ಡೈನೊಸಾರ್‌ಗೂ ಮೊದಲೇ ಭೂಮಿಯ ಮೇಲಿದ್ದ ದೈತ್ಯ ಜೀವಿ ಇದು! ಡೈನೊಸಾರ್ ಒಂದೊಂದು ಹೆಜ್ಜೆಯೂ ಭಯಾನಕವಾಗಿತ್ತು ಎನ್ನಲಾಗಿದೆ. ಡೈನೊಸಾರನ್ನು ಯಾರೂ ನೋಡಿಲ್ಲವಾದ್ರೂ ಅದ್ರ ಹೆಸರು ಕೇಳಿದ್ರೆ ಹೆದರಿಕೆಯಾಗುತ್ತದೆ. ಆದ್ರೆ ಡೈನೊಸಾರ್ ಗಿಂತಲೂ ದೊಡ್ಡ ಪ್ರಾಣಿಯೊಂದು ಭೂಮಿ ಮೇಲಿತ್ತು ಎಂಬ ವಿಷ್ಯ ಹೊರಬಿದ್ದಿದೆ. ಸಾವಿರಾರು ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ದೈತ್ಯಾಕಾರದ ಜೀವಿಗಳು ಇದ್ದವು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯ ಸಿಗ್ತಿದೆ. ನಮಗೆ ತಿಳಿದ ಹಾಗೆ ಡೈನೊಸಾರ್ ಭೂಮಿಯ ಮೇಲಿನ ದೊಡ್ಡ ಜೀವಿಯಾಗಿದೆ. ಅದನ್ನು ಕೂಡ ನಾವು ಸಿನೇಮಾಗಳಲ್ಲಿ, ಚಿತ್ರಗಳಲ್ಲಿಯೇ ನೋಡಿದ್ದೇವೆ. ಆ ದೈತ್ಯ ಜೀವದ ಕಲ್ಪನೆ ಮಾಡಿಕೊಂಡರೇ ಮೈಯೆಲ್ಲ ನಡುಕಹುಟ್ಟುತ್ತೆ. ಆದರೆ ಈಗ ಡೈನೊಸಾರ್ ಗಿಂತಲೂ ದೊಡ್ಡ ಜೀವಿ ಇತ್ತು ಎನ್ನುವುದು ಬೆಳಕಿಗೆ ಬಂದಿದೆ. ಹಿಂದೆ ಡೈನೊಸಾರ್ ( ) ಮೊಟ್ಟೆ ಹಾಗೂ ಪಳೆಯುಳಿಕೆಗಳು ಸಿಕ್ಕಂತೆಯೇ ಈಗ ಡೈನೊಸಾರ್ ಗಿಂತಲೂ ಮೊದಲು ಅಸ್ತತ್ವದಲ್ಲಿದ್ದ ಅಥವಾ ಡೈನೊಸಾರ್ ಅವಧಿಯಲ್ಲೇ ಇದ್ದ ಒಂದು ದೊಡ್ಡ ಪ್ರಾಣಿಯ ಪಳೆಯುಳಿಕೆ ದೊರಕಿದೆ. ಈ ಜೀವಿಗೆ ಚೂಪಾದ ಹಲ್ಲು () ಗಳು ಮತ್ತು ಮುಖದ ಮೇಲೆ ಎರಡು ಸುಂಡಿಲು ಇರುವುದು ವಿಶಿಷ್ಟವಾಗಿದೆ. ಬಹುಶಃ ಈ ಜೀವಿಯೂ ಡೈನೊಸಾರ್ ಯುಗಕ್ಕೆ ಅಥವಾ ಅದಕ್ಕಿಂತ ಮುಂಚೆಯೇ ಇತ್ತು ಎನ್ನುವುದನ್ನು