68 ವಯಸ್ಸಾದ್ರೂ ಬತ್ತದ ರೇಖಾ ಬ್ಯೂಟಿ: ಗಂಡ- ಅತ್ತೆ ಕಾಟ ಇಲ್ದಿದ್ರೆ ಹೀಗೆ ಕಾಣೋದು ಅಂದ್ರು ಫ್ಯಾನ್ಸ್​! ವಯಸ್ಸು 68 ಆದರೂ ಸೌಂದರ್ಯ ಕಾಪಾಡಿಕೊಂಡಿದ್ದಾರೆ ನಟಿ ರೇಖಾ. ಇವರ ಸೌಂದರ್ಯದ ನಡುವೆ ಅತ್ತೆ-ಗಂಡನನ್ನು ಎಳೆದು ತಂದಿದ್ದಾರೆ ಟ್ರೋಲಿಗರು! 80-90ರ ದಶಕದಲ್ಲಿ ಬಾಲಿವುಡ್​ ಆಳಿದ ನಟಿ ರೇಖಾ. ಹಲವಾರು ಹಿಟ್​ ಚಿತ್ರಗಳನ್ನು, ಬ್ಲಾಕ್​ಬಸ್ಟರ್​ () ಚಿತ್ರ ಕೊಟ್ಟವರು. ಎಷ್ಟೋ ಫ್ಯಾನ್ಸ್​ ನಿದ್ದೆ ಕದ್ದವರು. ವಯಸ್ಸಾದರೂ ಚಿರ ಯೌವನ ಇವರದ್ದು, ನಟಿ ರೇಖಾಗೆ ಈಗ ವಯಸ್ಸು 68. ಆದರೂ ಇಂದಿಗೂ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರ ಮೊಗದಲ್ಲಿ ಅದೇ ವರ್ಚಸ್ಸು ಕಾಣಿಸುತ್ತದೆ. ಇವರ ಮತ್ತು ಅಮಿತಾಭ್​ ಬಚ್ಚನ್​ ಅವರ ಲವ್​ ಸ್ಟೋರಿ ಎಲ್ಲರಿಗೂ ತಿಳಿದದ್ದೇ. ಆದರೆ ಕೊನೆಗೂ ಅಮಿತಾಭ್​ ರೇಖಾ ಅವರಿಗೆ ಸಿಗಲೇ ಇಲ್ಲ. ಇದೇ ನೋವಿನಲ್ಲಿದ್ದ ನಟಿ, ದೆಹಲಿಯ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಗರ್​ವಾಲ್​ ಅವರನ್ನು 1990ರಲ್ಲಿ ವಿವಾಹವಾದರು. ಆಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ರೇಖಾಳ () ಜೀವನದಲ್ಲಿ ಇದ್ದಕ್ಕಿದ್ದಂತೆ ಮುಖೇಶ್ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಕತ್​ ಸದ್ದು ಮಾಡಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ ರೇಖಾ, 'ನಾನು ನನ್ನ ವೃತ್ತಿಜೀವನದಲ್ಲಿ ಆ ಹಂತದಲ್ಲಿಯೇ ಇದ್ದೆ. ನಾನು ಮದುವೆಯಾಗಬೇಕು ಎಂದು ಭಾವಿಸಿದ್ದೆ. ನಾವು ಎಲ್ಲಿ ಭೇಟಿಯಾದೆವು, ಯಾವಾಗ ಭೇಟಿಯಾದೆವು, ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ. ನಾವು ಭೇಟಿಯಾಗಿದ್ದೆವು. ನಾವು ಮದುವೆಯಾಗಿದ್ದೆವು ಎಂಬುದು ಮುಖ್ಯವಾಗಿತ್ತು. ಈ ಮದುವೆಯಿಂದ ನಾನು ಏನು ಕಲಿತೆ ಅಥವಾ ಕಳೆದುಕೊಂಡಿದ್ದೆ ಎಂದು ತಿಳಿಯುವುದು ಮುಖ್ಯ ಎಂದಿದ್ದರು. ಆಘಾತಕಾರಿ ವಿಷಯವೆಂದರೆ ಮುಖೇಶ್ ನೇಣು ಬಿಗಿದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದರು. ವ್ಯಾಪಾರದಲ್ಲಿ ನಷ್ಟ ಮತ್ತು ಅವರ ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದ ಆ ಸಮಯದಲ್ಲಿ ಅವರು ಒತ್ತಡದಲ್ಲಿದ್ದರು ಎಂದು ಹೇಳಲಾಗುತ್ತದೆ. ನಂತರ ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದವು. ಅಲ್ಲಿಂದ ಇಲ್ಲಿಯವರೆಗೂ ರೇಖಾ ಒಂಟಿಯಾಗಿಯೇ ಬದುಕುತ್ತಿದ್ದಾರೆ. ಆದರೆ ಅವರು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. 