ಬರೀ ಲಿಫ್ಟ್ ಪಡೆದೇ 20 ಸಾವಿರ ಕಿಲೋ ಮೀಟರ್ ಸಂಚರಿಸಿದ ವಿದೇಶಿ ಪ್ರಜೆ ಬೆಂಗಳೂರು/ಮೈಸೂರು: ರಸ್ತೆ ಬದಿ ಸಾರ್ವಜನಿಕ ಸಾರಿಗೆ ವಾಹನಗಳಿಗಾಗಿ ಕಾದು ಕಾದು ವಾಹನಗಳ್ಯಾವುದು ನಿಲ್ಲಿಸದೇ ಹೋದಾಗ ಕಾದು ಕಾದು ಸುಸ್ತಾದಾಗ ಜನ ಲಿಫ್ಟ್‌ ಕೇಳ್ತಾರೆ. ಆದ್ರೆ ಇಲ್ಲೊಬ್ಬ ವಿದೇಶಿ ಪ್ರಜೆ ಬರೀ ಲಿಫ್ಟ್‌ ಪಡೆದೇ 20 ಸಾವಿರ ಕಿಲೋ ಮೀಟರ್‌ಗೂ ಅಧಿಕ ದೂರ ಪ್ರಯಾಣಿಸಿದ್ದಾನೆ. ಆತನ ಡಿಟೇಲ್ ಇಲ್ಲಿದೆ. ಬೆಂಗಳೂರು/ಮೈಸೂರು: ರಸ್ತೆ ಬದಿ ಸಾರ್ವಜನಿಕ ಸಾರಿಗೆ ವಾಹನಗಳಿಗಾಗಿ ಕಾದು ಕಾದು ವಾಹನಗಳ್ಯಾವುದು ನಿಲ್ಲಿಸದೇ ಹೋದಾಗ ಕಾದು ಕಾದು ಸುಸ್ತಾದಾಗ ಜನ ಲಿಫ್ಟ್‌ ಕೇಳ್ತಾರೆ. ಆದ್ರೆ ಇಲ್ಲೊಬ್ಬ ವಿದೇಶಿ ಪ್ರಜೆ ಬರೀ ಲಿಫ್ಟ್‌ ಪಡೆದೇ 20 ಸಾವಿರ ಕಿಲೋ ಮೀಟರ್‌ಗೂ ಅಧಿಕ ದೂರ ಪ್ರಯಾಣಿಸಿದ್ದಾನೆ. ಆತನ ಡಿಟೇಲ್ ಇಲ್ಲಿದೆ. ಬರೀ ಲಿಫ್ಟ್ ಪಡೆದೇ ಊರೂರು ಸಂಚರಿಸಿದ ಈ ವಿದೇಶಿ ಕಿಲಾಡಿ ಹೆಸರು ಲುಕಾಸ್ ವೆನ್ನಾರ್‌ ( ), ಹಣ ಖರ್ಚಾಗುವ ಚಿಂತೆಯೂ ಇಲ್ಲ, ಉಚಿತ ಪ್ರಯಾಣದ ಜೊತೆ ಹೊಸ ಜನರ ಪರಿಚಯವೂ ಆಗುತ್ತೆ ಎಂಬ ಯೋಚನೆ ಈತನದ್ದು, ಲಿಫ್ಟ್ ಪಡೆದೇ ಪ್ರಪಂಚ ಪರ್ಯಟನೆ ಮಾಡುವ ಗುರಿ ಹೊಂದಿರುವ ಈತ ಇದುವರೆಗೆ ಬರೋಬ್ಬರಿ 20 ಸಾವಿರ ಕಿಲೋಮೀಟರ್‌ ದೂರ ಸಂಚರಿಸಿದ್ದಾನೆ. ಬರೀ ಲಿಫ್ಟ್ ಪಡೆದೇ ಬೇರೆ ಬೇರೆ ಸುತ್ತುವ ಫ್ರಾನ್ಸ್‌ ಮೂಲದ ಲುಕಾಸ್ ವೆನ್ನಾರ್‌ ಪ್ರಸ್ತುತ ಭಾರತ ಪರ್ಯಟನೆಯಲ್ಲಿದ್ದಾನೆ. ಫೆಬ್ರವರಿ 4 ರಂದು ಫ್ರಾನ್ಸ್ ನಿಂದ ಪ್ರಯಾಣ ಆರಂಭಿಸಿರುವ 23 ವರ್ಷದ ಲುಕಾಸ್ ವೆನ್ನಾರ್‌ ಇದುವರೆಗೆ 20 ಸಾವಿರ ಕಿಲೋ ಮೀಟರ್ ಬರೀ ಲಿಫ್ಟ್ ಪಡೆದೇ ಸಂಚರಿಸಿದ್ದಾನೆ ಎಂದರೆ ಅದೊಂದು ಸಾಧನೆಯೇ ಸರಿ. ಈತ ತನ್ನ ಪ್ರಯಾಣಕ್ಕಾಗಿ ಎಲ್ಲಿಯೂ ಟಿಕೇಟ್ ಖರೀದಿದಿಸಿಲ್ಲ, ಬಸ್‌ ಹತ್ತಿಲ್ಲ, ರೈಲನ್ನೂ ಏರಿಲ್ಲ, ವಿಮಾನದಲ್ಲಂತೂ ಪ್ರಯಾಣಿಸಿಯೇ ಇಲ್ಲ, ಏನಿದ್ದರೂ ಅಪರಿಚಿತರ ಬೈಕ್ ಕಾರುಗಳೇ ಈತನ ಗುರಿ. ಇದುವರೆಗೆ ಈತ ಹಡಗು ಸೇರಿ ಕಾರು, ಬೈಕ್, ಟ್ರಕ್‌ಗಳ ಮೂಲಕ ಪ್ರಯಾಣ ಮಾಡಿ 20 ಸಾವಿರ ಕಿಲೋ ಮೀಟರ್ ದೂರ ಕ್ರಮಿಸಿರುವ ಈತನಿಗಿನ್ನೂ ಬರೀ 23 ವರ್ಷ ವಯಸ್ಸು ಫ್ರಾನ್ಸ್‌ನಿಂದ ಆರಂಭಿಸಿ ಆಫ್ರಿಕಾ, ಚೈನಾ, ಟಿಬೇಟ್, ಖಜಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿ 14 ಕ್ಕೂ ಹೆಚ್ಚು ದೇಶಗಳಲ್ಲಿ ಈತ ಸಂಚರಿಸಿದ್ದಾನೆ. ಅದರಲ್ಲೂ ಈತ ಭಾರತದಲ್ಲಿ ಒಟ್ಟು ಎರಡು ತಿಂಗಳ ಕಾಲ ಬರೀ ಲಿಫ್ಟ್‌ ಪಡೆದೇ ಸಂಚರಿಸಿದ್ದಾನೆ. ಪ್ರಸ್ತುತ ಅರಮನೆ ನಗರಿ ಮೈಸೂರಿನಲ್ಲಿರು ಈತ ಮುಂದೆ ಶ್ರೀಲಂಕಾಗೆ ತೆರಳುವ ಗುರಿ ಹೊಂದಿದ್ದಾನೆ. ಇಲ್ಲಿಂದ ಮುಂದೆ ಆತ ಸ್ವಿಜರ್ಲೆಂಡ್ವರೆಗೂ ಬರೀ ಲಿಫ್ಟ್ ಪಡೆದೇ ಸಂಚರಿಸುವ ಗುರಿ ಹೊಂದಿದ್ದು, ಅಲ್ಲಿವರೆಗೆ ಆತನಿಗೆ ಯಾರೂ ಲಿಫ್ಟ್ ನೀಡುವರೋ ಗೊತ್ತಿಲ್ಲ, ಪ್ರಸ್ತುತ ಅರಮನೆ ನಗರಿ ಮೈಸೂರಿನಲ್ಲಿರುವ ಈತ ಅರಮನೆ ನಗರಿ ನೋಡಿ ಬಹಳ ಖುಷಿ ಪಟ್ಟಿದ್ದು, ಇನ್ನಷ್ಟು ದೇಶಗಳನ್ನು ಸುತ್ತುವ ಗುರಿ ಹೊಂದಿದ್ದಾನೆ. ಹೇಗಿದೆ ನೋಡಿ ಈತನ ಸಾಹಸ ಊರು ಕೇರಿ ಗೊತ್ತಿಲ್ಲದ ಗುರುತು ಪರಿಚಯವಿಲ್ಲದ ಊರಲ್ಲಿ ಒಬ್ಬಂಟಿಯಾಗಿ ಅಪರಿಚಿತರ ಬಳಿ ಲಿಫ್ಟ್ ಪಡೆದು ತಿರುಗುತ್ತಿರುವ ಈತನಿಗೊಂದು ಹ್ಯಾಟ್ಸಾಪ್ ಹೇಳಲೇಬೇಕು ಅಲ್ವಾ?