: ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಬಿಡಿ, ಅನುಕರಿಸಬೇಡಿ! ಸೌಂಡ್ ಇಲ್ದೆ ಜುಂಯ್ ಅಂತಾ ಬರುವ ಎಲೆಕ್ಟ್ರಿಕ್ ಸ್ಕೂಟಿ ಚಲಾಯಿಸೋರು ಆಗಾಗ ಹಾರ್ನ್ ಹಾಕ್ಲೇಬೇಕು. ಇಲ್ಲ ಅಂದ್ರೆ ಅಪಘಾತಗಳಾಗೋ ಸಾಧ್ಯತೆಯಿರುತ್ತೆ. ಆದ್ರೆ ಹಾರ್ನ್ ಬದಲು ಸ್ಪೀಕರ್ ಹಾಕಿದ್ರೆ? ಸಾಮಾಜಿಕ ಜಾಲತಾಣದಲ್ಲಿ ಸ್ಕೂಟಿ ಸ್ಪೀಕರ್ ವೈರಲ್ ಆಗಿದೆ. ಹಾರ್ನ್ ಮಾಡದೆ ವಾಹನ ಚಲಾವಣೆ ಮಾಡಿ ಎನ್ನುವ ಬೋರ್ಡ್ ಗಳನ್ನು ನೀವು ಅನೇಕ ಕಡೆ ನೋಡಿರ್ತೀರಿ. ಆದ್ರೆ ಕೆಲವು ಸಂದರ್ಭದಲ್ಲಿ ಹಾರ್ನ್ ಮಾಡೋದು ಅನಿವಾರ್ಯವಾಗುತ್ತದೆ. ಲಾರಿ ಹಾರ್ನ್, ಎಲ್ಲ ವಾಹನದ ಹಾರ್ನ್ ಗಿಂತ ದೊಡ್ಡದು, ಹಾಗೆ ಸ್ವಲ್ಪ ಭಿನ್ನವಾಗಿರುತ್ತದೆ. ಕೆಲ ವಾಹನ ಸವಾರರು ತಮ್ಮ ವಾಹನದ ಹಾರ್ನ್ ನಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳೋದನ್ನು ನೀವು ನೋಡ್ಬಹುದು. ಈಗಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟಿ ಹೆಚ್ಚಾಗಿದೆ. ಸದ್ದಿಲ್ಲದೆ ಬರುವ ಎಲೆಕ್ಟ್ರಿಕ್ ಸ್ಕೂಟಿ, ಕಾರ್ ಹತ್ತಿರ ಬಂದಾಗಲೇ ನಮಗೆ ತಿಳಿಯೋದು. ಎಲೆಕ್ಟ್ರಿಕ್ ಸ್ಕೂಟಿ ಚಾಲಕರು ಹಾರ್ನ್ ಬಾರಿಸೋದು ಅನಿವಾರ್ಯ. ಈಗ ಹಾರ್ನ್ ಬದಲು ಸ್ಪೀಕರ್ ಜನರನ್ನು ಆಕರ್ಷಿಸುತ್ತಿದೆ. ಕೆಲ ಎಲೆಕ್ಟ್ರಿಕ್ ಸ್ಕೂಟಿ ಚಾಲಕರು ಹಾರ್ನ್ ಬದಲು ತಮ್ಮ ಸ್ಕೂಟಿಗೆ ಸ್ಪೀಕರ್ ಹಾಕಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ಕೂಟರ್ ಸ್ಪೀಕರ್ ಒಂದು ವೈರಲ್ ಆಗಿದೆ. ಜನರು ಆತನ ಸ್ಪೀಕರ್ ಕೇಳಿ ಬಿದ್ದು ಬಿದ್ದು ನಗ್ತಿದ್ದರೆ, ಸಂಚಾರಿ ಪೊಲೀಸರು ಇದನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿದ್ದಾರೆ. ಸ್ಕೂಟಿಗೆ ()ಸ್ಪೀಕರ್ ಹಾಕಿಕೊಂಡ ವಿಡಿಯೋವನ್ನು @ ಹೆಸರಿನ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ. ನೀವು ಎಲೆಕ್ಟ್ರಿಕ್ () ವಾಹನವನ್ನು ಖರೀದಿಸಿದರೆ, ನಿಮ್ಮ ಹಾರ್ನ್ ಹೀಗಿರುತ್ತದೆ! ಎಂದು ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ () ಆಗಿದೆ. ಈವರೆಗೆ ಈ ವಿಡಿಯೋವನ್ನು 12 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 9 ಸಾವಿರಕ್ಕೂ ಹೆಚ್ಚು ಲೈಕ್‌ ಬಂದಿದ್ದು, ಅನೇಕರು ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಯಪ್ಪಾ..ಲುಂಗಿಯನ್ನು ಹೀಗೆಲ್ಲಾ ಬಳಸ್ಬೋದಾ, ಯುವಕನ ವಿಡಿಯೋ ವೈರಲ್ ವೈರಲ್ ವಿಡಿಯೋ ಎಲ್ಲಿಯದು? :ಟ್ವಿಟರ್ ನಲ್ಲಿ ವೈರಲ್ ಆಗಿರುವ ವಿಡಿಯೋ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ್ದು. ಸ್ಕೂಟಿ ಸವಾರ ಭಾರತಮಾತಾ ಚೌಕ್‌ನಿಂದ ಘಾಡಿ ಚೌಕ್ ಕಡೆಗೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಹೆಲ್ಮೆಟ್ ಧರಿಸಿ ರೈನ್‌ಕೋಟ್ ಹಾಕಿರುವ ವ್ಯಕ್ತಿಯನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ಓಲಾ ಸ್ಕೂಟಿ ಓಡಿಸುತ್ತಿರುವ ವ್ಯಕ್ತಿ ಸ್ಪೀಕರ್ ಬಾರಿಸ್ತಾನೆ. ಅದ್ರಲ್ಲಿ `ಜಲ್ದಿ ಸೆ ವಾಹನ್ ಸೇ ಹಾಠೋ ’ ಎಂಬುದು ಕೇಳಿಸುತ್ತದೆ. ಇದನ್ನು ಕೇಳಿದ ಕೆಲ ಜನರು ಆಸಕ್ತಿಗೊಂಡು ಮತ್ತೆ ಮತ್ತೆ ಈ ಸ್ಪೀಕರ್ ಹಾಕುವಂತೆ ಕೇಳ್ತಾರೆ. ದಾರಿಯಲ್ಲಿ ಹೋಗ್ತಿದ್ದ ಕೆಲವರು ಇದ್ರಿಂದ ಗಾಬರಿಯಾಗೋದನ್ನು ನೀವು ನೋಡ್ಬಹುದು. ಹಾರ್ನ್ () ಎಷ್ಟು ಮಜವಾಗಿದೆ ಎಂದು ಬಳಕೆದಾರರೊಬ್ಬರು ಬರೆದ್ರೆ ಮತ್ತೊಬ್ಬರು ತಮ್ಮ ವಾಹನಕ್ಕೂ () ಇದೇ ರೀತಿಯ ಸ್ಪೀಕರ್ () ಹಾಕಿಕೊಳ್ಳೋದಾಗಿ ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಇನ್ನೊಂದು ಸ್ಕೂಟಿಯ ಸ್ಪೀಕರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಸೌಲಭ್ಯ ಡ್ಯಾಶ್ ಬೋರ್ಡ್ () ನಲ್ಲಿ ಎಲ್ಲಿದೆ ಅಂತಾ ಒಬ್ಬರು ಕೇಳಿದ್ರೆ ನನ್ನ ಪ್ಲಾನ್ ಈತ ಕದ್ದಿದ್ದಾನೆ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಫೋಟೋದಲ್ಲಿ ನಿಮಗೇನ್ ಕಾಣುತ್ತೆ ಅನ್ನೋದು ನಿಮ್ ಲವ್‌ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ ಕೆಲವರಿಗೆ ಈ ಸ್ಪೀಕರ್ ಆಯ್ಕೆ ಇಷ್ಟವಾದ್ರೆ ಮತ್ತೆ ಕೆಲವರು ಇದನ್ನು ಟೀಕಿಸಿದ್ದಾರೆ. ಸಂಚಾರಿ ನಿಯಮಗಳನ್ನು ಇದು ಉಲ್ಲಂಘಿಸುವ ಸಾಧ್ಯತೆಯಿದೆ. ಯಾಕೆಂದ್ರೆ ಇಂಥ ಹಾರ್ನ್ ಗಳು ಜನರನ್ನು ಡೈವರ್ಟ್ ಮಾಡುತ್ತೆ. ಇದ್ರಿಂದ ಅಪಘಾತಗಳಾಗುವ ಸಾಧ್ಯತೆಯಿದೆ. ಈ ಬಗ್ಗೆ ಅಲ್ಲಿನ ಸಂಚಾರಿ ಪೊಲೀಸರು ಗಂಭೀರವಾಗಿದ್ದಾರೆ. ವಾಹನ ಸವಾರ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದರೆ ಕ್ರಮಕೈಗೊಳ್ಳೋದಾಗಿ ಹೇಳಿದ್ದಾರೆ. ನೀವೂ ಇಲೆಕ್ಟ್ರಿಕ್ ಸ್ಕೂಟರ್ ಹೊಂದಿದ್ದು ಫನ್ನಿ ಸ್ಪೀಕರ್ ಹಾಕುವ ಮುನ್ನ ಸಂಚಾರಿ ನಿಯಮಗಳ ಬಗ್ಗೆ ತಿಳಿದಿರಿ. ಜೊತೆಗೆ ಸಾರ್ವಜನಿಕರಿಗೆ ಇದ್ರಿಂದ ತೊಂದರೆಯಾಗದಂತೆ ಗಮನಹರಿಸಿ. ಈ ವಿಡಿಯೋ ನಗೋದಕ್ಕೆ ಮಾತ್ರ, ಅನುಕರಣೆಗೆ ಅಲ್ಲ ಎಂಬುದನ್ನು ನೆನಪಿಡಿ.