ಮಲೈಕಾ-ಅರ್ಜುನ್​ ಡೇಟಿಂಗ್​ ವಿಡಿಯೋ ವೈರಲ್​: ಹುಡ್ಗಿ ಸಿಕ್ರೂ ಆಂಟಿನೇ ಬೇಕಾ ಅಂತಿದ್ದಾರೆ ಫ್ಯಾನ್ಸ್​! ಮಲೈಕಾ ಮತ್ತು ಅರ್ಜುನ್​ ಕಪೂರ್​ ಬೇರ್ಪಟ್ಟಿರುವುದಾಗಿ ಕೆಲವು ದಿನಗಳಿಂದ ಕೇಳಿಬರುತ್ತಿರುವ ವದಂತಿಗೆ ತೆರೆ ಎಳೆದಿರುವ ಜೋಡಿ ಒಟ್ಟಾಗಿ ಲಂಚ್​ ಡೇಟಿಂಗ್​ನಲ್ಲಿ ಕಾಣಿಸಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಜಾಲತಾಣದಲ್ಲಿ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್​ ಅವರ ಸೆಪರೇಷನ್​ನ್ನದ್ದೇ ಸುದ್ದಿ. ಇವರಿಬ್ಬರೂ ಬೇರೆಬೇರೆಯಾಗಿದ್ದಾರೆ ಎನ್ನುವ ವಿಷಯ ದೊಡ್ಡಮಟ್ಟಿನ ಚರ್ಚೆಗೆ ಗ್ರಾಸವಾಗಿತ್ತು. ಹಾಟೆಸ್ಟ್ ಜೋಡಿ ಎಂದೇ ಕರೆಸಿಕೊಳ್ಳುತ್ತಿದ್ದ ಮಲೈಕಾ ಅರೋರಾ ( ) ಮತ್ತು ಅರ್ಬಾಜ್ ಖಾನ್ ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ ( ) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್​ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಇವರಿಬ್ಬರೂ ಯಾರಿಗೂ ಡೋಂಟ್​ಕೇರ್​ ಎನ್ನದೇ ಜೀವನ ನಡೆಸುತ್ತಿದ್ದಾರೆ. ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಆದರೆ ಇದರ ಬೆನ್ನಲ್ಲೇ ಇವರಿಬ್ಬರೂ ಬ್ರೇಕಪ್​ ಆಗಿದ್ದಾರೆ ಎಂಬ ಭಾರಿ ಸುದ್ದಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಮಲೈಕಾ ಜೊತೆ ಟ್ರಿಪ್​ಗೆ ಹೋಗುತ್ತಿದ್ದ ಅರ್ಜುನ್​ ಈಗ ಒಂಟಿಯಾಗಿ ತಿರುಗಾಡಲು ಶುರು ಮಾಡಿದ್ದೇ ಈ ಗಾಳಿ ಸುದ್ದಿಗೆ ಕಾರಣವಾಗಿದೆ. ಇದು ಒಂದೆಡೆಯಾದರೆ, ಇತ್ತ ಕೆಲವು ದಿನಗಳಿಂದ ನಟಿ ಕುಶಾ ಕಪಿಲಾ ಅವರ ಹೆಸರು ಅರ್ಜುನ್ ಕಪೂರ್ ಜತೆ ಥಳುಕು ಹಾಕಿಕೊಂಡಿದೆ. ಕುಶಾ ಜೊತೆ ಅರ್ಜುನ್‌ ಕಪೂರ್‌ ( ) ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಯಸ್ಸಿನಲ್ಲಿ ಅತಿ ದೊಡ್ಡವರಾಗಿರುವ ಮಲೈಕಾ ಜೊತೆ ಹಲವಾರು ವರ್ಷಗಳಿಂದ ಡೇಟಿಂಗ್‌ ಮಾಡಿ ದೇಶ-ವಿದೇಶ ಸುತ್ತಿದ ಅರ್ಜುನ್‌ ಕಪೂರ್‌ಗೆ ಈಗ ಜ್ಞಾನೋದಯ ಆಯ್ತಾ ಎಂದು ಫ್ಯಾನ್ಸ್‌ ಕೇಳುತ್ತಿದ್ದಾರೆ. ಈಗ ಚಿಕ್ಕ ವಯಸ್ಸಿನ ಕುಶಿ ಜೊತೆ ಹೆಸರು ಕೇಳಿಬರುತ್ತಿದ್ದಂತೆಯೇ ಅವರಿಬ್ಬರ ಸುದ್ದಿ ಸಕತ್‌ ಕೇಳಿಬರುತ್ತಿದೆ. ಅಷ್ಟಕ್ಕೂ ಇವರಿಬ್ಬರ ಹೆಸರು ಥಳಕು ಹಾಕಲು ಕಾರಣ ಏನೆಂದರೆ, ಈ ಹಿಂದೆ, ಅರ್ಜುನ್ ಕಪೂರ್ ಮತ್ತು ಕುಶಾ ಕಪಿಲಾ ನಿರ್ದೇಶಕ ಕರಣ್ ಜೋಹರ್ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಲ್ಲಿ ಮಲೈಕಾ ಅರೋರಾ ಬಂದಿರಲಿಲ್ಲ. ಅಷ್ಟೇ ಅಲ್ಲದೇ, ಅರ್ಜುನ ಕಪೂರ್‌ ಸೋಲೋ ಟ್ರಿಪ್‌ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸಿ ಈ ರೂಮರ್ಸ್ ಹರಡಲಾಗುತ್ತಿದೆ. ಅರ್ಜುನ್‌ ಕಪೂರ್‌ಗೆ ಮಲೈಕಾ ಸಹವಾಸ ಸಾಕಾಯ್ತಾ? ನಟಿ ಕುಶಾ ಜೊತೆ ಏನಿದು ವಿಷ್ಯ? ಇದೂ ಸಾಲದು ಎಂಬಂತೆ ನಿನ್ನೆಯಷ್ಟೇ ಮಲೈಕಾ ಅವರು, ಅರ್ಜುನ್​ ಕಪೂರ್​ ಅವರನ್ನು ಹೊರತುಪಡಿಸಿ ಕಪೂರ್​ ಫ್ಯಾಮಿಲಿಯ ಕೆಲವೊಂದು ಸದಸ್ಯರನ್ನು ಸೋಷಿಯಲ್​ ಮೀಡಿಯಾದಿಂದ ಅನ್​ಫಾಲೋ ಮಾಡಿದ್ದರು. ಇದು ಕೂಡ ಸಾಕಷ್ಟು ಗಾಳಿ ಸುದ್ದಿ ಹರಡುವುದಕ್ಕೆ ಕಾರಣವಾಗಿತ್ತು. ಆದರೆ ಇದೀಗ ಕುತೂಹಲ ಎನ್ನುವಂತೆ ಇವರಿಬ್ಬರೂ ಹೋಟೆಲ್​ಗೆ ಡೇಟಿಂಗ್​ಗೆ ಹೋಗಿದ್ದು, ಅದರಿಂದ ಹೊರಬರುತ್ತಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದ ಮೂಲಕ ಕೆಲ ದಿನಗಳಿಂದ ಹರಿದಾಡುತ್ತಿರುವ ಗಾಸಿಪ್​ಗೆ ಜೋಡಿ ಬ್ರೇಕ್​ ಹಾಕಿದೆ. ತಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಜೋಡಿ ಮಾತಿನ ಮೂಲಕವಲ್ಲದೇ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ತೋರಿಸಿಕೊಟ್ಟಿದೆ. ಇದು ಡ್ರಾಮಾ ಇದ್ದರೂ ಇರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಈ ಜೋಡಿ ಬೇರೆಯಾಗಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ಇನ್ನು ಕೆಲವರು. ಅರ್ಜುನ್​ ಕಪೂರ್​ ಫ್ಯಾನ್ಸ್​ ಅಂತೂ ಕೊನೆಗೂ ನಿಮ್ಗೆ ಬುದ್ಧಿ ಬಂದು ಆಂಟಿಯನ್ನು ಬಿಟ್ಟು ಹುಡುಗಿ ಹಿಂದೆ ಹೋದ್ರಿ ಎಂದುಕೊಂಡ್ರೆ ಆಂಟಿಯನ್ನು ಬಿಡಲು ರೆಡಿನೇ ಇಲ್ವಾ ಅಂತ ಕಾಲೆಳೆಯುತ್ತಿದ್ದಾರೆ. ಅದೇ ಇನ್ನೊಂದೆಡೆ, ಕುಶಾ ಕಪಿಲಾ ( ) ಅವರು ತಮ್ಮ ಮತ್ತು ಅರ್ಜುನ್​ ಕಪೂರ್​ ಸಂಬಂಧದ ಕುರಿತು ಗಾಳಿ ಸುದ್ದಿ ಹರಡುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದ್ದರು. ಸುದ್ದಿಯಿಂದ ಅಸಮಾಧಾನ ಹಾಗೂ ಆಕ್ರೋಶಗೊಂಡಿರುವ ನಟಿ, ಈ ರೀತಿಯ ಸುದ್ದಿ ಹರಡಲು ನಾಚಿಕೆ ಆಗಲ್ವಾ ಎಂದು ಕೇಳುತ್ತಿದ್ದಾರೆ. ದಿನನಿತ್ಯವೂ ಅಸಹ್ಯ ಸುದ್ದಿಗಳನ್ನು ಕೇಳಿ ಕೇಳಿ ನನಗೂ ಸಾಕಾಗಿ ಹೋಗಿದೆ. ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆಯನ್ನು ನನ್ನ ಮುಂದೆ ಇಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಷಯವಾಗಿ ಚರ್ಚಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿರುವ ಕುಶಾ, ನನ್ನ ಅಮ್ಮ ಏನಾದರೂ ಈ ಸುದ್ದಿಗಳನ್ನು ನೋಡಿದರೆ ಅಷ್ಟೇ. ಅವರಿಗೆ ಎಷ್ಟು ನೋವಾಗುತ್ತದೆ ಎಂದಿದ್ದಾರೆ. ದಯವಿಟ್ಟು ಇಂಥ ರೂಮರ್ಸ್ ಹರಡುವುದನ್ನು ನಿಲ್ಲಿಸಿ ಎಂದಿದ್ದಾರೆ. ಮಲೈಕಾ- ಅರ್ಜುನ್​ ನೈಟ್​ ಔಟ್​: ಮುದಿ ಕುದುರೆಗೆ ಯುವ ಜಾಕಿ ಅನ್ನೋದಾ ನೆಟ್ಟಿಗರು! (@)