ಗುಂಡೇಟಿಗೆ ಬಲಿಯಾಗುವ ಭಯದಿಂದ್ಲೇ ಮನ್ಸೂರ್​ ಖಾನ್​ರನ್ನು ಮದ್ವೆಯಾದೆ: ಆ ಕರಾಳ ದಿನ ನೆನೆದ ಶರ್ಮಿಳಾ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್​ ಮನ್ಸೂರ್​ ಅಲಿ ಖಾನ್​ ಅವರನ್ನು ಲವ್​ ಮಾಡಿ ಪಡಬಾರದ ಕಷ್ಟ ಪಟ್ಟಿದ್ದರಂತೆ. ಜೀವ ಭಯದಲ್ಲಿಯೇ ಮದ್ವೆಯಾದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ತಾಯಿ, ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ( ) ಕೂಡ ಒಂದು ಕಾಲದ ಅದ್ಭುತ ನಟಿ. ಬಾಲಿವುಡ್​ ಸಿನಿಮಾ ಕಂಡ ಅಪರೂಪದ ನಟಿ ಇವರು. 1960ರಿಂದ 80ರ ದಶಕದವರೆಗೂ ಬಹುಬೇಡಿಕೆಯುಳ್ಳ ನಟಿ. ಬಣ್ಣದ ಲೋಕಕ್ಕೆ ಹೆಣ್ಣೊಬ್ಬಳು ಎಂಟ್ರಿ ಕೊಡುತ್ತಾಳೆಂದರೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಕಾಲದಲ್ಲಿಯೇ ಅಂದರೆ 60-70ರ ದಶಕದಲ್ಲಿಯೇ ಬಿಕಿನಿ ಬಟ್ಟೆ ತೊಟ್ಟು ಸುದ್ದಿಯಾಗಿದ್ದವರು ನಟಿ ಶರ್ಮಿಳಾ ಟ್ಯಾಗೋರ್​. 1966ರಲ್ಲಿ ಬಿಕಿನಿ () ಡ್ರೆಸ್​ ಹಾಕಿಕೊಂಡು ಮ್ಯಾಗಝೀನ್​ ಒಂದಕ್ಕೆ ಫೋಟೋಶೂಟ್​ ಮಾಡಿಸಿಕೊಂಡು ಸಕತ್​ ಸುದ್ದಿ ಮಾಡಿದ್ದರು. ಅವರ ಮೊಮ್ಮಗಳೇ ಸಾರಾ ಅಲಿ ಖಾನ್‌. ಶರ್ಮಿಳಾ ಅವರ ಮಗ ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್ ( )​ ಚಿತ್ರರಂಗದಲ್ಲಿ ಈಗತಾನೆ ನೆಲೆ ಕಂಡುಕೊಳ್ಳುತ್ತಿದ್ದಾರೆ. ಈಗಿನ ಚಿತ್ರತಾರೆಯರು ಬಿಕಿನಿ ಹಾಕುವುದು ದೊಡ್ಡದೇನಲ್ಲ. ಒಂದು ಕಾಲದಲ್ಲಿ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಕ್ಕಳು ಎಂಬಂತೆ ಬಿಂಬಿಸಿಕೊಂಡ ನಟಿಯರೂ ಇಂದು ಧಾರಾಳವಾಗಿ ಅಂಗಾಂಗ ಪ್ರದರ್ಶನ ಮಾಡುತ್ತಿದ್ದಾರೆ. ಅವರ ಪೈಕಿ ಸಾರಾ ಅಲಿ ಖಾನ್‌ ಕೂಡ ಒಬ್ಬರು. ಆದರೆ ಅಂದಿನ ದಿನಗಳಲ್ಲಿಯೇ ಎಲ್ಲರ ಹುಬ್ಬೇರಿಸಿದ್ದ ನಟಿ ಶರ್ಮಿಳಾ ಟ್ಯಾಗೋರ್​. ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆಯಾಗಿರುವ ಶರ್ಮಿಳಾ ಟ್ಯಾಗೋರ್ ಅವರು ತಮ್ಮ ಅಸಾಧಾರಣ ಅಭಿನಯದಿಂದ ಸತತವಾಗಿ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಆದರೆ ಇಂದಿನ ಕೆಲವು ಚಿತ್ರತಾರೆಯರಂತೆಯೇ ಅಂದಿನ ಕಾಲದಲ್ಲಿಯೇ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದ್ದವರು ಶರ್ಮಿಳಾ. ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಮದುವೆಯಾದಾಗ ಸಿನಿ ರಂಗದಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಬಾಲಿವುಡ್​ ಭೂಗತ ಪಾತಕಿಯಲ್ಲಿ ಕಪಿಮುಷ್ಟಿಯಲ್ಲಿರುವ ದಿನಗಳಲ್ಲಿ ಇಂಥವರನ್ನೇ ಮದುವೆಯಾಗಬೇಕು ಎಂದು ತಾರೆಯರಿಗೂ ಒತ್ತಡ ಹೇರಲಾಗುತ್ತಿತ್ತು. ಮದುವೆ, ಮಕ್ಕಳು ಎಲ್ಲವೂ ಅವರು ಹೇಳಿದಂತೆ ಕೇಳಬೇಕಿತ್ತು. ಇಲ್ಲದಿದ್ದರೆ ಚಿತ್ರರಂಗದಲ್ಲಿ ನೆಲೆಯೂರಲು ಬಿಡುತ್ತಿರಲಿಲ್ಲ ಎಂಬ ಗಂಭೀರ ಆರೋಪ ಇಂದಿಗೂ ಕೇಳಿಬರುತ್ತಿದೆ. ಅಂಥ ಸಮಯದಲ್ಲಿ ಶರ್ಮಿಳಾ ಅವರು ಪಟೌಡಿ ಅವರನ್ನು ಮದುವೆಯಾಗಿದ್ದು ಹಂಗಾಮ ಸೃಷ್ಟಿಸಿತ್ತು. : ಮೊಮ್ಮಗಳಿಗಿಂತ ಅಜ್ಜಿನೇ ಹಾಟ್‌ ಎಂದ ನೆಟ್ಟಿಗರು ಈ ಕುರಿತು ಖುದ್ದು ಶರ್ಮಿಳಾ ಇದೀಗ ಬಹಿರಂಗಪಡಿಸಿದ್ದಾರೆ. ದಶಕಗಳ ಸುಖಿ ದಾಂಪತ್ಯಜೀವನ ನಡೆಸುತ್ತಿರುವ ಈ ಕುಟುಂಬದ ಕುರಿತು ಅಂದಿನ ದಿನಗಳನ್ನು ನಟಿ ನೆನೆದಿದ್ದಾರೆ. ಟ್ವೀಕ್ ಇಂಡಿಯಾಗಾಗಿ ಟ್ವಿಂಕಲ್ ಖನ್ನಾ ಅವರೊಂದಿಗಿನ ಸಂಭಾಷಣೆಯಲ್ಲಿ, ಸಂದರ್ಶಕರು ಶರ್ಮಿಳಾ ಅವರ ಮದುವೆಯ ಕುರಿತು ಕೇಳಿದಾಗ, ಅಂದು ಪರಿಸ್ಥಿತಿ ಬಹಳ ಭಯಾನಕವಾಗಿತ್ತು. ಒಂದು ವೇಳೆ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರೆ ನಾವಲ್ಲ, ಬುಲೆಟ್​ ಮಾತನಾಡಬೇಕಾಗುತ್ತದೆ ಎಂಬ ಜೀವ ಬೆದರಿಕೆ ಬಂದಿತ್ತು. ಸಾವಿನ ಭಯದಲ್ಲಿಯೇ ಮದುವೆಯಾದೆವು ಎಂದಿದ್ದಾರೆ ನಟಿ. 1968ರಲ್ಲಿ ಮದ್ವೆಯಾಗಿತ್ತು. 2011ರಲ್ಲಿ ಅವರು ತೀರಿಕೊಂಡರು. 43 ವರ್ಷಗಳ ಸುಖಿ ದಾಂಪತ್ಯ ನಡೆಸಿದ್ದೇವೆ. ಯಾವ ಬೆದರಿಕೆಗೂ ಜಗ್ಗದೇ ಮದ್ವೆಯಾದೆವು. ಕೊನೆಗೆ ಕುಟುಂಬವೂ ಒಪ್ಪಿಕೊಂಡಿತು. ಆದರೆ ಜೀವ ಬೆದರಿಕೆ ಇತ್ತು. ನನ್ನ ಕುಟುಂಬವು ಫೋರ್ಟ್ ವಿಲಿಯಂನಲ್ಲಿ ಮದುವೆಯನ್ನು ಆಯೋಜಿಸಿತ್ತು. ಏಕೆಂದರೆ ಬಹಳಷ್ಟು ಬೆದರಿಕೆಗಳು ಇದ್ದವು. ಏನಾಗಬಹುದು ಎಂಬ ಬಗ್ಗೆ ತುಂಬಾ ಚಿಂತಿತರಾಗಿದ್ದರು. ಆದರೆ, ಫೋರ್ಟ್ ವಿಲಿಯಮ್ಸ್ ಕೊನೆಯ ಕ್ಷಣದಲ್ಲಿ ನಿರಾಕರಿಸಿದರು. ಅವರಿಗೆ ಈ ವಿಷಯ ತಿಳಿದಿದ್ದರಿಂದ ಮದುವೆ ನಿರಾಕರಿಸಿತು. ನಂತರ ಬೇರೆ ಕಡೆ ಮದ್ವೆಯಾಗಿ ಬಂದೆವು ಎಂದಿದ್ದಾರೆ. ಮಗಳು-ಸೊಸೆ ನಡುವಿನ ವ್ಯತ್ಯಾಸ ತಿಳಿಸಿದ ನಟಿ