ಸಸ್ಯಾಹಾರದ ಪ್ರಚಾರಕ್ಕೆ ಮತ್ಸ್ಯಕನ್ಯೆಯಾದ ಪಾಲಕ್​: ಸೈಫ್​ ಅಲಿ ಪುತ್ರಂಗೂ ನಾನ್​ವೆಜ್​ ಬಿಡಿಸುವೆಯಾ ಅಂದ ಫ್ಯಾನ್ಸ್​! ಸಸ್ಯಾಹಾರದ ಪ್ರಚಾರಕ್ಕಾಗಿ ಪೇಟಾದ ಸಹಯೋಗದಲ್ಲಿ ಮತ್ಸ್ಯಕನ್ಯೆಯಾದ ನಟಿ ಪಾಲಕ್​ ತಿವಾರಿಯನ್ನು ತೀವ್ರ ಟ್ರೋಲ್​ ಮಾಡಲಾಗುತ್ತಿದೆ. ಬಾಯ್​ಫ್ರೆಂಡ್​ ಇಬ್ರಾಹಿಂ ಅಲಿ ಖಾನ್​ ವಿಷಯ ಕೇಳಲಾಗುತ್ತಿದೆ. ಖ್ಯಾತ ಟಿವಿ ತಾರೆ ಶ್ವೇತಾ ತಿವಾರಿ ಅವರ ಪುತ್ರಿಯಾಗಿರುವ 22 ವರ್ಷದ ಪಾಲಕ್ ತಮ್ಮ ಅತ್ಯಾಕರ್ಷಕ ನೋಟದಿಂದಾಗಿ ಚಲನಚಿತ್ರ ನಿರ್ಮಾಪಕರನ್ನು ಆಕರ್ಷಿಸುತ್ತಿದ್ದಾರೆ. ಈಕೆ ಸ್ಟೈಲಿಶ್ ಬಟ್ಟೆಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿದ್ದಾರೆ. ಸದ್ಯ ಪಾಲಕ್​, ತಮ್ಮ ಅಮ್ಮ ಕಿರುತೆರೆ ನಟಿ ಶ್ವೇತಾ ತಿವಾರಿ ಅವರಿಗಿಂತಲೂ ಫೇಮಸ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿರೋ ಪಾಲಕ್​, ವಿವಿಧ ಬ್ರಾಂಡ್‌ಗಳಿಗೆ ಶೂಟ್ ಮಾಡುತ್ತಾರೆ. ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ( ) ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ ಪಾಲಕ್​. ಇದೀಗ ಪ್ರಾಣಿಗಳ ರಕ್ಷಣೆಗಾಗಿ ಇರುವ ಪೇಟಾ ( ) ಸಂಸ್ಥೆಯ ಪರವಾಗಿ ಜಾಹೀರಾತು ನೀಡಲು ಪಲಕ್​ ತಿವಾರಿ ಮತ್ಸ್ಯಕನ್ಯೆಯಾಗಿ ಕಾಣಿಸಿಕೊಂಡಿದ್ದಾರೆ. ಮತ್ಸ್ಯಕನ್ಯೆಯ ಕ್ಯೂಟ್​ ಫೋಟೋಗಳು ವೈರಲ್​ ಆಗುತ್ತಿವೆ. ಬಂಡೆಯ ಮೇಲೆ ಮತ್ಸ್ಯಕನ್ಯೆಯು ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಿರುವಂತೆ ಪೋಸ್​ ಕೊಟ್ಟಿರೋ ನಟಿ, ಸಸ್ಯಾಹಾರಿ ಜಾಗೃತಿ ತಿಂಗಳಿಗೆ (ಅಕ್ಟೋಬರ್) ಚಾಲನೆ ನೀಡಿದ್ದಾರೆ. ಇಂಡಿಯಾದ ಹೊಸ ಮುದ್ರಣ ಅಭಿಯಾನದಲ್ಲಿ ಭಾಗವಹಿಸಲು ಎಲ್ಲರಿಗೂ ಒತ್ತಾಯಿಸಿದ್ದಾರೆ. ಮೀನುಗಳು ಸಾಗರದಲ್ಲಿ ಇದ್ದರೇ ಚೆಂದ, ತಟ್ಟೆಗೆ ಬರುವುದು ಬೇಡ ಎಂದಿದ್ದಾರೆ. ಫ್ರೀಯಾಗಿ ಐಸ್​ಕ್ರೀಂ ತಿಂದ ನಟಿ ಶೆರ್ಲಿನ್​: ಥೂ ನಿನ್​ ಜನ್ಮಕ್ಕೆ ಎಂದು ಮಂಚದ ವಿಷ್ಯ ಎಳೆದುತಂದ ನೆಟ್ಟಿಗರು​! ಸುರಕ್ಷಿತವಾಗಿ ಬದುಕಲು ನಾವು ಅರ್ಹರಾಗಿರುವಂತೆಯೇ ಜಲಚರಗಳು ತಮ್ಮ ಸಮುದ್ರದ ಮನೆಗಳಲ್ಲಿ ಸುರಕ್ಷಿತವಾಗಿ ವಾಸಿಸಲು ಅರ್ಹವಾಗಿವೆ ಎಂದಿದ್ದಾರೆ ಪಾಲಕ್​. ಪ್ರತಿ ವರ್ಷ ಎಲ್ಲಾ ಇತರ ಪ್ರಾಣಿಗಳಿಗಿಂತ ಹೆಚ್ಚು ಮೀನುಗಳನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತದೆ. ಮೀನುಗಳನ್ನು ಉಸಿರುಗಟ್ಟಿಸಿ ಕತ್ತರಿಸಲಾಗುತ್ತದೆ. ಇದು ಸರಿಯಲ್ಲ ಎಂದಿದ್ದಾರೆ. ಪ್ರತಿ ವರ್ಷ, ಮೀನುಗಾರಿಕೆ ಉದ್ಯಮವು 7.20 ಲಕ್ಷ ಸೀಬರ್ಡ್‌ಗಳು, 3 ಲಕ್ಷಕ್ಕೂ ಅಧಿಕ 