ದೇಶದ 12ಕ್ಕಿಂತ ಚಿಕ್ಕ ಶೇ. 42ರಷ್ಟು ಮಕ್ಕಳಿಂದ ದಿನಕ್ಕೆ 4 ಗಂಟೆ ಮೊಬೈಲ್‌ ಬಳಕೆ: ಆತಂಕಕಾರಿ ವರದಿ ಹನ್ನೆರಡರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಶೇ 42ರಷ್ಟು ಮಕ್ಕಳು ದಿನದ ಎರಡರಿಂದ ನಾಲ್ಕು ತಾಸು ತಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಪರದೆಯಲ್ಲೇ ಕಳೆಯುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ನವದೆಹಲಿ: ಹನ್ನೆರಡರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಶೇ 42ರಷ್ಟು ಮಕ್ಕಳು ದಿನದ ಎರಡರಿಂದ ನಾಲ್ಕು ತಾಸು ತಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಪರದೆಯಲ್ಲೇ ಕಳೆಯುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಮಕ್ಕಳಿಗಾಗಿ ಸುರಕ್ಷಿತ ಅಂತರ್ಜಾಲವನ್ನು ನಿಯಂತ್ರಿಸುವ ಸಂಸ್ಥೆಯಾದ ಹ್ಯಾಪಿನೆಟ್ಜ್‌ ಈ ಸಮೀಕ್ಷೆ ನಡೆಸಿದ್ದು, 12ಕ್ಕಿಂತ ಹೆಚ್ಚಿನ ವಯೋಮಾನದವರು ದಿನದ ಶೇ 47ರಷ್ಟು ಸಮಯವನ್ನು ಮೊಬೈಲ್‌ ಪರದೆಯಲ್ಲಿ ಕಳೆಯುತ್ತಾರೆ ಎಂದು ವರದಿ ಹೇಳಿದೆ. 12 ಮತ್ತು ಹೆಚ್ಚಿನ ವಯೋಮಾನದ ಶೇ. 69ರಷ್ಟು ಮಕ್ಕಳು ತಮ್ಮ ಸ್ವಂತ ಸ್ಮಾರ್ಟ್‌ಫೋನ್‌ ( ), ಟ್ಯಾಬ್ಲೆಟ್‌ () ಹೊಂದಿದ್ದು ಅದರ ಅಂತರ್ಜಾಲ () ಬಳಕೆಗೂ ಅನಿರ್ಬಂಧಿತ ಅನುಮತಿ ಪಡೆದಿದ್ದಾರೆ ಎಂದು ಸಂಸ್ಥೆಯು 1,500 ಪೋಷಕರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಮನೋರಂಜನೆಗಾಗಿ ಮೊಬೈಲ್‌ ಪರದೆ ನೋಡುವ 12ರ ಒಳಗಿನ ಮಕ್ಕಳು ಅದರಲ್ಲೇ ದಿನದ 2ರಿಂದ 4 ಗಂಟೆ ಕಳೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ವಯಸ್ಸಿನವರು ದಿನದ ಶೇ. 47ರಷ್ಟು ಸಮಯವನ್ನು ಮೊಬೈಲ್‌ ಪರದೆಗೆ ವ್ಯಯಿಸುತ್ತಿದ್ದಾರೆ. ಈಗ ಮನರಂಜನೆ ಮತ್ತು ಶಿಕ್ಷಣ () ಸೇರಿ ಎಲ್ಲವೂ ಡಿಜಿಟಲೀಕರಣವಾಗಿದೆ. ಸ್ಮಾರ್ಟ್‌ ಡಿವೈಸ್‌ಗಳು ( ) ಈಗ ಸುಲಭವಾಗಿ ಮಕ್ಕಳಿಗೆ ದೊರೆಯುತ್ತವೆ. ಮಕ್ಕಳು ಶಿಕ್ಷಣದ ಜತೆಗೆ ಡಿಜಿಟಲ್‌ ಸಾಧನಗಳ ಮೂಲಕ ತಮ್ಮ ದಿನ ಕಳೆಯುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.