ಸಮಂತಾ- ವಿಜಯ್ ದೇವರಕೊಂಡ ಇಷ್ಟು ಕ್ಲೋಸಾದ್ರಾ? ಮಿಡ್​ನೈಟ್‌​ ವಿಡಿಯೋ ಮೆಸೇಜ್​ ವೈರಲ್​ ಸಮಂತಾ ಮತ್ತು ವಿಜಯ ದೇವರಕೊಂಡ ಅವರ ಖುಷಿ ಚಿತ್ರದ ಬಿಡುಗಡೆಗೂ ಮುನ್ನವೇ ಈ ಜೋಡಿ ಮಿಡ್​ನೈಟ್​ ಮಾತನಾಡಿರೋ ವಿಡಿಯೋ ವೈರಲ್​ ಆಗಿದೆ. ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ ಎನಿಸಿರುವ ವಿಜಯ್​ ದೇವರಕೊಂಡ ( ) ಅವರು ಈಗ‘ಖುಷಿ’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಸೆಪ್ಟೆಂಬರ್​ 1ರಂದು ಈ ಚಿತ್ರ ಬಿಡುಗಡೆಯಾಗಲಿದೆ. 'ಲೈಗರ್‌' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಖುಷಿ () ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ. ನಟಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಲವ್​, ರೊಮ್ಯಾಂಟಿಕ್​ ಎಂಟರ್ಟೈನ ಚಿತ್ರವಾಗಿದ್ದು, ಶಿವ ನಿರ್ವಾಣ ಎಂಬುವರು ನಿರ್ದೇಶನ​ ಮಾಡಿದ್ದಾರೆ. ಲೈಗರ್ ಸಿನಿಮಾ ಸೋಲಿನ ಬಳಿಕ ಸಮಂತಾ ರುತ್​ ಪ್ರಭು ಜೊತೆ ಖುಷಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ನಟ ವಿಜಯ್ ದೇವರಕೊಂಡ. ಈಗ ಅದರ ನಡುವೆಯೇ, ಈಚೆಗೆ ನಡೆದ ಕಾರ್ಯಕ್ರಮವೊಂದರ ವಿಡಿಯೋ ವೈರಲ್​ ಆಗಿತ್ತು. ಅದರಲ್ಲಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅವರು ಹಾಡೊಂದಕ್ಕೆ ನರ್ತಿಸಿದ್ದಾರೆ. ಇದರಲ್ಲಿ ಅವರು ಸಂಪೂರ್ಣ ರೊಮ್ಯಾನ್ಸ್​ನಲ್ಲಿ ತೊಡಗಿಸಿಕೊಂಡಿದ್ದನ್ನು ನೋಡಿ ಫ್ಯಾನ್ಸ್​ ಉಸ್ಸಪ್ಪಾ ಎಂದಿದ್ದರು. ಜಯ್​ ದೇವರಕೊಂಡ ( ) ಅವರು ತಮ್ಮ ಶರ್ಟ್​ ಅನ್ನು ತೆಗೆದು ಕೇವಲ ಬನಿಯನ್​ನಲ್ಲಿ ಮಿಂಚಿದರು. ಹೀಗಾಗುತ್ತಿದ್ದಂತೆಯೇ ಶಿಳ್ಳೆಗಳ ಸುರಿಮಳೆಯಾಗಿದೆ. ನಂತರ ವಿಜಯ್​ ಅವರು, ಸಮಂತಾರನ್ನು ಎತ್ತುಕೊಂಡು ಗರಗರನೆ ತಿರುಗಿದರು. ನಂತರ ಇವರಿಬ್ಬರ ರೊಮ್ಯಾನ್ಸ್​ ಮುಂದುವರೆಯಿತು. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗಾಳಿ ಸುದ್ದಿ ಕೆಲ ತಿಂಗಳಿನಿಂದ ಹರಿದಾಡುತ್ತಿರುವ ನಡುವೆಯೇ ಈ ರೊಮ್ಯಾನ್ಸ್​ ವಿಡಿಯೋ ವೈರಲ್​ ಆಗಿತ್ತು. ಅದಕ್ಕೂ ಮುನ್ನ ಖುಷಿ ಸಿನಿಮಾದ ಟ್ರೈಲರ್​​ಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಖುಷಿ () ಸಿನಿಮಾದ ನಟಿ ಸಮಂತಾ ರುತ್​ ಪ್ರಭು ತಮ್ಮ ಕ್ರಷ್​ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ವಿಜಯ್​. ಇಲ್ಲಿಯವರೆಗೆ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಅವರ ಹೆಸರು