000 ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳು, 3.45 ಲಕ್ಷ ಇತರ ಜಲಚರಗಳು ಕೊಲ್ಲಲ್ಪಡುತ್ತವೆ. ಇದರ ಬಗ್ಗೆ ದಯೆ ತೋರಿ ಎಂದಿದ್ದಾರೆ ನಟಿ. ನಿನ್ನೆ ಅಕ್ಟೋಬರ್​ 4ರಂದು ವಿಶ್ವ ಪ್ರಾಣಿಗಳ ದಿನವಾಗಿದ್ದು, ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪಾಲಕ್​ ಅವರ ಫೋಟೋಗಳನ್ನು ಛಾಯಾಗ್ರಾಹಕ ತೇಜಸ್ ನೆರೂರ್ಕರ್ ಅವರು ಕ್ಲಿಕ್ಕಿಸಿದ್ದಾರೆ. ಇವರಿಗೆ ಮೇಘನಾ ಬುಟಾನಿ ಮೇಕಪ್​ ಮಾಡಿದ್ದಾರೆ. ಅಂದಹಾಗೆ, ಸದ್ಯ ಪಾಲಕ್​ ಹೆಚ್ಚು ಸದ್ದು ಮಾಡ್ತಿರೋದು ಅವರು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ( ) ಅವರ ಜೊತೆ ರಿಲೇಷನ್​ನಲ್ಲಿ ಇರುವ ಕಾರಣ. ಇದನ್ನು ಅವರು ಒಪ್ಪಿಕೊಳ್ಳದಿದ್ದರೂ ನಟ ಸಲ್ಮಾನ್​ ಖಾನ್​ ಅವರೇ ಪರೋಕ್ಷವಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದೂ ಉಂಟು. ಆದರೆ ಇದನ್ನು ನಟಿ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಆದರೆ ಇದೀಗ ಅವರ ತಂದೆ ರಾಜಾ ಚೌಧರಿ, (ಶ್ವೇತಾ ತಿವಾರಿ ಅವರ ವಿಚ್ಛೇದಿತ ಪತಿ) ಮಗಳ ಬಗ್ಗೆ ಮಾತನಾಡಿದ್ದಾರೆ. ಇಬ್ರಾಹಿಂ ಅಲಿ ಖಾನ್ ಜೊತೆಗಿನ ಮಗಳ ಸಂಬಂಧದ ಕುರಿತು ನೇರವಾಗಿ ಹೇಳದ ಅವರು, ಈ ಸಮಯದಲ್ಲಿ, ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಪಡೆದಿರುತ್ತಾರೆ. ಅವರು ಏನನ್ನು ಚೆನ್ನಾಗಿ ಭಾವಿಸಿದರೂ, ನಾನು ಅದರಲ್ಲಿ ಸಂತೋಷವಾಗಿರುತ್ತೇನೆ. ಅವಳು ಸಂತೋಷವಾಗಿದ್ದರೆ ನನಗೆ ಸಂತೋಷ, ಅವಳು ದುಃಖಿತಳಾದರೆ, ನಾನು ದುಃಖಿತನಾಗುತ್ತೇನೆ ಎಂದಿದ್ದಾರೆ. ಈ ಮೂಲಕ ಮಗಳ ರಿಲೇಷನ್​ ಕುರಿತು ಪರೋಕ್ಷವಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ವಿಷಯವನ್ನಿಟ್ಟುಕೊಂಡು ಈಗ ನಟಿಯ ಕಾಲೆಳೆಯಲಾಗುತ್ತಿದೆ. ನಿಮ್ಮ ಲವರ್​ ಖಾನ್​ ಸಾಹೇಬ್ರಿಗೂ ಮಾಂಸಾಹಾರ ತಿನ್ನಿಸೋದನ್ನು ನಿಲ್ಲಿಸುವಿರಾ ಎಂದು ಹಲವರು ಪ್ರಶ್ನಿಸಿದ್ದರೆ, ನೀವು ನಿಜಕ್ಕೂ ಸಸ್ಯಾಹಾರಿಯೇ ಎಂದು ಪ್ರಶ್ನಿಸಿದ್ದಾರೆ ಇನ್ನು ಹಲವರು. ಹೇಳುವುದು ಉಂಟು, ಮಾಡುವುದು ಇನ್ನೊಂದು ಎಂದು ನಟಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೆಲವರು, ಭೂತದ ಬಾಯಲ್ಲಿ ಭಗವಗ್ದೀತೆ ಕೇಳಿದಂತಾಯಿತು ಎನ್ನುತ್ತಿದ್ದಾರೆ. ಇನ್ನು ಕೆಲವರು ಇಷ್ಟು ಚೆಂದದ ಮೀನು ಸಿಕ್ಕರೆ ಬಿಡಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ. ಪತ್ನಿ ಮತ್ತು ಪ್ರಿಯಕರನ ಕೊಲೆ ಮಾಡಿದ್ರಂತೆ ಸಂಜಯ್​ ದತ್​: ನಟನಿಂದ ಶಾಕಿಂಗ್​ ವಿಷ್ಯ ರಿವೀಲ್​!