ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು ದೊಡ್ಡ ದೊಡ್ಡ ಸೂಪರ್‌ಸ್ಟಾರ್‌ ಮಾಡೆಲ್‌ಗಳನ್ನು ನೀವು ಈಗಾಗಲೇ ಬೇಕಾದಷ್ಟು ಜನರನ್ನು ನೋಡಿರುತ್ತೀರಿ. ಆದರೆ ಫ್ಯಾಷನ್ ಜಗತ್ತನ್ನು ಅಳುತ್ತಿರುವ ಪುಟಾಣಿ ಮಾಡೆಲ್‌ಗಳ ಬಗ್ಗೆ ನಿಮಗೆ ಗೊತ್ತಾ? ಫ್ಯಾಷನ್ ಲೋಕದಲ್ಲಿ ಚಾಪು ಮೂಡಿಸಿದ ಪುಟಾಣಿ ಮಾಡೆಲ್‌ಗಳ ಡಿಟೇಲ್ಸ್ ಇಲ್ಲಿದೆ... ದೊಡ್ಡ ದೊಡ್ಡ ಸೂಪರ್‌ಸ್ಟಾರ್‌ ಮಾಡೆಲ್‌ಗಳನ್ನು ನೀವು ಈಗಾಗಲೇ ಬೇಕಾದಷ್ಟು ಜನರನ್ನು ನೋಡಿರುತ್ತೀರಿ. ಆದರೆ ಫ್ಯಾಷನ್ ಜಗತ್ತನ್ನು ಅಳುತ್ತಿರುವ ಪುಟಾಣಿ ಮಾಡೆಲ್‌ಗಳ ಬಗ್ಗೆ ನಿಮಗೆ ಗೊತ್ತಾ? ಫ್ಯಾಷನ್ ಲೋಕದಲ್ಲಿ ಚಾಪು ಮೂಡಿಸಿದ ಪುಟಾಣಿ ಮಾಡೆಲ್‌ಗಳ ಡಿಟೇಲ್ಸ್ ಇಲ್ಲಿದೆ... ರಷ್ಯಾದ ವೈಲೆಟ್ಟಾ ಆಂಟೊನೊವಾ ( ) 4 ವರ್ಷವಿದ್ದಾಗಲೇ ಮಕ್ಕಳ ಧಿರಿಸಿನ ಹಲವು ಜಾಹೀರಾತುಗಳಿಗೆ ಮಾಡೆಲ್ ಆಗಿದ್ದಳು, ಈಕೆಯ ಅಣ್ಣನೂ ಕೂಡ ಮಕ್ಕಳ ಉಡುಪಿನ ಮಾಡೆಲ್ ಆಗಿದ್ದಾನೆ. ಸದಾ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗ ಬಯಸುವ ವೈಲೆಟ್ಟಾಗೆ ತನ್ನದೇ ಆದ ಇನ್ಸ್ಟಾಗ್ರಾಮ್ ಪೇಜ್ ಇದ್ದು, ಅಲ್ಲಿ ಆಕೆಯ ಅಮ್ಮ ಆಕೆಯ ಹೆಸರಿನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. 7 ವರ್ಷದ ಈ ಬಾಲಕಿ ( ) ಅಮೆರಿಕಾದ ಲಿಟ್ಲ್ ಸೂಪರ್ ಮಾಡೆಲ್ ಆಗಿದ್ದು, ಅಮೆರಿಕದ ದೊಡ್ಡ ದೊಡ್ಡ ಬ್ರಾಂಡ್‌ಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾಳೆ. ಸಿಂಪ್ಲಿಸಿಟಿ ಪ್ಯಾಟರ್ನ್ಸ್, ದಿ ಚಿಲ್ಡ್ರನ್ಸ್ ಪ್ಲೇಸ್ ಮತ್ತು ಕಿಡ್‌ಪಿಕ್‌ನಂತಹ ದೊಡ್ಡ ಬ್ರಾಂಡ್‌ಗಳಿಗೆ ಮಾಡೆಲ್ ಆಗಿದ್ದಾಳೆ ಈ ಪುಟಾಣಿ ಅಮೆರಿಕಾದ ಇಂಡಿಯಾನ ಮೂಲದ ಈ ಪುಟಾಣಿ () ಗುಂಗುರು ಕೂದಲು ಹಾಗೂ ಮುದ್ದಾದ ನಗುವಿನಿಂದ ಫ್ಯಾಷನ್ ಲೋಕವನ್ನು ಸೆಳೆಯುತ್ತಿದ್ದಾಳೆ. ಇಂಗ್ಲೀಷ್ ಹಾಗೂ ಫ್ರೆಂಚ್ ಮಾತನಾಡುವ ಈ ಕೃಷ್ಣ ಚೆಲುವೆ ತನ್ನ ಚಿಕ್ಕ ವಯಸ್ಸಿನಲ್ಲೇ ದುಡಿಮೆ ಮಾಡುತ್ತಿದ್ದು, ವಿ ಪಿರಟ್ಟೆ ಏಜೆನ್ಸಿ ಎಂಬ ಮಾಡೆಲಿಂಗ್ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಳೆ. ಆಗಾಗ ಹಲವು ಮ್ಯಾಗಜೀನ್ ಕವರ್‌ಗಳಲ್ಲಿ ಕಾಣಿಸಿಕೊಳ್ಳುವ ಈಕೆಗೆ ಅನೇಕ ಬಟ್ಟೆ ಬ್ರಾಂಡ್‌ಗೆ ಅಂಬಾಸೀಡರ್ ಆಗಿದ್ದಾಳೆ. 12 ವರ್ಷ ವಯಸ್ಸಿನ ಈ ರಷ್ಯಾದ ಮಾಡೆಲ್ ಅನ್ನು ನಟಾಲಿಯಾ ವೊಡಿಯಾನೋವಾಗೆ ( ) ಹೋಲಿಸಲಾಗುತ್ತದೆ. ಈಕೆ ಹಲವು ನಿಯತಕಾಲಿಕೆಗಳು ಮತ್ತು ಕ್ಯಾಟಲಾಗ್‌ಗಳಿಗೆ ಮಾಡೆಲ್ ಆಗಿದ್ದಾಳೆ. ಗ್ರೇಲೀ ಮೇ ಅಮೆರಿಕನ್ ಫುಟ್‌ಬಾಲ್ ಆಟಗಾರ ಲ್ಯಾನ್ಸ್ ಮೂರೆ ಅವರ ಹಿರಿಯ ಪುತ್ರಿಯಾಗಿರುವ ಗ್ರೇಲೀ ಮೇಗೆ ( ) ಸೌಂದರ್ಯ ಜನ್ಮಜಾತವಾಗಿ ಅಮ್ಮನಿಂದ ಬಂದಿದ್ದು, 3 ವರ್ಷ ತುಂಬುವ ಮೊದಲೇ ಹಲವು ಮಕ್ಕಳ ಬಟ್ಟೆಯ ಜಾಹೀರಾತಿನಲ್ಲಿ ಮಾಡೆಲ್ ಆಗಿ ಮಿಂಚಿದ್ದರು. ಗ್ರೇಲಿ ಹಾಗೂ ಆಕೆಯ ಸೋದರಿಯರ ಫೋಟೋಗಳನ್ನು ತಾಯಿ ಆಗಾಗ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.