ಸಮಂತಾ ಜೊತೆ ಥಳಕು ಹಾಕಿಕೊಂಡಿದೆ. ಮದ್ವೆಯ ಮಾತನಾಡುತ್ತಲೇ ಸಮಂತಾ ನನ್ನ ಕ್ರಷ್​ ಎಂದ ವಿಜಯ ದೇವರಕೊಂಡ; ರಶ್ಮಿಕಾ ಶಾಕ್​! ಇದೀಗ ಸಮಂತಾ ಹಾಗೂ ವಿಜಯ್ ದೇವರಕೊಂಡ ( ) ಅವರು ಇನ್ನೂ ಸಕತ್​ ಕ್ಲೋಸ್​ ಆಗಿದ್ದಾರೆ ಎನ್ನುವ ವಿಷಯ ಮಧ್ಯರಾತ್ರಿಯ ಅವರ ವಿಡಿಯೋ ಚಾಟಿಂಗ್​ ಮೂಲಕ ತಿಳಿದುಬಂದಿದೆ. ಅದೇನಪ್ಪಾ ಎಂದರೆ ವಿಜಯ್​ ದೇವರಕೊಂಡ ಅವರು ಹೈದರಾಬಾದ್​ನಲ್ಲಿದ್ದು, ಸಮಂತಾ ಟ್ರೀಟ್​ಮೆಂಟ್​ಗೆಂದು ಅಮೆರಿಕಕ್ಕೆ ಹೋಗಿದ್ದಾರೆ. ನಡುರಾತ್ರಿ ವಿಜಯ್ ದೇವರಕೊಂಡ ವಿಡಿಯೋ ಕಾಲ್ ಮಾಡಿದ್ದಾರೆ. ಕಾಲ್​ ರಿಸೀವ್ ಮಾಡಿರೋ ಸಮಂತಾ ವಾಟ್ಸ್​ ಅಪ್​, ಎಲ್ಲವೂ ಓಕೆ ನಾ ಎಂದು ಕೇಳಿದ್ದಾರೆ ಇದಕ್ಕೆ ವಿಜಯ್​, ಐ ಮಿಸ್​ ಯೂ ಎಂದಿದ್ದಾರೆ. ವಿಜಯ್​ ಅವರ ಮಾತು ಕೇಳಿ ಸಮಂತಾ ಕೂಡ ನಾಚಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನಿನಗೆ ಜೋಕ್ ಒಂದನ್ನು ಹೇಳೋದಾಗಿ ವಿಜಯ್​ ದೇವರಕೊಂಡ ಹೇಳಿದ್ದಾರೆ. ವಿಡಿಯೋ ಕಾಲ್ ಮಾಡಿ ನನ್ನ ಬಳಿ ಒಂದು ‘ನಾಕ್ ನಾಕ್’ ಜೋಕ್ ಇದೆ ಎಂದಿದ್ದಾರೆ ವಿಜಯ್, ಅಮೆರಿಕದಲ್ಲಿ ಈಗ ಎಷ್ಟು ಸಮಯ ಗೊತ್ತೆ? ನಿನ್ನದು ಜೋಕಾ, ಬೇಗ ಹೇಳು ಎಂದಿದ್ದಾರೆ ಸಮಂತಾ. ವಿಜಯ್ ದೇವರಕೊಂಡ ನಾಕ್ ನಾಕ್ ( ) ಎಂದಾಗ ನಿಯಮದಂತೆ ಸಮಂತಾ, ಯಾರದು ಎಂದಿದ್ದಾರೆ. ಆಗ ವಿಜಯ್ ದೇವರಕೊಂಡ ನಾ ರೋಜಾ ನುವ್ವೆ ಹಾಡು ಹಾಡಿದ್ದಾರೆ. ಇದರ ವಿಡಿಯೋ ಸಕತ್​ ಸುದ್ದಿ ಮಾಡುತ್ತಿದ್ದು, ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ವೇದಿಕೆಯಲ್ಲೇ ಸಮಂತಾ, ದೇವರಕೊಂಡ ರೊಮ್ಯಾನ್ಸ್: ಸಾಕಪ್ಪಾ ಸಾಕು ಎಂದ ಫ್ಯಾನ್ಸ್​! ಅದೇನೇ ಇದ್ದರೂ ಖುಷಿ ಸಿನಿಮಾದ ಟ್ರೈಲರ್​ (), ಹಾಡಿಗೆ ಫಿದಾ ಆಗಿರೋ ಫ್ಯಾನ್ಸ್​ ಖುಷಿ ಚಿತ್ರದಲ್ಲಿ ಈ ಜೋಡಿಯ ಕೆಮಿಸ್ಟ್ರಿ ನೋಡಲು ಕಾತರರಾಗಿದ್ದಾರೆ. ಅಂದಹಾಗೆ, ‘ಖುಷಿ’ ಚಿತ್ರಕ್ಕೆ ಶಿವನಿರ್ವಾಣ ಅವರ ನಿರ್ದೇಶನವಿದೆ. ಸಮಂತಾ ಕಾಶ್ಮೀರದ ಹಿನ್ನೆಲೆಯಲ್ಲಿ ಮುಸ್ಲಿಂ ಯುವತಿಯಾಗಿ ಕಾಣಿಸಿಕೊಳ್ಳುವ ಸಮಂತಾರನ್ನು ಪ್ರೀತಿಸುವ ನಾಯಕನ ಪಾತ್ರದಲ್ಲಿ ವಿಜಯ್​ ನಟಿಸಿದ್ದಾರೆ. ಚಿತ್ರವು ತಮಿಳು, ಮಲಯಾಳಂ, ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಯರಾಂ, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ಶರಣ್ಯ ಪೊನ್ ವಣ್ಣನ್, ರೋಹಿಣಿ, ರಾಹುಲ್ ರಾಮಕೃಷ್ಣ, ವೆನ್ನೆಲ ಕಿಶೋರ್, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಪ್ರದೀಪ್ ಮುಂತಾದವರು ನಟಿಸಿದ್ದಾರೆ. (@)