ಪುಸ್ತಕವೊಂದರಿಂದ ರಟ್ಟಾಯ್ತು ಶೋಭಿತಾ ಧೂಲಿಪಾಲ-ನಾಗಚೈತನ್ಯ ಸಂಬಂಧದ ಗುಟ್ಟು! ನಟಿ ಶೋಭಿತಾ ಧೂಲಿಪಾಲ ಮತ್ತು ನಟ ನಾಗ ಚೈತನ್ಯ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಹಾಗೂ ಸಂಬಂಧದಲ್ಲಿ ಇದ್ದಾರೆ ಎನ್ನುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವೇನು? ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಸದ್ದು ಮಾಡಿದ್ದ ನಟಿ ಶೋಭಿತಾ ಧೂಲಿಪಾಲ ಈ ಹಿಂದೆ ಡೇಟಿಂಗ್ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ ನಟ ನಾಗ ಚೈತನ್ಯ ( ) ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಹಲವು ಅನುಮಾನಗಳನ್ನೂ ಮೂಡಿಸಿತ್ತು. ಸಮಂತಾ () ಜೊತೆಗಿನ ಬಾಂಧವ್ಯ ಕಡಿದುಕೊಂಡ ನಂತರ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಗೆಳೆತನಕ್ಕೆ ಸಿಕ್ಕವರೇ ಶೋಭಿತಾ ಎಂದು ಹೇಳಲಾಗುತ್ತಿದೆ. ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಆದರೆ ಇದುವರೆಗೆ ಇವರು ತಮ್ಮ ಸಂಬಂಧದ ಕುರಿತು ಮಾತನಾಡಲಿಲ್ಲ. ಇತ್ತೀಚೆಗೆ ನಟಿ ಶೋಭಿತಾ ಧೂಲಿಪಾಲ ಮದುವೆ ವಿಷಯದಲ್ಲಿ ಸುದ್ದಿಯಾಗಿದ್ದರು. ಮೊದಲ ಬಾರಿಗೆ ಮದುವೆ ಬಗ್ಗೆ ಮಾತಾಡಿದ ನಟಿ ಶೋಭಿತಾ, ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳಿದ್ದರು. ದಿ ನೈಟ್ ಮ್ಯಾನೇಜರ್ 2 ಸಿನಿಮಾದ ಪ್ರಚಾರದ ವೇಳೆ ನಟಿ ತಮ್ಮ ಕನಸಿನ ರಾಜಕುಮಾರನ ಕುರಿತು ಮಾಹಿತಿ ಶೇರ್​ ಮಾಡಿಕೊಂಡಿದ್ದರು. ತಮ್ಮ ಭಾವಿ ಪತಿ ಹೇಗಿರಬೇಕು ಎಂಬ ಬಗ್ಗೆ ಮಾತಾಡಿದ್ದು, ಶೋಭಿತಾ ಧೂಲಿಪಾಲ ಶೀಘ್ರದಲ್ಲೇ ಮದುವೆ ಆಗಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಇದೀಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇವರಿಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ವಿಷಯಕ್ಕೆ ಮತ್ತೆ ಪುಷ್ಟಿ ಸಿಕ್ಕಿದೆ. ಇದಕ್ಕೆ ಕಾರಣ, ಶೋಭಿತಾ ( ) ಅವರು ನಟ ಮ್ಯಾಥ್ಯೂ ಮೆಕನೌಘೆ ಅವರ ಪುಸ್ತಕದ ಚಿತ್ರವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರುವುದು. ಅದಕ್ಕೆ ಕ್ಯಾಪ್ಷನ್​ ನೀಡಿರೋ ನಟಿ, ಕಳೆದ ಕೆಲವು ತಿಂಗಳುಗಳಲ್ಲಿ ನಾನು ಓದಿದ ಅತ್ಯುತ್ತಮ ಪುಸ್ತಕ ಎಂದು ಬರೆದಿದ್ದಾರೆ. ಎಂತಹ ನಂಬಲಾಗದ ಜೀವನ ಕಥೆ. ಒಂದು ಹಾಡಿನಂತೆ ಇದೆ ಎಂದಿದ್ದಾರೆ. ಕುತೂಹಲದ ಸಂಗತಿ ಎಂದರೆ ಇದೇ ಪುಸ್ತಕದ ಬಗ್ಗೆ ಕೆಲ ಸಮಯದ ಹಿಂದೆ ನಾಗ ಚೈತನ್ಯ ಮಾತನಾಡಿದ್ದರು. ಜೀವನಕ್ಕೆ ಒಂದು ಪ್ರೇಮ ಪತ್ರ ಎಂದು ಈ ಪುಸ್ತಕದ ಕುರಿತು ಅವರು ಹೇಳಿದ್ದರು. ಒಂದೇ ಪುಸ್ತಕವನ್ನು ಇಬ್ಬರೂ ಓದಿ, ಅದರ ಬಗ್ಗೆ ಬರೆದಿರುವ ಕಾರಣದಿಂದ ಮತ್ತೆ ಡೇಟಿಂಗ್​ ರೂಮರ್​ ಮುನ್ನೆಲೆಗೆ ಬಂದಿದೆ. ಸಮಂತಾಳ 'ಖುಷಿ' ಚಿತ್ರಕ್ಕೆ ಪ್ರಚಾರ ಕೊಡಲು ಥೂ ಈ ಗಿಮಿಕ್ಕಾ ಎಂದು ನಾಗಚೈತನ್ಯ ಗರಂ! ಇನ್ನು ಶೋಭಿತಾ ಅವರ ಕುರಿತು ಹೇಳುವುದಾದರೆ, ಮಿಸ್ ಇಂಡಿಯಾ ಅರ್ಥ್ ( ) ಕಿರೀಟವನ್ನು ಅಲಂಕರಿಸಿದ್ದಾ ಶೋಭಿತಾ, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಯ ಬಗ್ಗೆ ಪ್ರಶಂಸೆಯ ವಿಮರ್ಶೆಗಳನ್ನು ಪಡೆಯುತ್ತಿದ್ದಾರೆ. ಮೇಡ್ ಇನ್ ಹೆವನ್ ಎಂಬ ವೆಬ್ ಸೀರೀಸ್‌ನಲ್ಲಿ ಶೋಭಿತಾ ನಟಿಸಿದ್ದರು. ಇದು ಕೂಡ ಸಾಕಷ್ಟು ಒಳ್ಳೆಯ ವಿಮರ್ಶೆ ಪಡೆದುಕೊಂಡಿತ್ತು. ಇದಾದ ಬಳಿಕ ಈಚೆಗೆ ನಟಿ, ದಿ ನೈಟ್ ಮ್ಯಾನೇಜರ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಅನಿಲ್ ಕಪೂರ್ ಕೂಡ ನಟಿಸಿದ್ದಾರೆ. ನಾಗಚೈತನ್ಯ ಅವರ ಕುರಿತು ಹೇಳುವುದಾದರೆ, ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದವರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರೈಸ್ತ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕ ಈ ಜೋಡಿ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದ ( ) ಮೂಲಕವೇ ವಿಚ್ಛೇದನ ಘೋಷಿಸಿದ್ದರು. ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ್ದರು. ಈಗ ಸಮಂತಾ ಅವರ ಹೆಸರು ವಿಜಯ್​ ದೇವರಕೊಂಡ ಅವರ ಜೊತೆ ಥಳಕು ಹಾಕಿಕೊಂಡಿದೆ. ನಾನು ಸೆಕ್ಸಿನೇ ಎನ್ನುತ್ತಾ 'ನೈಟ್ ಮ್ಯಾನೇಜರ್' ಕುರಿತು ವಿವರಿಸಿದ ನಟಿ