ಮಂಗಳೂರು ಬ್ಯೂಟಿ, ನಟಿ ಅನುಷ್ಕಾ ಶೆಟ್ಟಿಯಿಂದ ಮಹಿಳೆಯರಿಗೆ ಗುಡ್​ ನ್ಯೂಸ್​ ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಖುಷಿಯಲ್ಲಿದ್ದು, ಇದೀಗ ಮಹಿಳೆಯರಿಗಾಗಿ ಗುಡ್​ನ್ಯೂಸ್​ ನೀಡಿದ್ದಾರೆ. ಅವರು ಹೇಳಿದ್ದೇನು? ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಒಳ್ಳೆಯ ಸ್ಕ್ರಿಪ್ಟ್‌ ಸಿಕ್ಕರೆ ಕನ್ನಡದಲ್ಲಿಯೂ ಮಾಡುವೆ ಎಂದಿದ್ದರೂ ಇದುವರೆಗೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ತೆಲುಗು ಚಿತ್ರ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ( ) ಸಿನಿಮಾದ ಖುಷಿಯಲ್ಲಿದ್ದಾರೆ. ಮೂರು ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಆಗಮಿಸುತ್ತಿರೋ ಅನುಷ್ಕಾ ಅವರ ಮಿಸ್‌ ಶೆಟ್ಟಿ ಮಿಸ್ಟರ್‌ ಪೊಲಿಶೆಟ್ಟಿ ಚಿತ್ರ ಇದೇ 7ರಂದು ಬಿಡುಗಡೆ ಆಗಿದೆ. ಮಹೇಶ್‌ ಬಾಬು ಪಿಚಿಗೊಲ್ಲ ನಿರ್ದೇಶನದಲ್ಲಿ ಮೂಡಿಬಂದಿದೆ ಈ ಚಿತ್ರ. ಈ ಸಿನಿಮಾದಲ್ಲಿ ಶೆಫ್‌ ಆಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರನ್ನು ಸೋಷಿಯಲ್​ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ 30 ಲಕ್ಷ ಫ್ಯಾನ್ಸ್​ ಹೊಂದಿದ್ದಾಗ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶೆಟ್ಟಿ ( ) ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಆಗಾಗ ಟ್ವೀಟ್​ ಮಾಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಅವರು ಕನ್ನಡದಲ್ಲಿ ಪೋಸ್ಟ್​​ ಮಾಡುತ್ತಾರೆ. ಇತ್ತೀಚೆಗೆ ನಟಿ ಬರೋಬ್ಬರಿ 10 ಲಕ್ಷ ಫಾಲೋವರ್ಸ್​ ಪಡೆದಿದ್ದು, ಈ ಖುಷಿಯಲ್ಲಿ ಟ್ವೀಟ್​ ಮಾಡಿದ್ದರು. ತಮ್ಮ ಫ್ಯಾನ್ಸ್​ಗೆ ಹಾರ್ಟ್​ ಎಮೋಜಿ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. 2020ರಲ್ಲಿ ಅನುಷ್ಕಾ ಶೆಟ್ಟಿ ಅವರು ಟ್ವಿಟರ್​ನಲ್ಲಿ ಖಾತೆ ತೆರೆದಿದ್ದಾರೆ. ಎರಡೂವರೆ ವರ್ಷಗಳಲ್ಲಿಯೂ ಒಂದು ಮಿಲಿಯನ್​ ಅಂದರೆ 10 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ. ಎಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮದ್ವೆಗೆ ರೆಡಿಯಾಗಿದ್ದಾರೆ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ: ಆದ್ರೆ... ನಟಿ ಹೇಳಿದ್ದೇನು? ಈಗ ಅದೇ ಟ್ವಿಟರ್​ ಮೂಲಕ ಇನ್ನೊಂದು ಗುಡ್​ನ್ಯೂಸ್​​ ನೀಡಿದ್ದಾರೆ. 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದ ಯಶಸ್ಸಿನಲ್ಲಿರುವ ನಟಿ ತಮ್ಮ ಮಹಿಳಾ ಫ್ಯಾನ್ಸ್​ ಗುಡ್​ ನ್ಯೂಸ್​ ನೀಡಿದ್ದಾರೆ. ಇದರ ಕುರಿತು ಟ್ವಿಟರ್​ ಖಾತೆಯಲ್ಲಿ ನಟಿ ಮಾಹಿತಿ ಶೇರ್​ ಮಾಡಿದ್ದಾರೆ. ತಮ್ಮ ಸಿನಿಮಾ ಗೆದ್ದಿರುವುದಕ್ಕೆ ಧನ್ಯವಾದ ಸಲ್ಲಿಸಿರುವ ಅನುಷ್ಕಾ, ಇದೇ 14ರಂದು ಮಹಿಳೆಯರಿಗೆಂದೇ ಚಿತ್ರದ ವಿಶೇಷ ಷೋ ಆಯೋಜಿಸಿರುವುದಾಗಿ ತಿಳಿಸಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಚಿತ್ರಮಂದಿರಗಳಲ್ಲಿ ಈ ಷೋ ನಡೆಯಲಿದೆ. ಇದಕ್ಕೆ ಎಲ್ಲಾ ಮಹಿಳೆಯರು ತಪ್ಪದೇ ಬನ್ನಿ ಎಂದಿದ್ದಾರೆ ನಟಿ.ಕೆಲ ದಿನಗಳ ಹಿಂದೆ ನಟಿಗೆ ಮದುವೆಯ ಬಗ್ಗೆ ಕೇಳಲಾಗಿತ್ತು. ಅದಕ್ಕೆ ಅವರು, 'ನಿಜ ಹೇಳಬೇಕೆಂದರೆ, ಈ ಪ್ರಶ್ನೆಗೆ ನನ್ನ ಬಳಿ ನಿಖರ ಉತ್ತರವಿಲ್ಲ. ಸಮಯ ಕೂಡಿಬಂದಾಗ ಮದುವೆ ಆಗಲಿದೆ. ಮದುವೆ ಎಂಬುದು ನನ್ನ ಪಾಲಿಗೆ ಅದಾಗಿಯೇ ಘಟಿಸಬೇಕು. ಅದಕ್ಕೆ ಅದರದೇ ಆದ ಸಮಯ ಬೇಕು ಎಂದು ನಾನು ನಂಬುತ್ತೇನೆ. ಹಾಗಾಗಿ ಸದ್ಯಕ್ಕೆ ಆ ಬಗ್ಗೆ ನನ್ನ ಬಳಿ ಉತ್ತರವಿಲ್ಲ' ಎಂದಿದ್ದರು. ಪ್ರೀತಿ ಮತ್ತು ಭಾವನೆಗಳಿಲ್ಲದೆ ಮದುವೆಯಾಗುವುದರಲ್ಲಿ ಅರ್ಥವಿಲ್ಲ ಎಂದು ಅನುಷ್ಕಾ ಹೇಳಿದ್ದರು. ಅಂದಹಾಗೆ ನಟಿ ಅನುಷ್ಕಾ ಶೆಟ್ಟಿಗೆ ( ) ಈಗ 41 ವರ್ಷ ವಯಸ್ಸು. ಟ್ವಿಟರ್​ನಲ್ಲಿ ದಾಖಲೆಯ ಖುಷಿ ಹಂಚಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳಬಹುದಾ?