57ನೇ ವಯಸ್ಸಲ್ಲೂ ಶಾರುಖ್​ ಹ್ಯಾಂಡ್​ಸಮ್​ ಆಗಿರೋದ್ಯಾಕೆ? ಆನಂದ್​ ಮಹೀಂದ್ರಾ ಉತ್ತರ ಕೇಳಿ... 57ನೇ ವಯಸ್ಸಲ್ಲೂ ಶಾರುಖ್​ ಹ್ಯಾಂಡ್​ಸಮ್​ ಆಗಿರೋದ್ಯಾಕೆ? ಜವಾನ್​ ಚಿತ್ರದ ಜಿಂದಾ ಬಂದಾ ನ್ಯತ್ಯವನ್ನು ನೋಡಿ ಫಿದಾ ಆಗಿರುವ ಉದ್ಯಮಿ ಆನಂದ್​ ಮಹೀಂದ್ರಾ ಹೇಳಿದ್ದೇನು? ಎವರ್​ಗ್ರೀನ್​ ನಟ, ಬಾಲಿವುಡ್​ ಬಾದ್​ಶಾಹ್​ ಎಂದೆಲ್ಲಾ ಕರೆಸಿಕೊಳ್ತೀರೋ ನಟ ಶಾರುಖ್​ ಖಾನ್​ ( ) ಅವರಿಗೆ ಈಗ 57 ವರ್ಷ ವಯಸ್ಸು. ವಯಸ್ಸು 50 ದಾಟುತ್ತಿದ್ದಂತೆಯೇ ಕೆಲಸದಲ್ಲಿ ಆಸಕ್ತಿ ಇಲ್ಲದೇ, ಅಥವಾ ಕಡಿಮೆ ಪ್ರಯಾಸದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಲು ಬಯಸುವವರು ಹಲವರು. ಇನ್ನು ಕೆಲವರು 40 ದಾಟುತ್ತಿದ್ದಂತೆಯೇ ವಯೋವೃದ್ಧರ ರೀತಿಯಲ್ಲಿ ವರ್ತಿಸುವುದೂ ಇದೆ. ಆದರೆ ವಯಸ್ಸು 60-70 ದಾಟಿದರೂ ಕೆಲ ಸಿನಿ ತಾರೆಯರು ಇಂದಿಗೂ ಫಿಟ್​ ಆ್ಯಂಡ್​ ಫೈನ್​ ಆಗಿ ಶೈನ್​ ಆಗುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ನಟ ಶಾರುಖ್​ ಖಾನ್​. ಅವರ ಎನರ್ಜಿಗೆ ಸಾಕ್ಷಿಯಾದದ್ದು ಪಠಾಣ್​ ಚಿತ್ರ ಹಾಗೂ ಇದೀಗ ಸದ್ದು ಮಾಡುತ್ತಿರುವ ಜವಾನ್​. ಜವಾನ್​ ಚಿತ್ರದ ಜಿಂದಾ ಬಂದಾ ಹಾಡು ಬಿಡುಗಡೆಯಾಗಿದ್ದು, ಸಕತ್​ ಸದ್ದು ಮಾಡುತ್ತಿದೆ. ಹೌದು. 57ರ ಹರೆಯದಲ್ಲಿಯೂ ಈ ಹಾಡಿನಲ್ಲಿ ಶಾರುಖ್​ 27ರ ಯುವಕರಂತೆ ಕುಣಿದು ಕುಪ್ಪಳಿಸಿದ್ದಾರೆ. ಅವರ ಎನರ್ಜಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಹಾಡು ಬಿಡುಗಡೆಯಾಗುತ್ತಲೇ ಕೇವಲ 24 ಗಂಟೆಯೊಳಗೆ 46 ಮಿಲಿಯನ್​ ವ್ಯೂಸ್​ ಅಂದರೆ 4.6 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಇದೊಂದು ದೊಡ್ಡ ದಾಖಲೆಯೇ ಎನ್ನಲಾಗುತ್ತಿದೆ. ಶಾರುಖ್​ ಅವರ ಎನರ್ಜಿಯನ್ನು ಕಂಡು ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ( ) ಅವರು ಫಿದಾ ಆಗಿದ್ದಾರೆ. ಆಗಿಂದಾಗ್ಗೆ ಹಲವಾರು ಪೋಸ್ಟ್​ಗಳನ್ನು ಆನಂದ್​ ಮಹೀಂದ್ರಾ ಅವರು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಉತ್ಸಾಹಭರಿತ, ಸ್ಫೂರ್ತಿದಾಯಕ ಕಥೆಗಳನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆ್ಯಕ್ಟೀವ್​ ಇರುವವರಲ್ಲಿ ಒಬ್ಬರು ಆನಂದ್​ ಮಹೀಂದ್ರಾ. ಈಗ ಅವರು ನಟ ಶಾರುಖ್​ ಅವರ ಜಿಂದಾ ಬಂದಾ ಹಾಡನ್ನು ವೀಕ್ಷಿಸಿದ್ದು, ಶಾರುಖ್​ ಅವರ ಡ್ಯಾನ್ಸ್​, ಅವರ ಎನರ್ಜಿಯ ಬಗ್ಗೆ ಹಾಡಿ ಹೊಗಳಿದ್ದಾರೆ. ಈ ವೇಳೆ ಅವರು ಶಾರುಖ್ ಖಾನ್ ಅವರ ಫಿಟ್​ನೆಸ್​ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. 