ಡೆಂಗ್ಯೂ-ಮಲೇರಿಯಾದಿಂದ ದೂರವಿರಲು ರುಜುತಾ ದಿವೇಕರ್ ಸಲಹೆ ಪಾಲಿಸಿ ಡೆಂಗ್ಯೂ ಮತ್ತು ಮಲೇರಿಯಾದಿಂದ ಚೇತರಿಸಿಕೊಳ್ಳಲು ಸೆಲೆಬ್ರಿಟಿ ಆಹಾರ ತಜ್ಞೆ ರುಜುತಾ ದಿವೇಕರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ, ಅವರು ಆಹಾರ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಡೆಂಗ್ಯೂ ಮತ್ತು ಮಲೇರಿಯಾದಿಂದ ಚೇತರಿಸಿಕೊಳ್ಳಲು ಸೆಲೆಬ್ರಿಟಿ ಆಹಾರ ತಜ್ಞೆ ರುಜುತಾ ದಿವೇಕರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ, ಅವರು ಆಹಾರ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಪ್ರಸಿದ್ಧ ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ( ) ಅವರು ಡೆಂಗ್ಯೂ ಮತ್ತು ಮಲೇರಿಯಾದಿಂದ ವೇಗವಾಗಿ ಚೇತರಿಸಿಕೊಳ್ಳಲು ಆಹಾರ ಮತ್ತು ಯೋಗ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಮಲೇರಿಯಾ ಸೋಂಕಿನಿಂದ ಭಾರತದಲ್ಲಿ ಇದುವರೆಗೆ ಅನೇಕ ಜನರು ಸಾವನ್ನಪ್ಪಿದ್ದಾರೆ. ನೀವು ಈ ಸಲಹೆಯನ್ನು ಪಾಲಿಸಿ ಬೇಗನೆ ರೋಗದಿಂದ ಗುಣಮುಖರಾಗಿ. ಈ ದೇಸಿ ಪಾನೀಯವು ಉರಿಯೂತವನ್ನು ಕಡಿಮೆ ಮಾಡುತ್ತದೆ1 ಲೋಟ ಹಾಲು + 1/2 ಲೋಟ ನೀರನ್ನು ತೆಗೆದುಕೊಳ್ಳಿ, ಒಂದು ಚಿಟಿಕೆ ಅರಿಶಿನ, 2-3 ಕೇಸರಿ ದಳಗಳು, ಸ್ವಲ್ಪ ಜಾಯಿಕಾಯಿ ಸೇರಿಸಿ. ಅದು ಅರ್ಧವಾಗುವವರೆಗೆ ಕುದಿಸಿ. ಇದನ್ನು ತಣ್ಣಗೆ ಅಥವಾ ಬಿಸಿಯಾಗಿ ತೆಗೆದುಕೊಳ್ಳಿ ಮತ್ತು ರುಚಿಗೆ ಅನುಗುಣವಾಗಿ ಬೆಲ್ಲವನ್ನು ಸೇರಿಸಿ. ಈ ಪಾನೀಯವು ಉರಿಯೂತವನ್ನು ಕಡಿಮೆ ಮಾಡುತ್ತದೆ ಗಂಜಿ ನೀರು ಕುಡಿಯಿರಿಇದು ಅನ್ನದಿಂದ ತಯಾರಿಸಿದ ಸೂಪ್. ಇದನ್ನು ತಯಾರಿಸಿದ ನಂತರ, ಕಪ್ಪು ಉಪ್ಪು ಅಥವಾ ಕಲ್ಲುಪ್ಪು, ಚಿಟಿಕೆ ಅಸಾಫೋಟಿಡಾ ಮತ್ತು ತುಪ್ಪ ಸೇರಿಸಿ. ಇದನ್ನು ಕುಡಿಯುವ ಮೂಲಕ, ದೇಹದಲ್ಲಿನ ನೀರಿನ ಕೊರತೆಯನ್ನು ನಿವಾರಿಸಬಹುದು, ಎಲೆಕ್ಟ್ರೋಲೈಟ್‌ಗಳು ದೇಹಕ್ಕೆ ಸೇರೋದರಿಂದ ಹಸಿವು ಕಡಿಮೆಯಾಗುತ್ತೆ. ನೀರು ಕುಡಿಯುತ್ತಲೆ ಇರಿಉತ್ತಮ ಆರೋಗ್ಯ ಕಾಪಾಡಲು ದೇಹವು ಹೈಡ್ರೇಟ್ ( ) ಆಗಿರೋದು ತುಂಬಾ ಮುಖ್ಯ. ಅದಕ್ಕಾಗಿ ನಿಯಮಿತವಾಗಿ ನೀರು ಕುಡಿಯೋದನ್ನು ಮರೆಯಬೇಡಿ. ಹೆಚ್ಚು ಹೆಚ್ಚು ನೀರು ಕುಡಿಯೋದರಿಂದ ದೇಹ ಹೈಡ್ರೇಟ್ ಆಗಿರುತ್ತೆ, ಜೊತೆಗೆ ಆರೋಗ್ಯವೂ ಸುಧಾರಿಸುತ್ತೆ. ಯೋಗ ಮತ್ತು ಧ್ಯಾನನಿಮಗೆ ಡೆಂಗ್ಯೂ ಅಥವಾ ಮಲೇರಿಯಾ ( ) ಇದ್ದರೆ, ಸುಪ್ತ ಸ್ಥಿತಿಯಲ್ಲಿರಿ. ಅಂದರೆ ಈ ಸಮಯದಲ್ಲಿ ಯೋಗ ಮತ್ತು ಧ್ಯಾನ ಮಾಡೋದು ತುಂಬಾ ಮುಖ್ಯ. ಇದು ದೇಹಕ್ಕೆ ಹೆಚ್ಚಿನ ಆರಾಮ ಸಿಗುತ್ತೆ. ನೀವು ಬೇಗನೆ ರಿಕವರಿ ಆಗಲು ಸಹಾಯ ಮಾಡುತ್ತೆ.