಬೀಟ್ ಬಾಕ್ಸ್ ನಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಪೋಸ್ಟ್ ನಲ್ಲಿ ನೀವು ಶೆಡ್ ಟೀ ಸ್ಟಾಲ್ ಬೋರ್ಡ್ ನೋಡ್ಬಹುದು. ಎಂ.ಜಿ. ರಸ್ತೆ ತರಿಕೇರಿಯಲ್ಲಿ ಈ ಟೀ ಅಂಗಡಿ ಇದೆ. ನಮ್ಮಲ್ಲಿ ಬೀಡಾ, ಕಾಫಿ, ಟೀ, ಬೂಸ್ಟ್ ಮತ್ತು ಹಾಲು ದೊರೆಯುತ್ತದೆ ಎಂದು ಬರೆಯಲಾಗಿದೆ. ಎಲ್ಲಕ್ಕಿಂತ ಈ ಬೋರ್ಡ್ ನಲ್ಲಿ ಬಾ ಗುರು ಶೆಡ್ ಗೆ ಟೀ ಕುಡಿ ಎನ್ನುವದು ಎಲ್ಲರ ಗಮನ ಸೆಳೆದಿದೆ. ಡಿ ಬಾಸ್ ಅಭಿಮಾನಿ ಇನ್ಸ್ಟಾಗ್ರಾಮ್ () ಖಾತೆಯಲ್ಲೂ ಇದನ್ನು ಹಂಚಿಕೊಳ್ಳಲಾಗಿದೆ. ಮಾಲೀಕನ ಐಡಿಯಾಕ್ಕೆ ಗ್ರಾಹಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ಬಳ್ಳಾರಿ ಜೈಲಿನತ್ತ ನಟ ದರ್ಶನ್ ಶೆಡ್ ಗೆ ಬಾ :ಜೈಲಿಗೆ ಹೋದ ಪವಿತ್ರಾ ಗೌಡ ( ), ಹಿಂದೆ ಹಿಂದೆ ಬರ್ತಿದ್ದ ಮಾಧ್ಯಮದವರನ್ನು ನಿಮಗೆ ಮಾಡೋಕೆ ಕೆಲ್ಸ ಇಲ್ವಾ ಅಂತಾ ಕೇಳಿದ್ರು. ಆಗ ಮಾಧ್ಯಮದ ನಿರೂಪಕರೊಬ್ಬರು, ಇಲ್ಲ, ಬಾ ಶೆಡ್ ಗೆ ಹೋಗೋಣ ಎಂದಿದ್ದರು. ಈ ಮಾತು ಎಷ್ಟು ವೈರಲ್ ಆಯ್ತು ಅಂದ್ರೆ, ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೆಂಡ್ ಆಯ್ತು. ಬಹುತೇಕ ಎಲ್ಲ ಕಂಟೆಂಟ್ ಕ್ರಿಯೇಟರ್ಸ್ ( ) ಈ ಡೈಲಾಗ್ ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡ್ಕೊಂಡು ತಮ್ಮದೇ ಡೈಲಾಗ್ ಸೇರಿಸಿ ರೀಲ್ಸ್, ವಿಡಿಯೋ ಮಾಡೋಕೆ ಶುರು ಮಾಡಿದ್ದರು. ಈಗ್ಲೂ ಶೆಡ್ ಹಾಗೂ ಶೆಡ್ ಗೆ ಬಾ ಡೈಲಾಗ್ ವಿಡಿಯೋ ಪೋಸ್ಟ್ ಆಗ್ತಾನೆ ಇದೆ. ಶೆಡ್ ಗೆ ರೆಡ್ ಮಾರ್ಕ್ :ರೇಣುಕಾಸ್ವಾಮಿ ಕೊಲೆ ಪ್ರಕರಣ ( ) ಬಯಲಾಗ್ತಿದ್ದಂತೆ ಶೆಡ್ ಗೆ ರೆಡ್ ಮಾರ್ಕ್ ಬಿದ್ದಿದೆ. ಅಪ್ಪಿತಪ್ಪಿ ಯಾರ ಬಾಯಿಂದ ಶೆಡ್ ಎನ್ನುವ ಹೆಸರು ಕೇಳಿದ್ರೂ ಜನರ ರಿಯಾಕ್ಷನ್ ಭಿನ್ನವಾಗಿರುತ್ತದೆ. ಶೆಡ್ ಗೆ ಮಾತ್ರ ಕರಿಬೇಡಪ್ಪ ಎನ್ನುವವರೇ ಹೆಚ್ಚಾಗಿದ್ದಾರೆ. ಜೈಲಲ್ಲಿ ರಾಜಾಥಿತ್ಯ: ನಟ ದರ್ಶನ್‌ ಸೇರಿ ಐವರನ್ನು ಪ್ರಶ್ನಿಸಿದ ಪೊಲೀಸರು ಬಳ್ಳಾರಿ ಜೈಲು ( ) ಸೇರಿದ ದರ್ಶನ್ :ಪವಿತ್ರಾ ಗೌಡ ಫೋಟೋಕ್ಕೆ ಕಮೆಂಟ್ ಮಾಡಿ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಸೇರಿದಂತೆ ಸಹಚರರು ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸಿದ್ದ ನಟ ದರ್ಶನ್ ಗೆ ಈಗ ಬಳ್ಳಾರಿ ಜೈಲು ಗತಿಯಾಗಿದೆ. ನಿನ್ನೆ ಅವರನ್ನು ವಿಚಾರಣೆ ಮಾಡಿದ್ದ ಅಧಿಕಾರಿಗಳು ಬೆಳಗಿನ ಜಾವ ಬಳ್ಳಾರಿಗೆ ಕರೆದೊಯ್ದಿದ್ದಾರೆ. ಸದ್ಯ ದರ್ಶನ್ ಬಳ್ಳಾರಿ ಜೈಲು ಪ್ರವೇಶ ಮಾಡಿದ್ದು, ಸೆಪ್ಟೆಂಬರ್ 9ರವರೆಗೆ ಅವರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. 🅺🅸🅽🅶 🅼🅰🅺🅴🆁😎 (@kannada_beatbox)