ವಿಜ್ಞಾನಿ () ಗಳು ಹೇಳುತ್ತಾರೆ. ಈ ದೈತ್ಯ ಜೀವಿಗಳ ಎದುರಲ್ಲಿ ಹುಲಿ, ಸಿಂಹಗಳು ಕೂಡ ಚಿಕ್ಕದಾಗಿ ಕಾಣುತ್ತವೆ ಎಂದು ಅವರು ಹೇಳಿದ್ದಾರೆ. ದೈತ್ಯ ಪ್ರಾಣಿಗಳ ಅವಶೇಷಗಳು ಸಿಕ್ಕಂತೆ ಅವುಗಳ ಬಗೆಗಿನ ಮಾಹಿತಿಗಳು ಕೂಡ ಮುನ್ನಲೆಗೆ ಬರುತ್ತಿವೆ. ವಿಮಾನದಲ್ಲಿ 1500 ರೂ. ಮೌಲ್ಯದ ಕಡಲೆಕಾಯಿ ಖರೀದಿಸಿದ ಮಹಿಳೆ! ಇದು ಯಾವ ಜೀವಿ? :26 ವರ್ಷದ ಹಿಂದೆ ಅಂದರೆ 1997 ರಲ್ಲಿ ಆಸ್ಟ್ರೇಲಿಯಾದ ಒಬ್ಬ ಕೋಳಿ ಸಾಕಿದವನಿಗೆ ಒಂದು ದೈತ್ಯಾಕಾರದ ಪಳೆಯುಳಿಕೆ ಸಿಕ್ಕಿತ್ತು. ಆದರೆ ಆ ಸಮಯದಲ್ಲಿ ವಿಜ್ಞಾನಿಗಳಿಗೆ ಅದು ಯಾವ ಜೀವಿ, ಅದರ ಹೆಸರೇನು ಎಂಬ ಪೂರ್ವಾಪರಗಳ ಬಗ್ಗೆ ವಿಜ್ಞಾನಿಗಳಿಗೂ ತಿಳಿದಿರಲಿಲ್ಲ. ಹಲವು ವರ್ಷಗಳ ಸತತ ಸಂಶೋಧನೆಯಿಂದ ಈಗ ಆ ಜೀವಿಯ ಬಗ್ಗೆ ಮಾಹಿತಿಗಳು ಸಿಕ್ಕಿವೆ.ಇದು ಮೊಸಳೆಯನ್ನೇ ಹೋಲುವ ದೊಡ್ಡ ಜೀವಿಯಾಗಿದೆ. ಆದರೆ ಇದರ ಮುಖದ ಮೇಲೆ ಇರುವ ಎರಡು ಸೊಂಡಿಲು ಇದನ್ನು ಮೊಸಳೆಗಿಂತ ಭಿನ್ನವಾಗಿಸಿದೆ. ವಿಜ್ಞಾನಿಗಳು ಈ ಜೀವಿಗೆ ಅರೆನಾರೆಪೆಟನ್ ಸುಪಿನಾಟಸ್ ಎಂದು ಹೆಸರಿಟ್ಟಿದ್ದಾರೆ. ಇದೊಂದು ಹರಿದಾಡುವ ಪ್ರಾಣಿಯಾಗಿದೆ. ವಿಜ್ಞಾನಿಗಳು ಇದನ್ನು ಪತ್ತೆ ಹಚ್ಚಿದ್ದು ಹೇಗೆ? :ಈ ಅಪರೂಪದ ಜೀವಿಯ ಬಗ್ಗೆ ತಿಳಿದುಕೊಳ್ಳಲು ವಿಜ್ಞಾನಿಗಳು ಸಾಕಷ್ಟು ಹೆಣಗಾಡಿದರು. ಬರೋಬ್ಬರಿ 26 ವರ್ಷ, ಈ ಜೀವಿಯನ್ನು ಹೇಗೆ ಪತ್ತೆ ಮಾಡಬೇಕೆನ್ನುವ ಚಿಂತೆ ವಿಜ್ಞಾನಿಗಳನ್ನು ಕಾಡುತ್ತಿತ್ತು. ಕೊನೆಗೆ ಎಕ್ಸ – ರೇ ಸಹಾಯದಿಂದ ಈ ಜೀವಿಯನ್ನು ಗುರುತಿಸುವಲ್ಲಿ ಸಫಲರಾದರು. ಅರೆನಾರೆಪೆಟನ್ ಸುಪಿನಾಟಸ್ ಜೀವಿಯ ಎಕ್ಸ ರೇ ತೆಗೆಯುವ ಮಷಿನ್ ಕೂಡ ಸಾಮಾನ್ಯದ್ದಾಗಿರಲಿಲ್ಲ. ವಿದೇಶಗಳಿಂದ ತಂದ ಸರಕುಗಳನ್ನು ಸ್ಕ್ಯಾನ್ ಮಾಡಲು ಬಳಸುವ ಮಷಿನ್ ಸಹಾಯದಿಂದ ಈ ಜೀವಿಯ ಸ್ಕ್ಯಾನಿಂಗ್ ನಡೆಸಲಾಗಿತ್ತು. ಹಾಗಾಗಿಯೇ ಅನೇಕ ವರ್ಷಗಳ ನಂತರ ಈ ಜೀವಿ ಯಾವ ಜಾತಿಗೆ ಸೇರಿದೆ ಎನ್ನುವುದು ತಿಳಿದುಬಂತು. ಮದುಮಗಳು ಅಕ್ಕಿ ಸೇರು ಒದ್ದು, ಮನೆಯೊಳಗೆ ಬರೋದ್ಯಾಕೆ? ಸಂಬಂಧ, ಸಮೃದ್ಧಿ ಪ್ರತೀಕವೆಂದ ಸೀರಿಯಲ್ ಈ ಸಂಶೋಧನೆಯಿಂದ ಈ ಜೀವಿ ಮೊಸಳೆ ಜಾತಿಗೆ ಸೇರಿದೆ ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಇದರ ಹೊರತಾಗಿ ಈ ಜೀವಿ ಯಾವುದೋ ವಿಶೇಷ ಜಾತಿಗೆ ಸೇರಿದ ಪ್ರಾಣಿಯೂ ಆಗಿರಬಹುದು. ಇಂತಹ ಜೀವಿ ಭೂಮಿಯ ಮೇಲೆ ಇತ್ತು ಎನ್ನುವ ಕುರುಹು ಕೂಡ ಈ ಮೊದಲು ಯಾರಿಗೂ ತಿಳಿಯದೇ ಇರಬಹುದು. ಈ ಪ್ರಾಣಿಯ ಪಳೆಯುಳಿಕೆಯ ಕುರಿತು ಅಧ್ಯಯನ ನಡೆಸಿದ ವಿಜ್ಞಾನಿಗಳು ಅರೆನಾರೆಪೆಟನ್ ಸುಪಿನಾಟಸ್ ಹೆಚ್ಚಿನ ಸಮಯ ನೀರಿನಲ್ಲೇ ಕಳೆಯುತ್ತಿತ್ತು. ಆಹಾರಕ್ಕಾಗಿ ನೀರಿನಲ್ಲಿರುವ ಮೀನುಗಳನ್ನೇ ಬೇಟೆಯಾಡಿ ತಿನ್ನುತ್ತಿತ್ತು ಎಂದಿದ್ದಾರೆ. ಭೂಮಿ ತನ್ನಲ್ಲಿ ಅನೇಕ ಅಚ್ಚರಿ ಹಾಗೂ ಅದ್ಭುತಗಳನ್ನು ಹೊಂದಿದೆ. ಎಲ್ಲೋ ಅಪರೂಪಕ್ಕೊಮ್ಮೆ ಅಂತಹ ಅದ್ಭುತಗಳು ಮನುಷ್ಯರ ಕಣ್ಣಿಗೆ ಕಾಣಿಸಿತ್ತವೆ ಎನ್ನುವುದು ಇಂತಹ ಸಂಗತಿಗಳಿಂದ ಸ್ಪಷ್ಟವಾಗುತ್ತದೆ.