68ರ ವಯಸ್ಸಿನಲ್ಲಿಯೂ ಅವರ ಸೌಂದರ್ಯದ ಕುರಿತು ಚರ್ಚೆ ಆಗುತ್ತಲೇ ಇರುತ್ತದೆ. ಈಗ ನಟಿಯ ವಿಡಿಯೋ ಒಂದು ಸಕತ್​ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿ ನೋಡಿದರೆ ರೇಖಾ ಅವರಿಗೆ 68 ವರ್ಷ ವಯಸ್ಸಾಗಿದೆ ಎಂದು ಹೇಳಲು ಆಗುತ್ತಿಲ್ಲ. ಅಮಿತಾಭ್​ ರೇಖಾ ಪ್ರೇಮಕ್ಕೆ ಸಾಕ್ಷಿಯಾದ ಎರಡು ಉಂಗುರ: ರಹಸ್ಯ ಬಿಚ್ಚಿಟ್ಟ ನಟಿ ಈ ವಿಡಿಯೋಗೆ ಸಾಕಷ್ಟು ಕಮೆಂಟ್​ಗಳು () ಬರುತ್ತಿವೆ. ಹೆಚ್ಚಿನವರು ಲವ್​ ಇಮೋಜಿಗಳಿಂದ ರೇಖಾ ಅವರ ಸೌಂದರ್ಯವನ್ನು ಹೊಗಳಿದ್ದರೆ, ಇನ್ನು ಕೆಲವರು ಮೇಕಪ್​ ಜಾಸ್ತಿ ಆಯಿತು ಎನ್ನುತ್ತಿದ್ದಾರೆ. ಇವರ ಸೌಂದರ್ಯಕ್ಕೂ ಮದುವೆಯ ಲೈಫ್​ಗೂ ಕನೆಕ್ಟ್​ ಮಾಡಿರುವ ಫ್ಯಾನ್ಸ್​, ಮದುವೆ- ಗಂಡ- ಅತ್ತೆ ಮಕ್ಕಳ ಕಾಟವಿಲ್ಲದಿದ್ದರೆ, ಮಕ್ಕಳನ್ನು ನೋಡಿಕೊಳ್ಳುವ ಟೆನ್ಷನ್​ ಇಲ್ಲದಿದ್ದರೆ ಯಾರು ಬೇಕಾದರೂ ಯುವತಿಯ ಹಾಗೆ ಕಾಣಿಸ್ತಾರೆ ಎನ್ನೋದಾ? ಒಟ್ಟಿನಲ್ಲಿ ರೇಖಾ ಅವರ ಸೌಂದರ್ಯ ಸದಾ ಹಾಟ್​ ವಿಷಯವಾಗಿಯೇ ಇರುತ್ತದೆ. ಅಂದಹಾಗೆ ರೇಖಾ ಅವರ ಜೀವನ ಸಾಕಷ್ಟು ನಿಗೂಢತೆಯಿಂದ ಕೂಡಿದೆ. ತಮಿಳಿನ ಸೂಪರ್‌ಸ್ಟಾರ್ ಜೆಮಿನಿ ಗಣೇಶನ್ ಹಾಗೂ ನಟಿ ಕೆ ಪುಷ್ಪವಲ್ಲಿ ಅವರ ಮಗಳಾಗಿ ಜನಿಸಿದ್ದ ರೇಖಾ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಸ್ಟಾರ್​ ಕಿಡ್​ ಎಂಬ ಹೆಸರಿನಿಂದ ಬಂದವರಲ್ಲ. 70ರ ದಶಕದ ವರೆಗೂ ತಮ್ಮ ಕುಟುಂಬದ ಹಿನ್ನೆಲೆಯನ್ನೇ ರೇಖಾ ಹೇಳಿಕೊಂಡಿರಲಿಲ್ಲ. ನಂತರ ಇವರ ಜೀವನ ನೋವಿನ ಸರಮಾಲೆಯಾಗಿಯೇ ಉಳಿತು. ಸೂಪರ್‌ಸ್ಟಾರ್ ಅಮಿತಾಭ್​ ಬಚ್ಚನ್ ( ) ಮತ್ತು ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ. ಇದು ಜಗಜ್ಜಾಹೀರವಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೇ ಇಲ್ಲ, ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಬರೆದಿರುವ ತಮ್ಮ ಆತ್ಮಚರಿತ್ರೆ ‘ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲಿ ( ) ಇವರ ಜೀವನದ ಹಲವಾರು ಅಂಶಗಳು ಇವೆ. ನಾಯಕ ಬಿಗಿದಪ್ಪಿ ಐದು ನಿಮಿಷ ಕಿಸ್​ ಮಾಡಿದ ಕರಾಳ ಅನುಭವ ಬಿಚ್ಚಿಟ್ಟ ನಟಿ ರೇಖಾ (@)