'ಜವಾನ್​'ನ ಜಿಂದಾಬಂದಾ ಹಾಡಿಗೆ ಹುಚ್ಚೆದ್ದು ಕುಣೀತಿದ್ದಾರೆ ಫ್ಯಾನ್ಸ್​- ಒಂದೇ ದಿನ 46 ಮಿಲಿಯನ್​ ವ್ಯೂಸ್​! ಶಾರುಖ್ ಖಾನ್ ಅವರು ಫಿಟ್​ನೆಸ್​ಗೆ ಮನಸೋಲದ ಸಿನಿಪ್ರಿಯರು ಇಲ್ಲ ಎನ್ನಬಹುದೇನೋ. ಜಿಮ್​ನಲ್ಲಿ ನಿತ್ಯ ವರ್ಕೌಟ್, ತಿನ್ನುವ ಆಹಾರದ ಬಗ್ಗೆ ಕಾಳಜಿ, ಡಯೆಟ್​ () ಫುಡ್​ ಇವೆಲ್ಲವೂ ಅವರನ್ನು ಫಿಟ್​ ಆಗಿರಿಸಿರುವುದು ಹೌದಾದರೂ ಈ ವಯಸ್ಸಿನಲ್ಲಿ ಅವರು ಆ್ಯಕ್ಷನ್ ದೃಶ್ಯಗಳನ್ನು ಮಾಡುವ ಪರಿ, ಎನರ್ಜೆನಿಟಿಕ್​ ಡ್ಯಾನ್ಸ್ ಮಾಡುತ್ತಿದ್ದರೆ ಅದನ್ನು ಕಣ್​ ಕಣ್​ ಬಿಟ್ಟು ನೋಡುವ ದೊಡ್ಡ ವರ್ಗವೇ ಇವೆ. ಈ ಎನರ್ಜಿ ಜಿಂದಾ ಬಂದಾ ಹಾಡಿನಲ್ಲಿಯೂ ಕಾಣಿಸಿದ್ದು, ಅದರಲ್ಲಿ ಅವರು, ‘ಈ ಹೀರೋಗೆ ನಿಜವಾಗಿಯೂ 57 ವರ್ಷ ವಯಸ್ಸಾಗಿದೆಯೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಈ ಫಿಟ್​ನೆಸ್​ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿರುವ ಆನಂದ್​ ಮಹೀಂದ್ರಾ ಅವರು, ಬಹುಶಃ ಶಾರುಖ್​ ಖಾನ್​ ಅವರ ದೇಹದಲ್ಲಿ ವಯಸ್ಸಾಗುವ ಪ್ರಕ್ರಿಯೆಯು ಗುರುತ್ವಾಕರ್ಷಣೆಯ ಬಲಗಳನ್ನು ವಿರೋಧಿಸುತ್ತದೆ. ಅರ್ಥಾತ್​ ಅವರ ವಯಸ್ಸು ಹಿಮ್ಮುಖದಲ್ಲಿ ಚಲಿಸುತ್ತಿದೆ. ಅದಕ್ಕಾಗಿಯೇ ಇಷ್ಟೊಂದು ಎನರ್ಜಿ ಅವರಿಗೆ ಬಂದಿದೆ ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ () ನೀಡಿರುವ ಶಾರುಖ್​ ಖಾನ್​, ಜೀವನವು ತುಂಬಾ ಚಿಕ್ಕದಾಗಿದೆ ಮತ್ತು ವೇಗವಾಗಿ ಓಡಿಹೋಗುತ್ತೆ ಸರ್​. ಅದಕ್ಕಾಗಿ ಸಾಧ್ಯವಾದಷ್ಟು ಮಟ್ಟಿಗೆ ಇರುವ ವಯಸ್ಸಿನಲ್ಲಿಯೇ ಏನೆಲ್ಲ ಬೇಕೋ ಅವುಗಳನ್ನು ಪ್ರಯತ್ನಿಸುತ್ತೇನೆ. ಮನರಂಜನೆ ನೀಡುವುದು ನನ್ನ ಉದ್ದೇಶ. ನಗು.. ಅಳು... ಎಲ್ಲವುಗಳ ನಡುವೆ ಆಶಾದಾಯಕ ಕೆಲಸ ಮಾಡುತ್ತಾ, ಇರುವ ದಿನಗಳನ್ನು ಸಂತೋಷಕ್ಕಾಗಿ ಮೀಸಲಿರಿಸಬೇಕಿದೆ ಎಂದಿದ್ದಾರೆ. ಅಂದಹಾಗೆ, ಜವಾನ್​ ಸೆಪ್ಟೆಂಬರ್​ 10ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್​ ಸ್ಟಾರ್​ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣದ ಬಹುತೇಕ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಮುಖ್ಯ ವಿಲನ್ ರೀತಿನೇ ಕಾಣಿಸುತ್ತಿದ್ದಾರೆ. ನಟಿ ದೀಪಿಕಾ ಪಡುಕೋಣೆ ( ) ಇಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ನಯನತಾರಾ ಇಲ್ಲಿ ಹೊಸ ಖದರ್ ಅಲ್ಲಿಯೇ ಬರ್ತಿದ್ದಾರೆ. ಕನ್ನಡದ ಪ್ರಿಯಾಮಣಿ ಕೂಡ ಅಭಿನಯಿಸಿದ್ದಾರೆ.