ಆಹಾರ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದ ಸುಧಾಮೂರ್ತಿಗೆ ಅಡುಗೆ ಮಾಡೋಕೆ ಬರಲ್ವಂತೆ! ಇತ್ತೀಚಿಗೆ ಆಹಾರ ಸಂಸ್ಕೃತಿಯ ಬಗ್ಗೆ ಮಾತನಾಡಿ ಟ್ರೋಲ್ ಆಗುತ್ತಿರುವ ಇನ್‌ಪೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರಿಗೆ ಅಡುಗೆ ಮಾಡೋಕೆ ಬರಲ್ವಂತೆ. ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಸಮಾಜ ಸೇವಕಿ ಇನ್‌ಪೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರು ತಾವು ಸ್ವಭಾತಹಃ ಪುಡ್ಡೀ ಎಂದು ಈಗಾಗಲೇ ಹಲವರು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ನನಗೆ ಅಡುಗೆ ಮಾಡಲು ಬರುವುದಿಲ್ಲವೆಂದು ತಿಳಿಸಿದ್ದಾರೆ. 'ನಾನು ಎಲ್ಲಾ ರೀತಿಯ ಸಸ್ಯಾಹಾರಿ ತಿನಿಸುಗಳನ್ನು ಟೇಸ್ಟ್ ಮಾಡುತ್ತೇನೆ. ಆದರೆ ನನಗೆ ಅಡುಗೆ ಮಾಡಲು ಬರುವುದೇ ಇಲ್ಲ. ಚಹಾವನ್ನು ಮಾತ್ರ ಚೆನ್ನಾಗಿ ಮಾಡಬಲ್ಲೆ' ಎಂದು ಸುಧಾಮೂರ್ತಿ ತಿಳಿಸಿದ್ದಾರೆ. ಖ್ಯಾತ ಆಹಾರ ಬ್ಲಾಗರ್ ಕುನಾಲ್ ವಿಜಯಂಕರ್ ನಡೆಸಿಕೊಡುವ ಶೋ ' ಖಾನೆ ಮೇ ಕೌನ್ ಹೈ?' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಧಾಮೂರ್ತಿಯವರು, 'ಎಲ್ಲರೂ ನಾರಾಯಣಮೂರ್ತಿಯವರು ಮದುವೆಯಾದ () ಮೊದಲು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂದು ಹೇಳುತ್ತಾರೆ. ಅದಕ್ಕೆ ಅವರು ಥ್ಯಾಂಕ್ಸ್ ಟು ವೈಫ್ ಕುಕ್ಕಿಂಗ್ ಎಂದು ಹೇಳುತ್ತಾರೆ. ನಾನು ಹೀಗೆ ಅಡುಗೆ () ಮಾಡುತ್ತೇನೆ. ಅವರಿಗೆ ತಿನ್ನಲು ಸಹ ಸಾಧ್ಯವಾಗುವುದಿಲ್ಲ' ಎಂದು ತಿಳಿಸಿದ್ದಾರೆ. : ಸಹಿಷ್ಣುತೆ, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮತಾನಾಡೋರೆಲ್ಲಿ ಎಂದ ಮಾಳವಿಕಾ ಇನ್‌ಪೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರು ಇತ್ತೀಚಿಗಷ್ಟೇ ಆಹಾರಸಂಸ್ಕೃತಿಯ ಬಗ್ಗೆ ಮಾತನಾಡಿರೋ ವಿಚಾರ ಸಾಕಷ್ಟು ವೈರಲ್ ಆಗಿದೆ. ಆಹಾರದ ಬಗ್ಗೆ ಆಹಾರ ಸಂಸ್ಕೃತಿ ಬಗ್ಗೆ ಅವರಾಡಿದ ಮಾತುಗಳು ವಿವಾದ ಸೃಷ್ಟಿಸಿದೆ. ಸುಧಾಮೂರ್ತಿ ಇತ್ತೀಚೆಗೆ ಖ್ಯಾತ ಆಹಾರ ಬ್ಲಾಗರ್ ಕುನಾಲ್ ವಿಜಯಂಕರ್ ನಡೆಸಿಕೊಡುವ ಶೋ ' ಖಾನೆ ಮೇ ಕೌನ್ ಹೈ?' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಹಾರದ ಬಗ್ಗೆ ತಮ್ಮ ನಿಲುವು ಹಾಗೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಿದೇಶಗಳಲ್ಲಿ ಬಹುತೇಕ ಮಾಂಸಹಾರವೇ ಹೆಚ್ಚು ಎಲ್ಲೂ ಸಸ್ಯಹಾರಕ್ಕೆ () ಅವಕಾಶ ಇಲ್ಲ, ಸಸ್ಯಾಹಾರದ ಆಯ್ಕೆಗಳು ವಿದೇಶದಲ್ಲಿ ತೀರಾ ಕಡಿಮೆ ಹೀಗಾಗಿ ಸುಧಾಮೂರ್ತಿಯವರಿಗೆ ವಿದೇಶಕ್ಕೆ ಭೇಟಿ ನೀಡಿದಾಗ ಆಹಾರದ ಶೈಲಿ ಯಾವ ರೀತಿಯದ್ದು ಎಂದು ಫುಡ್ ಬ್ಲಾಗರ್ ಕೇಳಿದ್ದಾರೆ., ಈ ವೇಳೆ ಪ್ರತಿಕ್ರಿಯಿಸಿದ ಸುಧಾಮೂರ್ತಿ ತಾನು ಶುದ್ಧ ಸಸ್ಯಾಹಾರಿಯಾಗಿರುವುದರಿಂದ ವಿದೇಶಕ್ಕೆ ತೆರಳುವಾಗ ನನ್ನದೇ ಆಹಾರದ ಚೀಲವನ್ನು ತೆಗೆದುಕೊಂಡು ಹೋಗುತ್ತೇನೆ. ನಾನು ಆಹಾರದ ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ, ಮಾಂಸಹಾರಕ್ಕೆ ಬಳಸಿದ ಸೌಟ್‌() ಗಳನ್ನೇ ಸಸ್ಯಾಹಾರಿ ತಿನಿಸುಗಳ ತಯಾರಿಗೆ ಅಥವಾ ಬಡಿಸಲು ಬಳಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಇದೇ ಕಾರಣಕ್ಕೆ ತಾನು ಈ ವಿಚಾರದಲ್ಲಿ ಯಾವುದೇ ತೊಂದರೆ ತೆಗೆದುಕೊಳ್ಳಲು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಆಹಾರ ಸಂಸ್ಕೃತಿ ಬಗ್ಗೆ ಅವರಾಡಿದ ಮಾತುಗಳು ವಿವಾದ ಸೃಷ್ಟಿಸಿದೆ. ಒಂದು ಗುಂಪು ಸುಧಾಮೂರ್ತಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ಮತ್ತೊಂದು ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾರಂಭಿಸಿದೆ. : ಹಣ ಬರ್ತಿದ್ದಂತೆ ಇದನ್ನು ಕಳ್ಕೊಂಡೆ ಎನ್ನುತ್ತಾರೆ ಸುಧಾಮೂರ್ತಿ, ಏನದು? ರೇಷ್ಮೆ ಸೀರೆ ಹೇಗೆ ತಯಾರಾಗುತ್ತೆ ಗೊತ್ತಿದ್ಯಾ? ಸುಧಾಮೂರ್ತಿ ಮತ್ತೆ ಟ್ರೋಲ್‌!ಸುಧಾ ಮೂರ್ತಿ ಎಲ್ಲಿ ಹೋದರೂ ಸೀರೆಯನ್ನೇ ಉಡುತ್ತಾರೆ. ವಿದೇಶಕ್ಕೆ ಹೋದಾಗಲೂ ಅವರು ರೇಷ್ಮೆ ಸೀರೆಯನ್ನೇ ಉಡುವ ಮೂಲಕ ಇಲ್ಲಿನ ನೆಲದ ಸಂಪ್ರದಾಯದ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಆಹಾರದ ವಿಚಾರದಲ್ಲಿ ಸುಧಾ ಮೂರ್ತಿ ಅವರು ನೀಡಿದ ಹೇಳಿಕೆ ಬಳಿಕ ಅವರ ಸೀರೆಯ ಬಗ್ಗೆಯೂ ಟ್ರೋಲ್ ಮಾಡಲಾಗಿದೆ. ಟ್ವಿಟ್ಟರ್ ಬಳಕೆದಾರ 'ಡ್ರಂಕ್ ಜರ್ನಲಿಸ್ಟ್' ಎಂಬವರು 'ರೇಷ್ಮೆ ಸೀರೆ' ಧರಿಸಿದ್ದಕ್ಕಾಗಿ ಸುಧಾ ಮೂರ್ತಿ ಅವರನ್ನು ಟೀಕಿಸಿದ್ದಾರೆ. ಡ್ರಂಕ್‌ ಜರ್ನಲಿಸ್ಟ್ ಹೆಸರಿನ ಟ್ವಿಟ್ಟರ್‌ ಖಾತೆಯಲ್ಲಿ ಸುಧಾಮೂರ್ತಿ ಅವರು ಹಸಿರು ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದು, ಈ ರೇಷ್ಮೆ ಸೀರೆಗಳನ್ನು ಯಾವುದರಿಂದ ತಯಾರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್‌ ನಂತರ ಅನೇಕರು ರಿಟ್ವೀಟ್ ಮಾಡಿ ಸುಧಾ ಮೂರ್ತಿ ಅವರನ್ನು ಟ್ರೋಲ್ ಮಾಡಿದ್ದಾರೆ. 'ಈ ಪ್ರಶ್ನೆಯನ್ನು ಖಂಡಿತವಾಗಿಯೂ ಸುಧಾಮೂರ್ತಿಯವರನ್ನು ಕೇಳಬೇಕು' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.